ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 2 ರೂಪಾಯಿಯಷ್ಟು ಇಳಿಕೆ
ಈ ಹಿಂದೆ ಮೇ 1ರಂದು ಪೆಟ್ರೋಲ್ ಬೆಲೆಯಲ್ಲಿ ಎರಡು ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 52 ಪೈಸೆ ಏರಿಕೆಯಾಗಿತ್ತು. ಅದಕ್ಕೂ ಮೊದಲು ಏಪ್ರಿಲ್ 16ರಂದು ಪೆಟ್ರೋಲ್ 1.39 ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ ರೂಪಾಯಿ 1.04 ಏರಿಕೆಯಾಗಿತ್ತು.
ನವದೆಹಲಿ, ಮೇ 15: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಈ ಬಾರಿ ಇಳಿಕೆಯಾಗಿದೆ. ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಈ ಇಳಿಕೆ ಮಾಡಲಾಗಿದೆ. ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಇದು ಒಂದಷ್ಟು ನೆಮ್ಮದಿ ತರಲಿದೆ.
ಪೆಟ್ರೋಲ್ ಬೆಲೆಯಲ್ಲಿ ಬರೋಬ್ಬರಿ 2.16 ರೂಪಾಯಿ ಇಳಿಕೆಯಾಗಿದೆ. ಇದೇ ವೇಳೆ ಡೀಸೆಲ್ ಬೆಲೆಯಲ್ಲೂ ರೂಪಾಯಿ 2.10 ಕಡಿತವಾಗಿದೆ.

ಈ ಹಿಂದೆ ಮೇ 1ರಂದು ಪೆಟ್ರೋಲ್ ಬೆಲೆಯಲ್ಲಿ ಎರಡು ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 52 ಪೈಸೆ ಏರಿಕೆಯಾಗಿತ್ತು. ಅದಕ್ಕೂ ಮೊದಲು ಏಪ್ರಿಲ್ 16ರಂದು ಪೆಟ್ರೋಲ್ 1.39 ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ ರೂಪಾಯಿ 1.04 ಏರಿಕೆಯಾಗಿತ್ತು.
ಇನ್ನು ವ್ಯಾಟ್ ಗಣನೆಗೆ ತೆಗೆದುಕೊಂಡರೆ ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ. ಅಂತಾರಾಷ್ಟ್ರೀಯ ಕಚ್ಚಾತೈಲ ದರ ಹಾಗೂ ರೂಪಾಯಿ-ಡಾಲರ್ ಮೌಲ್ಯವನ್ನು ಆಧರಿಸಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಈ ವ್ಯತ್ಯಾಸವಾಗಿದೆ.

Click it and Unblock the Notifications