Petrol Price Hike : ಭಾರತದಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚಳ ಸಾಧ್ಯತೆ? ಕಾರಣ ಇಲ್ಲಿದೆ

ಟರ್ಕಿಯ ಸೆಹಾನ್‌ನಲ್ಲಿ ತೈಲ ಹರಿವು ಸ್ಥಗಿತಗೊಂಡ ಕಾರಣ ಸೋಮವಾರ ಕಚ್ಚಾ ತೈಲ ಬೆಲೆಗಳು ತಕ್ಷಣವೇ ಏರಿಕೆ ಕಂಡಿವೆ.

ನವದೆಹಲಿ, ಫೆಬ್ರವರಿ 8: ಟರ್ಕಿಯ ಪೂರ್ವ ಪ್ರದೇಶದಲ್ಲಿ ಸಂಭವಿಸಿದ ಎರಡು ಭೂಕಂಪಗಳು ವಿಶ್ವಾದ್ಯಂತ ಕಚ್ಚಾ ತೈಲ ರಫ್ತಿನ ಮೇಲೆ ಪರಿಣಾಮ ಬೀರಿವೆ. ಮುಂಜಾಗ್ರತಾ ಕ್ರಮವಾಗಿ ಮೆಡಿಟರೇನಿಯನ್ ಕರಾವಳಿಯಲ್ಲಿರುವ ಸೆಹಾನ್ ರಫ್ತು ಟರ್ಮಿನಲ್‌ಗೆ ಕಚ್ಚಾ ತೈಲ ಹರಿವನ್ನು ಟರ್ಕಿ ಈಗಾಗಲೇ ಸ್ಥಗಿತಗೊಳಿಸಿದೆ.

ಮೊದಲ ಭೂಕಂಪ ಸಂಭವಿಸಿದ ಕೂಡಲೇ ರಾಜ್ಯದ ಪೈಪ್‌ಲೈನ್ ಆಪರೇಟರ್ BOTAS ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸೆಹಾನ್‌ನಲ್ಲಿ ತೈಲ ಹರಿವು ಸ್ಥಗಿತಗೊಂಡ ಕಾರಣ ಸೋಮವಾರ ಕಚ್ಚಾ ತೈಲ ಬೆಲೆಗಳು ತಕ್ಷಣವೇ ಏರಿದವು. ಸೆಹಾನ್ ಬಂದರು ಮಧ್ಯಪ್ರಾಚ್ಯ ಮತ್ತು ಮಧ್ಯ ಏಷ್ಯಾದ ತೈಲ ಮತ್ತು ನೈಸರ್ಗಿಕ ಅನಿಲಕ್ಕೆ ಪ್ರಮುಖ ಕೇಂದ್ರವಾಗಿದೆ.

ಸೆಹಾನ್‌ ನಗರವು ಕುಕ್ರೊವಾಪ್ಲೈನ್ ​​ಮೂಲಕ ಹರಿಯುವ ಸೆಹಾನ್ ನದಿಯ ಮೇಲೆ ನೆಲೆಗೊಂಡಿದೆ. ಬಂದರು ಜನವರಿಯಲ್ಲಿ ದಿನಕ್ಕೆ 1 ಮಿಲಿಯನ್ ಬ್ಯಾರೆಲ್‌ಗಳನ್ನು ರಫ್ತು ಮಾಡಿದೆ. ಬ್ಲೂಮ್‌ಬರ್ಗ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಜಾಗತಿಕ ಪೂರೈಕೆಯ 1% ರಷ್ಟಾಗಿದೆ. ಬಂದರಿಗೆ ಹರಿವು ನೀಡುವ ಪೈಪ್‌ಲೈನ್‌ಗಳಲ್ಲಿ ಯಾವುದೇ ಸೋರಿಕೆ ಕಂಡುಬಂದಿಲ್ಲವಾದರೂ, ರಾಜ್ಯದ ನೈಸರ್ಗಿಕ ಅನಿಲವನ್ನು ಪೂರೈಸುವ ಪೈಪ್ ಒಡೆದಿದೆ. ಬೃಹತ್ ಸ್ಫೋಟದ ಭಯಾನಕ ದೃಶ್ಯಗಳನ್ನು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

