Get Updates
Get notified of breaking news, exclusive insights, and must-see stories!

New Rule: ಏಪ್ರಿಲ್ ತಿಂಗಳಿನಿಂದಲೇ 15 ವರ್ಷದ ಹಳೆಯ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಪೂರೈಕೆ ಬಂದ್

ವಾಹನಗಳಿಗೆ ಸಂಬಂಧಪಟ್ಟಂತೆ ಆಗಾಗ ಹೊಸ ನಿಯಮಗಳು ಜಾರಿಯಾಗುತ್ತಲೇ ಇರುತ್ತವೆ. ಹಾಗೆಯೇ ಇದೀಗ ಹಳೇ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಗೆ ನಿರ್ಬಂಧ ಹೇರಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗದ್ರೆ ಈ ನಿಯಮ ಎಲ್ಲಿ ಜಾರಿಯಾಗಲಿದೆ ಹಾಗೂ ಕಾರಣ ಏನ್ನುವ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ರಾಷ್ಟ್ರ ರಾಜಧಾನಿ ದೆಹಲಿಯಯಲ್ಲು ಹಳೇ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ನಿರ್ಬಂಧ ಸೇರಿದ ಎಲ್ಲಾ ಬಹುಮಹಡಿ ಕಟ್ಟಡಗಳು, ಹೋಟೆಲ್‌ಗಳು ಮತ್ತು ಕಮರ್ಷಿಯಲ್ ಕಾಂಪ್ರೆಕ್ಸ್‌ಗಳಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಅಳವಡಿಬೇಕೆಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಘೋಷಣೆ ಮಾಡಿದ್ದಾರೆ.

Petrol diesel Supply Ban for 15-Year-Old Vehicles from April Know reason

ನಾವು ಪೆಟ್ರೋಲ್ ಪಂಪ್‌ಗಳಲ್ಲಿ ಗ್ಯಾಜೆಟ್‌ಗಳನ್ನು ಸ್ಥಾಪಿಸುತ್ತಿದ್ದೇವೆ. ಅದು 15 ವರ್ಷಕ್ಕಿಂತ ಹಳೇ ವಾಹನಗಳನ್ನು ಗುರುತಿಸುತ್ತದೆ. ಅವುಗಳಿಗೆ ಯಾವುದೇ ಪೆಟ್ರೋಲ್ ಅಥವಾ ಡೀಸೆಲ್ ಪೂರೈಸುವುದಿಲ್ಲ ಎಂದು ನವದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಎದುರಿಸಲು ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ನವದೆಹಲಿಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳನ್ನು ರಸ್ತೆಗಳಲ್ಲಿ ಅಡ್ಡಾಡುವುದನ್ನು ನಿರ್ಬಂಧಿಸುವ ನೀತಿಯನ್ನು ಹೊಂದಿದೆ. 2021ರ ಆದೇಶದಲ್ಲಿ 2022ರ ಜನವರಿ 1ರ ನಂತರ ರಸ್ತೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದರೆ ಅಂತಹ ವಾಹನಗಳನ್ನು ವಶಪಡಿಸಿಕೊಂಡು ಸ್ಕ್ರ್ಯಾಪ್‌ಯಾರ್ಡ್‌ಗೆ ಕಳುಹಿಸಲಾಗುವುದು ಎಂದು ಹೇಳಲಾಗಿತ್ತು.

