ಒಂದು ತಿಂಗಳಲ್ಲಿ 7.29 ರೂಪಾಯಿ ಇಳಿದ ಪೆಟ್ರೋಲ್ ಬೆಲೆ

Recommended Video

      ಒಂದು ತಿಂಗಳಲ್ಲಿ ಪೆಟ್ರೋಲ್ ದರ 7.29 ರೂಗೆ ಇಳಿಕೆ | Oneindia Kannada

      ನವದೆಹಲಿ, ನವೆಂಬರ್ 20: ಕಳೆದ ಕೆಲ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿದಿನ ಇಳಿಕೆ ಆಗುತ್ತಿದ್ದು, ಕಳೆದ 29 ದಿನಗಳಲ್ಲಿ ಪೆಟ್ರೋಲ್ ದರ ಒಂದು ತಿಂಗಳಿಗೆ 7.29 ರೂಪಾಯಿಗಳು ಇಳಿದಿದೆ.

      ಭಾರಿ ಏರಿಕೆಯಾಗಿ ಆತಂಕ ಹುಟ್ಟಿಸಿದ್ದ ಪೆಟ್ರೋಲ್ , ಡೀಸೆಲ್ ದರಗಳು ಕೆಲವು ದಿನಗಳಿಂದ ಇಳಿಕೆಯತ್ತ ಮುಖಮಾಡಿರುವುದು ಗ್ರಾಹಕರಲ್ಲಿ ಸಮಾಧಾನ ತಂದಿದೆ.

      ಕಳೆದ 29 ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 7.29 ರೂಪಾಯಿ ಇಳಿಕೆ ಆಗಿದ್ದರೆ. ಡೀಸೆಲ್ ಲೀಟರ್‌ಗೆ 3.89 ರೂಪಾಯಿ ಇಳಿಕೆ ಆಗಿದೆ. ಪೆಟ್ರೋಲ್ ದರವು ಆಗಸ್ಟ್‌ ತಿಂಗಳಲ್ಲಿ ಇದ್ದ ಬೆಲೆಗೆ ಬಂದು ನಿಂತಿದೆ.

      Petrol price down by rs 7.29 in 29 days

      ನವೆಂಬರ್ 20ರಂದು ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 76.99 ರೂಪಾಯಿ ಇದೆ. ಡೀಸೆಲ್ ಬೆಲೆ 71.65 ರೂಪಾಯಿ ಇದೆ. ದೆಹಲಿಯಲ್ಲಿ ಡೀಸೆಲ್‌ ಬೆಲೆ ಲೀಟರ್‌ಗೆ 71.27 ರೂಪಾಯಿ ಇದ್ದರೆ, ಪೆಟ್ರೋಲ್ ಬೆಲೆ 76.38 ರೂಪಾಯಿ ಇದೆ.

      ತಿಂಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ ಆಗಿ ಜನಾಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ಇದರ ವಿರುದ್ಧ ಭಾರಿ ಪ್ರತಿಭಟನೆ ಮಾಡಿದ್ದವು. ಆಗ ಎಚ್ಚೆತ್ತ ಕೇಂದ್ರವು ಅಬಕಾರಿ ಸುಂಕ ಮತ್ತು ಕಮಿಷನ್ ಕಡಿತ ಮಾಡಿದ್ದವು.

      ಅದಾದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿಯೇ ಇಂಧನ ಬೆಲೆ ಇಳಿಕೆ ಆಗುತ್ತಿರುವ ಪರಿಣಾಮ ಪ್ರತಿದಿನವೂ ನಿಯಮಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಯುತ್ತಿವೆ.

      ಪಂಚ ರಾಜ್ಯಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಸಮೀಪದಲ್ಲಿರುವ ಸಮಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ಆಗುತ್ತಿರುವುದು ಸಹಜವಾಗಿಯೇ ಬಿಜೆಪಿಗೆ ಸಂತಸ ತಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+