ಪೆಟ್ರೋಲ್, ಡೀಸೆಲ್ ದರ: ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ!

ನವದೆಹಲಿ, ಮಾರ್ಚ್ 16: ಭಾರತದಲ್ಲಿ ಫೆಬ್ರವರಿ.27ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ದೇಶದಲ್ಲಿ 16ನೇ ದಿನವೂ ಇಂಧನ ಬೆಲೆಯು ಸ್ಥಿರತೆಯನ್ನು ಕಾಯ್ದುಕೊಂಡಿದೆ. ಫೆಬ್ರವರಿ.27ರಂದು ಪೆಟ್ರೋಲ್ ದರ 24 ಪೈಸೆ ಮತ್ತು ಡೀಸೆಲ್ ದರ 15 ಪೈಸೆ ಏರಿಕೆಯಾಗಿತ್ತು.

ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರ 91.17 ರೂಪಾಯಿ, ಡೀಸೆಲ್ ದರ 81.47 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀ.ಗೆ 97.57 ಮತ್ತು ಡೀಸೆಲ್ ದರ ಪ್ರತಿ ಲೀ.ಗೆ 88.60 ರೂಪಾಯಿ ಇದೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೆಚ್ಚಿನ ವ್ಯಾಟ್ ನಿಂದಾಗಿ ಪೆಟ್ರೋಲ್ ದರವು ಶತಕ ಬಾರಿಸಿದೆ. ಮಧ್ಯಪ್ರದೇಶದ ಅನುಪ್ಪುರ್ ನಗರದಲ್ಲಿ ಪೆಟ್ರೋಲ್ ದರ ಪ್ರತಿ ಲೀ.ಗೆ 101.59 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀ.ಗೆ 91.97 ರೂಪಾಯಿ ಆಗಿತ್ತು. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಪೆಟ್ರೋಲ್ ದರ ಪ್ರತಿ ಲೀ.ಗೆ 101.84 ರೂಪಾಯಿ ಹಾಗೂ ಡೀಸೆಲ್ ದರ ಪ್ರತಿ ಲೀ.ಗೆ 93.77 ರೂಪಾಯಿ ಆಗಿತ್ತು.

petrol diesel rate stable on 17th day in india: here’s what you pay in major city

2021ನೇ ವರ್ಷದ ಮೊದಲ ಎರಡು ತಿಂಗಳಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದ ಮೇಲೆ 4.87 ರೂಪಾಯಿ ಏರಿಕೆಯಾಗಿತ್ತು. ಡೀಸೆಲ್ ದರವು ಪ್ರತಿ ಲೀ.ಗೆ 4.99 ರೂಪಾಯಿ ಹೆಚ್ಚಳವಾಗಿತ್ತು. ಪ್ರಸ್ತುತ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಯಾವ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ನಗರ ಪೆಟ್ರೋಲ್ ದರ(ಪ್ರತಿ ಲೀ.ಗೆ) ಡೀಸೆಲ್ ದರ(ಪ್ರತಿ ಲೀ.ಗೆ)
ಶ್ರೀ ಗಂಗಾನಗರ 101.84 93.77
ಅನುಪ್ಪುರ್ 101.59 91.97
ನವದೆಹಲಿ 91.17 81.47
ಮುಂಬೈ 97.57 88.60
ಕೋಲ್ಕತ್ತಾ 91.35 84.35
ಚೆನ್ನೈ 93.11 86.45
ಬೆಂಗಳೂರು 94.22 86.37
ಹೈದ್ರಾಬಾದ್ 94.70 88.86
ಪಾಟ್ನಾ 93.48 86.73
ಲಕ್ನೋ 89.31 81.85
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+