ಆದ್ದರಿಂದ ಇದೇ ಮಾರ್ಚ್ 31, 2025ರ ಬಳಿಕ ದೆಹಲಿ ಸರ್ಕಾರವು ನಗರದಾದ್ಯಂತದ ಇಂಧನ ಕೇಂದ್ರಗಳಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ಪೂರೈಸುವುದನ್ನು ನಿಲ್ಲಿಸಲಿದೆ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಘೋಷಣೆ ಮಾಡಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಎದುರಿಸಲು ಕ್ರಮಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ, ವಾಹನ ಹೊರಸೂಸುವಿಕೆ ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಶೇಕಡ 90ರಷ್ಟು ಸಾರ್ವಜನಿಕ ಸಿಎನ್‌ಜಿ ಬಸ್‌ಗಳನ್ನು ಡಿಸೆಂಬರ್ 2025ರ ವೇಳೆಗೆ ಸ್ಥಗಿತಗೊಳಿಸಲಾಗುವುದು. ಅವುಗಳನ್ನು ಎಲೆಕ್ಟ್ರಿಕ್ದ್ ಬಸ್‌ಗಳಾಗಿ ಪರಿವರ್ತಿಸಲಾಗುವುದು. ದೆಹಲಿ ಸರ್ಕಾರವು ಈ ನಿರ್ಧಾರದ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ತಿಳಿಸಲಿದೆ ಎಂದು ತಿಳಿದುಬಂದಿದೆ.

ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯದಿಂದ ಗಾಲಿಯ ಗುಣಮಟ್ಟ ಹದಗೆಡುತ್ತಿದೆ. ಇದರಿಂದ ವಾಹನ ಸವಾರರಿಗೆ ಅಡೆತಡೆ ಉಂಟಾಗುತ್ತಿದೆ. ಅಲ್ಲದೆ, ಇಲ್ಲಿನ ಜನರು ಕೂಡ ಕಳಪೆ ಮಟ್ಟದ ಗಾಳಿಯಿಂದ ಬೇಸತ್ತು ಹೋಗಿದ್ದಾರೆ. ಮಳೆ ಬಂದಾಗ ಮಾತ್ರ ವಾಯುಮಾಲಿನ್ಯ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ. ಇಲ್ಲದಿದ್ದರೆ ಅದೇ ಆಡಿದ್ದೇ ಆಟ ಎಂಬಂತೆ ಗಾಳಿಯ ಗುಣಮಟ್ಟ ಕಳಪೆಯಾಗಿರಲಿದೆ.

ದೆಹಲಿಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಲ ಇದೆ. ಇದು ಕೂಡ ವಾಯು ಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಹಳೇ ವಾಹನಗಳ ಗಾಳಿ ಗುಣಮಟ್ಟವನ್ನು ಆಗಾಗ ಪರಿಶೀಲನೆ ಮಾಡಿಸದೇ ರಸ್ತೆಗೆ ಇಳಿಸುವುದು ಕೂಡ ವಾಯುಮಾಲಿನ್ಯಕ್ಕೆ ಕಾರಣವಾಗಿದೆ.

ಇದೀಗ ನವದೆಹಲಿಯಲ್ಲಿ ಮೋಡ ಕವಿದ ವಾತಾವರಣ ಜೊತೆ ಗಾಳಿಯ ಗುಣಮಟ್ಟ ಕೂಡ ಕಳಪೆಯಾಗುತ್ತಿದ್ದು, ಇದರಿಂದ ವಾಹನ ಸವಾರರಿಗೆ ಅಡೆತಡೆ ಆಗುತ್ತಲೇ ಇದೆ. ಇನ್ನೂ ಒಂದು ಮಟ್ಟಿದೆ ಸದ್ಯ ಮಳೆಯಾಗುತ್ತಿರುವ ಹಿನ್ನೆಲೆ ಹಲವೆಡೆ ವಾಯು ಮಾಲಿನ್ಯ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಾಗಂತ ಪೂರ್ತಿ ಕಡಿಮೆಯಾಗಿಲ್ಲ. ದೇಶದಲ್ಲೇ ಅತೀ ಹೆಚ್ಚು ವಾಯುಮಾಲಿನ್ಯದಿಂದ ಕೂಡಿರುವ ನಗರಗಳ ಸಾಲಿನಲ್ಲಿ ನವದೆಹಲಿ ಅಗ್ರಸ್ಥಾನದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+