ಸಿಂಗ್‌ಗೆ ಸುಳ್ಳುಪತ್ತೆ ಪರೀಕ್ಷೆ ನಡೆಸಲು ಅಸ್ತು ಎಂದ ಕೋರ್ಟ್

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 18 : ಗುರುದಾಸ್‌ಪುರ ಎಸ್ಪಿ ಸಲ್ವಿಂದರ್ ಸಿಂಗ್ ಅವರಿಗೆ ಸುಳ್ಳುಪತ್ತೆ ಪರೀಕ್ಷೆ ನಡೆಸಲು ನ್ಯಾಯಾಲಯ ಒಪ್ಪಿಗೆ ನೀಡಿದೆ. ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ ಸುಳ್ಳುಪತ್ತೆ ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಪಠಾಣ್ ಕೋಟ್ ವಾಯುನೆಲೆಗೆ ನುಗ್ಗಿದ್ದ ಉಗ್ರರು ಎಸ್ಪಿ ಸಲ್ವಿಂದರ್ ಸಿಂಗ್, ಅವರ ಸ್ನೇಹಿತ ರಾಜೇಶ್ ಶರ್ಮಾ ಮತ್ತು ಅಡುಗೆ ಸಹಾಯಕ ಮದನ್ ಗೋಪಾಲ್ ಅವರನ್ನು ಅಪಹರಣ ಮಾಡಿದ್ದರು. ನಂತರ ಮೂವರನ್ನು ಕಾಡಿನಲ್ಲಿ ಬಿಟ್ಟು ಅವರ ಕಾರಿನಲ್ಲಿ ವಾಯುನೆಲೆಗೆ ಆಗಮಿಸಿದ್ದರು.[ಸಿಂಗ್, ಗೋಪಾಲ್, ವರ್ಮಾ ಮುಖಾಮುಖಿ ವಿಚಾರಣೆ]

pathankot

ಉಗ್ರರು ಅಪಹರಣ ಮಾಡಿದ ಬಗ್ಗೆ ಎನ್‌ಐಎ ಎರಡು ಬಾರಿ ಸಲ್ವಿಂದರ್ ಸಿಂಗ್ ವಿಚಾರಣೆ ನಡೆಸಿದೆ. ಆದರೆ, ಅವರ ಹೇಳಿಕೆಗಳಲ್ಲಿ ಗೊಂದಲಗಳು ಇರುವ ಕಾರಣ ಸುಳ್ಳುಪತ್ತೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಎನ್‌ಐಎ ಈ ಕುರಿತು ಗೃಹ ಸಚಿವಾಲಯಕ್ಕೂ ಮಾಹಿತಿ ನೀಡಿತ್ತು, ಗೃಹ ಸಚಿವಾಲಯವೂ ಪರೀಕ್ಷೆಗೆ ಒಪ್ಪಿಗೆ ನೀಡಿತ್ತು. [ಸಿಂಗ್ ಉತ್ತರಿಸಬೇಕಾದ ಮೂರು ಪ್ರಶ್ನೆಗಳು]

ಸಲ್ವಿಂದರ್ ಸಿಂಗ್‌ನನ್ನು ಎರಡು ಬಾರಿ ಎನ್‌ಐಎ ವಿಚಾರಣೆ ನಡೆಸಿದರೂ ಅವರ ಹೇಳಿಕೆಗಳಲ್ಲಿರುವ ಗೊಂದಲಗಳು ನಿವಾರಣೆಯಾಗಿಲ್ಲ. ಆದ್ದರಿಂದ, ಸಿಂಗ್ ಅಡುಗೆ ಸಹಾಯಕ ಮದನ್ ಗೋಪಾಲ್ ಮತ್ತು ಸ್ನೇಹಿತ ರಾಜೇಶ್‌ ವರ್ಮಾ ವಿಚಾರಣೆ ನಡೆಸಲು ಎನ್‌ಐಎ ನಿರ್ಧರಿಸಿದೆ. ಇದರ ನಡುವೆಯೇ ಗೃಹ ಸಚಿವಾಲಯದ ಒಪ್ಪಿಗೆ ಪಡೆದು ಎನ್‌ಐಎ ಸುಳ್ಳುಪತ್ತೆ ಪರೀಕ್ಷೆ ನಡೆಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The National Investigating Agency has been permitted to conduct a polygraph or lie detector test on Salwinder Singh, the Gurdapur Superintendent of Police who was abducted by the terrorists prior to the Pathankot attack.
Please Wait while comments are loading...