ಪಾಟ್ನಾದಲ್ಲಿ ದೋಣಿ ದುರಂತ: ಐವರು ಜಲಸಮಾಧಿ
ಪಾಟ್ನಾ, ಜನವರಿ 31: 15 ಜನರನ್ನು ಹೊತ್ತ ದೋಣಿಯೊಂದು ಬಿಹಾರದ ಪಾಟ್ನಾದ ಫಾತುಹಾ ಎಂಬಲ್ಲಿ ಗಂಗಾ ನದಿಯಲ್ಲಿ ಮುಳುಗಿದ ಕಾರಣ 5 ಜನ ಮೃತಪಟ್ಟಿದ್ದಾರೆ.
ರಕ್ಷಣಾ ಕಾರ್ಯ ನಡೆಯುತ್ತಿದ್ದು, ಗಾಯಗೊಂಡ ಹಲವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ದೋಣಿ ದುರಂತದ ಸುದ್ದಿ ಕೇಳುತ್ತಿದ್ದಂತೆಯೇ ಬಿಹಾರ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದೆ.

ಕಳೆದ ನವೆಂಬರ್ ನಲ್ಲಿ ಆಂಧ್ರಪ್ರದೇಶದ ವಿಜಯವಾಡದ ಕೃಷ್ಣಾ ನದಿಯಲ್ಲಿ ದೋಣಿಯೊಂದು ಮುಳುಗಿದ ಪರಿಣಾಮ 11 ಜನ ಮೃತರಾಗಿದ್ದರು. ಇತ್ತೀಚೆಗೆ ನಡೆದ ಭೀಕರ ದೋಣಿ ದುರಂತ ಇದಾಗಿತ್ತು.












Click it and Unblock the Notifications