ಪಂಜಾಬ್‌ನಲ್ಲಿ ಮತ್ತೆ ಬಾಲ ಬಿಚ್ಚಿದ ಉಗ್ರರು

Subscribe to Oneindia Kannada

ನವದೆಹಲಿ, ಜನವರಿ, 03: ಪಂಜಾಬ್ ಪ್ರಾಂತ್ಯದ ಪಠಾಣ್ ಕೋಟ್ ಸೇನಾ ವಾಯು ನೆಲೆ ಮೇಲೆ ಉಗ್ರರು ಮತ್ತೆ ದಾಳಿ ಮಾಡಿದ್ದಾರೆ. ಐಇಡಿ ಸ್ಫೋಟ ಮಾಡಿ ಮತ್ತೆ ಮೂವರು ಭಾರತೀಯ ಯೋಧರನ್ನು ಬಲಿಪಡೆದಿದ್ದಾರೆ.

ಭಾರತೀಯ ಸೇಬನೆಯ ವಾಯುನೆಲೆ ಮೇಲೆ ಶನಿವಾರ ದಾಳಿ ನಡೆಸಿದ್ದ 6 ಭಯೋತ್ಪಾದಕರನ್ನು ಸೇನಾಧಿಕಾರಿಗಳು ಹತ್ಯೆ ಮಾಡಿದ್ದರು. ಇದೀಗ ಮತ್ತೆ ವಾಯು ನೆಲೆಯಲ್ಲಿ ತೆಲೆಯೆತ್ತಿರುವ ಉಗ್ರರು ಗ್ರೆನೇಡ್ ಗಳನ್ನು ಸ್ಫೋಟಸುತ್ತಿದ್ದಾರೆ.[ಪಂಜಾಬ್ : ವಾಯುನೆಲೆಯಲ್ಲಿ ಗುಂಡಿನ ಚಕಮಕಿ]

Pathankot terror attack: Fresh firing at Air Base

ಉಗ್ರರು ದಾಳಿಯಿಂದ ಮೂವರು ಯೋಧರು ಹುತಾತ್ಮರಾಗಿದ್ದು, ಸ್ಫೋಟದಲ್ಲಿ ನಾಲ್ವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸೇನಾ ಪಡೆ ಉಗ್ರರ ಮೇಲೆ ಪ್ರತಿದಾಳಿ ಮುಂದುವರಿಸಿದೆ.[ಚಿತ್ರಗಳು : ನರೇಂದ್ರ ಮೋದಿ ಅಚ್ಚರಿಯ ಲಾಹೋರ್ ಭೇಟಿ]

ಕಾರ್ಯಾಚರಣೆಗೆ ಸೇನೆಎರಡು ಹೆಲಿಕಾಪ್ಟರ್‌ಗಳನ್ನೂ ಬಳಸಿಕೊಂಡಿದೆ. ಸೇನೆ, ವಾಯುಪಡೆ, ಎನ್‌ಎಸ್‌ಜಿ ಕಮಾಂಡೋ ಹಾಗೂ "ಸ್ವಾಟ್‌ ಟೀಮ್‌' ಗಳನ್ನು ಉಗ್ರರ ವಿರುದ್ಧ ಕಾರ್ಯಾಚರಣೆಗೆ ಇಳಿಸಲಾಗಿದೆ. ಶನಿವಾರ ಭಾರತೀಯ ವಾಯು ನೆಲೆ ಪ್ರವೇಶ ಮಾಡಿದ್ದ ಉಗ್ರರಲ್ಲಿ ಕೆಲವರು ತಲೆತಪ್ಪಿಸಿಕೊಂಡಿದ್ದರು. ಭಾನುವಾರ ಅವರೇ ಮತ್ತೆ ದಾಳಿ ಆರಂಭಿಸಿದ್ದಾರೆ. ದಾಳಿಗೆ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆಯಲಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fresh firing on Sunday, Jan 3 started at the Air Force base here with two more militants suspected to be holed up. "A fresh contact has been established and there was brief firing," a senior Army official said. Additional reinforcements have been sent to the area of operation.
Please Wait while comments are loading...