ಕೊಂಚ ಇಳಿಮುಖವಾದ ಪೆಟ್ರೋಲ್, ಡೀಸೆಲ್ ಬೆಲೆ
ಬೆಂಗಳೂರು, ಜೂನ್ 08: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ ಹಲವು ದಿನಗಳ ನಂತರ ಕ್ರಮವಾಗಿ 22 ಮತ್ತು 16 ಪೈಸೆಯಷ್ಟು ಕಡಿಮೆಯಾಗಿದೆ.
ದಿನೇ ದಿನೇ ಏರುತ್ತಲೇ ಇರುವ ಇಂಧನ ಬೆಲೆಯಿಂದಾಗಿ ವಾಹನಗಳ ಸಹವಾಸವೇ ಸಾಕು ಎಂದು ಸಾರ್ವಜನಿಕ ಸಾರಿಗೆಯ ಮೇಲೆ ಅವಲಂಬಿತವಾಗುವ ಪರಿಸ್ಥಿಯ ಗ್ರಾಹಕನಿಗೆ ಬಂದೊದಗಿತ್ತು. ಆದರೆ ಇದೀಗ ಪೆಟ್ರೋಲ್ ಬೆಲೆ ಇಳಿಯುವ ಲಕ್ಷಣಗಳು ಕಂಡುಬರುತ್ತಿದ್ದು, ಗ್ರಾಹಕ ಕೊಂಚ ನಿರಾಳತೆಯ ನಿಟ್ಟುಸಿರು ಬಿಟ್ಟಿದ್ದಾನೆ.
ಪರಿಷ್ಕೃತ ದರದ ಪ್ರಕಾರ ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 78.68 ರೂ. ಇದ್ದರೆ, ಡೀಸೆಲ್ ಬೆಲೆ ಲೀ.ಗೆ 69.76 ರೂ. ಇದೆ. ಅಂತೆಯೇ ದೇಶದ ಇತರ ಮಹಾನಗರಗಳಾದ ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ಕ್ರಮವಾಗಿ, 77.42 ರೂ., 80.07 ರೂ., 85.24 ರೂ., ಮತ್ತು 80.37 ರೂ., ಇದೆ.

ಡೀಸೆಲ್ ಬೆಲೆ ಈ ಮಹಾನಗರಗಳಲ್ಲಿ ಕ್ರಮವಾಗಿ ಪ್ರತಿ ಲೀಟರ್ ಗೆ 68.58 ರೂ., 71.13 ರೂ., 73.02 ರೂ. ಮತ್ತು 72.40 ರೂ. ಇದೆ.












Click it and Unblock the Notifications