ಸೆ.15ರಿಂದ ಪೆಟ್ರೋಲ್ ದರ ಇಳಿಕೆ ಸಾಧ್ಯತೆ!

ಈ ಕುರಿತು ಮಾಹಿತಿ ನೀಡಿರುವ ಪೆಟ್ರೋಲಿಯಂ ಸಚಿವಾಲಯ ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕುಸಿದಿದೆ. ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಏರಿಕೆಯಾಗುತ್ತಿದೆ. ಆದ್ದರಿಂದ, ಲೀಟರ್ ಪೆಟ್ರೋಲ್ ಬೆಲೆ 1ರಿಂದ 1.50 ರೂ. ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಪೆಟ್ರೋಲ್ ಮೇಲೆ ರಾಜ್ಯಗಳು ವಿಧಿಸಿರುವ ತೆರಿಗೆಯನ್ನೂ ಸೇರಿಸಿದರೆ, ಒಟ್ಟಾರೆ ಪೆಟ್ರೋಲ್ ಬೆಲೆ 2 ರೂ. ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ. ಸೆ.15ರ ಮಧ್ಯರಾತ್ರಿಯಿಂದ ನೂತನ ದರ ಜಾರಿಗೆ ಬರಲಿದೆ ಎಂದು ಸಚಿವಾಲಯ ತಿಳಿಸಿದೆ.
ಆದರೆ, ಡೀಸೆಲ್ ಮತ್ತು ಎಲ್ ಪಿಜಿ ದರ ಏರಿಕೆ ಮಾಡಲು ಸಚಿವಾಲಯ ಚಿಂತನೆ ನಡೆಸಿದೆ. ಈ ಕುರಿತು ಸೆ.16ರಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಒಂದು ಬಾರಿ ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆ ಮಾಡುವ ವಿಚಾರ ಸಚಿವಾಲಯದ ಮುಂದಿದೆ. ಆರ್ಥಿಕ ಹಿತದೃಷ್ಟಿಯಿಂದ ಇಂತಹ ಕ್ರಮ ಅನಿವಾರ್ಯವಾಗಿದೆ ಎಂದು ತೈಲ ಕಾರ್ಯದರ್ಶಿ ವಿವೇಕ್ ರೇ ಹೇಳಿದ್ದಾರೆ.
ಸದಾ ಪೆಟ್ರೋಲ್ ಬೆಲೆ ಹೆಚ್ಚಳವಾಯಿತು ಎಂದು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದ ಜನರಿಗೆ ಪೆಟ್ರೋಲ್ ಬೆಲೆ ಇಳಿಕೆ ನಿಜಕ್ಕೂ ಶುಭ ಸುದ್ದಿ. ಆದರೆ, ಡೀಸೆಲ್ ಮತ್ತು ಅಡುಗೆ ಅನಿಲದ ದರ ಹೆಚ್ಚಳ ಮಾಡುಲ ಮೂಲಕ ಪರೋಕ್ಷವಾಗಿ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕಬಹುದು.











Click it and Unblock the Notifications