Petrol price hike likely in India, Heres the reason

ಟರ್ಕಿಯಲ್ಲಿ ಪ್ರಮುಖ ರಫ್ತು ಟರ್ಮಿನಲ್ ಸ್ಥಗಿತಗೊಂಡ ನಂತರ ಪೂರೈಕೆ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತೈಲಕ್ಕಾಗಿ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯನ್ನು ಚೀನಾ ಪೂರೈಸುತ್ತದೆ ಎಂಬ ಆಶಾವಾದವು ಹೆಚ್ಚುತ್ತಿದೆ. ಈ ವರ್ಷದ ಜಾಗತಿಕ ತೈಲ ಬೇಡಿಕೆ ಬೆಳವಣಿಗೆಯ ಅರ್ಧದಷ್ಟು ಚೀನಾದಿಂದ ಪೂರೈಕೆಯಾಗಲಿದೆ ಎಂದು ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ ಭವಿಷ್ಯ ನುಡಿದಿದೆ.

ಚೀನಾ, ಸೌದಿ ಅರೇಬಿಯಾದಿಂದ ತೈಲ ಚೇತರಿಕೆಯ ಈ ನಿರೀಕ್ಷೆಯ ನಡುವೆ ವಿಶ್ವದ ಅಗ್ರ ತೈಲ ರಫ್ತುದಾರ ಕಳೆದ ಆರು ತಿಂಗಳಲ್ಲಿ ಏಷ್ಯಾದ ಖರೀದಿದಾರರಿಗೆ ಮೊದಲ ಬಾರಿಗೆ ತನ್ನ ಪ್ರಮುಖ ಕಚ್ಚಾ ತೈಲದ ಬೆಲೆಗಳನ್ನು ಹೆಚ್ಚಿಸಿದೆ. ರಷ್ಯಾ ಈಗ ಭಾರತಕ್ಕೆ ದಿನಕ್ಕೆ ಅತಿ ಹೆಚ್ಚು ಬ್ಯಾರೆಲ್‌ಗಳನ್ನು ರಫ್ತು ಮಾಡುತ್ತಿದ್ದರೂ, ಭಾರತವು ಇರಾಕ್ ಜೊತೆಗೆ ಸೌದಿ ಅರೇಬಿಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಸೌದಿ ಅರೇಬಿಯಾ ಮತ್ತೆ ಕಚ್ಚಾ ತೈಲ ಬೆಲೆಯನ್ನು ಹೆಚ್ಚಿಸುವುದರೊಂದಿಗೆ, ಇದು ಭಾರತದಲ್ಲಿಯೂ ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.

Petrol price hike likely in India, Heres the reason

ಭಾರತದಲ್ಲಿ ನಿನ್ನೆಯವರೆಗೆ ಅಂದರೆ ಫೆಬ್ರವರಿ 6 ರವರೆಗೆ, ದೆಹಲಿಯಲ್ಲಿ ತೈಲ ಬೆಲೆ 96.72/ಲೀ ಇತ್ತು. ಡೀಸೆಲ್ ಬೆಲೆ ರೂ 89.62/ಲೀ ಇತ್ತು. ಮುಂಬೈನಲ್ಲಿ ಪೆಟ್ರೋಲ್ ಬೆಲೆ 106.31/ಲೀ, ಮತ್ತು ಡೀಸೆಲ್ ಬೆಲೆ ರೂ 94.27/ಲೀ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.03/ಲೀ, ಡೀಸೆಲ್ ಬೆಲೆ ರೂ. 92.76, ಮತ್ತು ಬೆಂಗಳೂರಿನಲ್ಲಿ, ಪೆಟ್ರೋಲ್‌ಗೆ ರೂ 101.94/ಲೀ, ಮತ್ತು ರೂ 87.89/ಲೀಟರ್‌ಗೆ ಬೆಲೆ ಇತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+