ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಮತ್ತೆ ತಲಾ 2 ರೂಪಾಯಿ ಅಗ್ಗ

|
Google Oneindia Kannada News

ನವದೆಹಲಿ, ಜ. 16 : ನಿರೀಕ್ಷೆಯಂತೆ ತೈಲ ಬೆಲೆ ಕಡಿಮೆಯಾಗಿದೆ, ಪೆಟ್ರೋಲ್ ಲೀಟರ್ ಗೆ 2.42 ರೂ. ಕಡಿಮೆಯಾಗಿದ್ದು, ಡೀಸೆಲ್ 2.25 ರೂ. ಕಡಿಮೆಯಾಗಿದೆ. ಇದರಿಂದ ಜನರಿಗೆ ಸಂಕ್ರಾಂತಿ ಕೊಡುಗೆ ಕೊಂಚ ವಿಳಂಬವಾಗಿ ಸಿಕ್ಕಂತಾಗಿದೆ.

ಜನವರಿ 1, ಹೊಸ ವರ್ಷದಂದು ತೈಲ ಬೆಲೆಯಲ್ಲಿ ಇಳಿಕೆಯಾಗಿತ್ತು. ಈಗ ಮತ್ತೆ ತಲಾ ಎರಡೆರಡು ರೂ. ಕಡಿಮೆಯಾಗಿದ್ದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಜನವರಿ 15 ರಂದು ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು 2 ರೂ. ಹೆಚ್ಚಿಸಿತ್ತು. ಆದರೂ ಭಾರತಿಯರಿಗೆ ಇಳಿಕೆ ಭಾಗ್ಯ ದೊರೆತಿದೆ.[ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]

petrol

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ಕಚ್ಚಾ ತೈಲದ ಬೆಲೆ 45 ಡಾಲರ್ ಗಿಂತ ಕಡಿಮೆಯಾಗಿರುವುದು ತೈಲ ಬೆಲೆ ಇಳಿಕೆಗೆ ಮುಖ್ಯ ಕಾರಣ. ಇದರೊಂದಿಗೆ ಷೇರು ಮಾರುಕಟ್ಟೆ ಏರಿಳಿತ, ರೂಪಾಯಿ ಸ್ಥಿರತೆ ಸಹ ದರ ಇಳಿಯಲು ನೆರವಾಗಿದೆ.[ಹೊಸ ವರ್ಷಕ್ಕೆ ಮತ್ತಷ್ಟು ಅಗ್ಗವಾಯ್ತು ಪೆಟ್ರೋಲ್, ಡೀಸೆಲ್]

ಬೆಂಗಳೂರಿನಲ್ಲಿ ಬೆಲೆ ಎಷ್ಟಾಗುತ್ತೆ? ಕಳೆದ ಬಾರಿ ಅಂದರೆ ಜನವರಿ 1 ರಂದು ಕೊನೆಯದಾಗಿ ತೈಲ ಬೆಲೆ ಇಳಿಕೆ ಮಾಡಲಾಗಿತ್ತು. ಅದರಂತೆ ಬೆಂಗಳೂರಿಗರು ಪೆಟ್ರೋಲ್‌ಗೆ 65.27 ರೂ. ನೀಡಬೇಕಾಗಿತ್ತು. ಅಂತೆಯೇ ಡಿಸೇಲ್‌ಗೆ 52.88 ರೂ. ನೀಡಬೇಕಿತ್ತು. ಆದರೆ ಈಗ ಇಳಿಕೆಯ ನಂತರ ಬೆಂಗಳೂರಿಗರು ಪೆಟ್ರೋಲ್ ಗೆ 62.82 ರೂ. ಮತ್ತು ಡಿಸೇಲ್ ಗೆ 50.63 ರೂ. ನೀಡಿದರೆ ಸಾಕು.

English summary
Petrol and diesel prices were cut on Friday as international oil prices slumped to nearly six-year lows. Petrol price was cut by Rs 2.42 per litre, while the price of diesel was reduced by Rs 2.25 per litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X