70 ರೂ. ಗಡಿ ಬಿಟ್ಟು ಕೆಳಗಿಳಿದ ಪೆಟ್ರೋಲ್
ನವದೆಹಲಿ, ನ. 30: ನಾಗರಿಕರಿಗೆ ಕೇಂದ್ರ ಸರ್ಕಾರ ಮತ್ತೆ ಸಿಹಿ ಸುದ್ದಿ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು ನವೆಂಬರ್ 30 ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಪ್ರತೀ ಲೀಟರ್ ಪೆಟ್ರೋಲ್ ಗೆ 91 ಪೈಸೆ, ಡೀಸೆಲ್ ಗೆ 84 ಪೈಸೆ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಗಣನೀಯ ಇಳಿಕೆಯಾಗಿದ್ದು ದೇಶಿಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.[ಸಂಚಾರಿ ನಿಯಮ ಪಾಲಿಸಿದರೆ ಪೆಟ್ರೋಲ್ ಬಹುಮಾನ..!]

ಬೆಂಗಳೂರಿನಲ್ಲಿ ಬೆಲೆ ಎಷ್ಟಾಗುತ್ತೆ?
ಬೆಂಗಳೂರಿಗರು ಇಲ್ಲಿಯವೆರೆಗೆ ಲೀಟರ್ ಪಟ್ರೋಲ್‌ಗೆ 70.45 ರೂಪಾಯಿ ನೀಡಬೇಕಿತ್ತು. ಅಂತೆಯೇ ಡಿಸೇಲ್‌ಗೆ 57.94 ರೂ. ನೀಡಬೇಕಿತ್ತು. ಈ ಇಳಿಕೆ ಭಾಗ್ಯದ ನಂತರ ಪೆಟ್ರೋಲ್ ಗೆ 69. 54 ರೂ. ಮತ್ತು ಡಿಸೇಲ್ ಗೆ 57.10 ನೀಡಿದರೆ ಸಾಕು.[ತೈಲ ಬೆಲೆ ಇಳಿಕೆಯಿಂದ ರಾಜ್ಯಕ್ಕೆ 400 ಕೋಟಿ ನಷ್ಟ]
ಒಟ್ಟಿನಲ್ಲಿ ಪೆಟ್ರೋಲ್ 70 ರ ಗಡಿ ಬಿಟ್ಟು ಕೆಳಗೆ ಇಳಿದಿದೆ. ಡಿಸೇಲ್ ಬೆಲೆಯಲ್ಲೂ ಕೊಂಚ ಇಳಿಕೆಯಾಗಿರುವುದು ಆಹಾರ ವಸ್ತುಗಳ ಸಾಗಾಟದ ವೆಚ್ಚವನ್ನು ಕಡಿಮೆ ಮಾಡಬಹುದು. ಕಳೆಸ ಆಗಸ್ಟ್ ತಿಂಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿರಂತರವಾಗಿ ಇಳಿಯುತ್ತಿದೆ. ಬ್ಯಾರಲ್ ಗೆ 80 ಡಾಲರ್ ಗಿಂತ ಹೆಚ್ಚಿದ ಕಚ್ಚಾತೈಲ ಇದೀಗ 67 ಡಾಲರ್ ಗೆ ಬಂದು ತಲುಪಿದೆ. ಇದೆಲ್ಲದರ ಪರಿಣಾಮ ಭಾರತಕ್ಕೂ ತೈಲ ಬೆಲೆ ಇಳಿಕೆ ಲಾಭ ಸಿಕ್ಕಿದೆ.












Click it and Unblock the Notifications