ಅತ್ಯಾಚಾರಿಗಳಿಂದ 14 ವರ್ಷದ ಬಾಲಕಿಯನ್ನು ರಕ್ಷಿಸಿದ ಸಾಕು ನಾಯಿ
ಬೆಂಗಳೂರು, ಆಗಸ್ಟ್ 21: ಹದಿನಾಲ್ಕು ವರ್ಷದ ಬಾಲಕಿಯೊಬ್ಬಳನ್ನು ಇಬ್ಬರು ಆಗಂತುಕರು ಅತ್ಯಾಚಾರವೆಸಗುತ್ತಿದ್ದಾಗ ಬಾಲಕಿ ಸಾಕು ನಾಯಿಯೇ ಅತ್ಯಾಚಾರಿಗಳ ಬೆನ್ನಟ್ಟಿ ಓಡಿಸಿ ಓರ್ವ ಆರೋಪಿಯನ್ನು ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಕರೀಲಾ ಎಂಬ ಗ್ರಾಮದಲ್ಲಿ ಶುಕ್ರಮವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಎರಡನೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ವೇಳೆ ಅಪ್ರಾಪ್ತ ಬಾಲಕಿ ತನ್ನ ಸಾಕುನಾಯಿಯೊಂದಿಗೆ ಮನೆಯಿಂದ ಹೊರಗಡೆ ಹೋದಾಗ ಬಾಲಕಿಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಲು ಇಬ್ಬರು ದುಷ್ಕರ್ಮಿಗಳು ಯತ್ನಿಸಿದರು.
ಆಗ ಬಾಲಕಿಯ ಜತೆಗಿದ್ದ ಸಾಕು ನಾಯಿ ಇಬ್ಬರು ಅತ್ಯಾಚಾರಿಗಳನ್ನು ಬೆನ್ನಟ್ಟಿ ಓಡಿಸಿಕೊಂಡು ಹೋಯಿತು ಬಳಿಕ ಆರೋಪಿಯೊಬ್ಬನನ್ನು ಕಚ್ಚಿ ನೆಲಕ್ಕೆ ಬೀಳಿಸಿ ಆತನನ್ನು ಹಿಡಿದಿಟ್ಟುಕೊಂಡಿತ್ತು ಎಂದು ಮೋತಿನಗರ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.

ಐಷು ಅಹಿರ್ವಾರ್ ಹಾಗೂ ಪುನಿತ್ ಅಹಿರ್ವಾರ್ ಎಂಬುವವರು ಬಂಧಿತ ಆರೋಪಿಗಳು, ದುಷ್ಕರ್ಮಿಗಳು ಬಾಲಕಿಗೆ ಚಾಕು ತೋರಿಸಿ ಬೆದರಿಸಿ ನಂತರ ಅವಳ ಮೇಲೆ ಅತ್ಯಾಚಾರ ಎಸಗಿದ್ದಾರೆ. ದುಷ್ಕರ್ಮಿಗಳು ಅತ್ಯಾಚಾರವೆಸಗಲು ಮುಂದಾದಾಗ ಬಾಲಕಿ ಕೂಡಲೇ ಕೂಗಿಕೊಂಡಳು ಆಗ ಜತೆಗಿದ್ದ ನಾಯಿ ಐಷು ಅಹಿರ್ವಾರ್ ಎಂಬ ದುಷ್ಕರ್ಮಿ ಕಾಲಿಗೆ ಕಚ್ಚಿತ್ತು, ಇನ್ನೊಬ್ಬ ಪರಾರಿಯಾಗಿದ್ದ, ಕೈಯಲ್ಲಿದ್ದ ಚಾಕುವಿನಿಂದ ಆರೋಪಿ ನಾಯಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ.
ನಾಯಿ ಕಚ್ಚಿದ ರಭಸಕ್ಕೆ ಬಾಲಕಿ ಬಿಟ್ಟು ಓಡಲು ಯತ್ನಿಸಿದ್ದ ಆದರೆ ನಾಯಿ ಆತನ ಕಾಲು ಕಚ್ಚಿ ಬೀಳಿಸಿದ್ದು ಅಕ್ಕಪಕ್ಕದ ಮನೆಯವರು ಬರುವವರೆಗೂ ಜೋರಾಗಿ ಕೂಗುತ್ತಾ ಆತನನನ್ನು ಹಿಡಿದಿಟ್ಟುಕೊಂಡಿತ್ತು.
ಶುಕ್ರೌಆರ ಘಟನೆ ನಡೆದ ಬಳಿಕ ಬಾಲಕಿ ಪೋಷಕರು, ಶನಿವಾರ ದೂರು ದಾಖಲಿಸಿದ್ದು ಎರಡನೇ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications