543 ಸಂಸದೀಯ ಕ್ಷೇತ್ರಗಳಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ
ನ್ಯೂಯಾರ್ಕ್/ ನವದೆಹಲಿ, ನವೆಂಬರ್ 23: ಪಾಸ್ಪೋರ್ಟ್ ಪಡೆಯಲು ಯೋಚಿಸುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇಲ್ಲಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ವಿಸ್ತರಿಸುತ್ತಿದೆ. ಭಾರತದ ಎಲ್ಲಾ 543 ಸಂಸದೀಯ ಕ್ಷೇತ್ರಗಳಲ್ಲಿ ಮಾರ್ಚ್ 2019 ರೊಳಗೆ ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ ಎಂದು ವಿದೇಶಾಂಗ ಸಚಿವ ವಿ.ಕೆ. ಸಿಂಗ್ ಅವರು ಹೇಳಿದ್ದಾರೆ.
ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳ ಹಾಗೂ ಸುಲಭಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು
ನ್ಯೂಯಾರ್ಕ್‌ನ ಭಾರತೀಯ ದೂತಾವಾಸದಲ್ಲಿ 'ಪಾಸ್‌ಪೋರ್ಟ್ ಸೇವಾ' ಕಾರ್ಯಕ್ರಮದಲ್ಲಿ ಹೇಳಿದರು.
ದೇಶದ ಪ್ರತಿಯೊಂದು ಪ್ರಧಾನ ಅಂಚೆಕಚೇರಿಯಲ್ಲೂ ಪಾಸ್‌ಪೋರ್ಟ್ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ನಾಗರಿಕರು ಪಾಸ್‌ಪೋರ್ಟ್ ಪಡೆಯಲು 50-60 ಕಿ.ಮೀ. ದೂರ ಪ್ರಯಾಣಿಸುವ ತೊಂದರೆ ಇಲ್ಲವಾಗುತ್ತದೆ . 2017ರಲ್ಲಿ ಪಾಸ್‌ಪೋರ್ಟ್ ಸಂಬಂಧಿತ ಕಾರ್ಯಗಳಲ್ಲಿ ಶೇ.19ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದರು.

ಪಾಸ್‌ಪೋರ್ಟ್ ಸೇವಾ ವ್ಯವಸ್ಥೆಯ ಮೂಲಕ 6 ಕೋಟಿಗೂ ಹೆಚ್ಚಿನ ಪಾಸ್‌ಪೋಟ್‌ಗಳನ್ನು ನೀಡಲಾಗಿದೆ ಎಂದರು. ಭಾರತದಲ್ಲಿ ಸದ್ಯ 365ಕ್ಕೂ ಅಧಿಕ ಪಾಸ್ ಪೋರ್ಟ್ ಸೇವಾ ಕೇಂದ್ರಗಳು ಸಕ್ರಿಯವಾಗಿವೆ.












Click it and Unblock the Notifications