Pan Aadhaar link; ಕೊನೆಯ ದಿನಾಂಕ ಮತ್ತೆ ವಿಸ್ತರಣೆ
ನವದೆಹಲಿ, ಮಾರ್ಚ್ 28; ದೇಶದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದ ವಿಚಾರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಲಿಂಕ್ ಮಾಡುವುದು. ಮಾರ್ಚ್ 31ರೊಳಗೆ ಆಧಾರ್ ಮತ್ತು ಪಾನ್ ಲಿಂಕ್ ಮಾಡಿ ಎಂದು ಈ ಹಿಂದೆ ಆದೇಶ ಹೊರಡಿಸಲಾಗಿತ್ತು. ಈಗ ಗಡುವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದ್ದರಿಂದ ಕೊನೆಯ ದಿನಗಳಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿದಿದೆ.
ಕೇಂದ್ರ ಸರ್ಕಾರ ಪಾನ್ ಮತ್ತು ಆಧಾರ್ ಲಿಂಕ್ ಮಾಡಲು ಇರುವ ಗುಡುವು ವಿಸ್ತರಣೆ ಮಾಡಿದೆ. ಮಂಗಳವಾರ ಪತ್ರಿಕಾ ಪ್ರಕಟಣೆ ಮೂಲಕ Central Board of Direct Taxes (CBDT) ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಿದೆ. ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಜೂನ್ 30ರ ತನಕ ಕಾಲಾವಕಾಶ ನೀಡಲಾಗಿದೆ.

ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಕೆಲವೇ ದಿನಗಳು ಉಳಿದಿದ್ದರಿಂದ ಕೊನೆ ಕ್ಷಣದ ಗೊಂದಲ ಉಂಟಾಗಿತ್ತು. ಜನರು ಸಹ ಆಧಾರ್ ಮತ್ತು ಪಾನ್ ಲಿಂಕ್ ಆಗಿದೆಯೇ? ಎಂದು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಹುಡುಕಾಡುತ್ತಿದ್ದರು. ಆದರೆ ಸರ್ವರ್ ಸಮಸ್ಯೆಯಿಂದಾಗಿ ಸರಿಯಾದ ಮಾಹಿತಿ ಲಭ್ಯವಾಗುತ್ತಿರಲಿಲ್ಲ.
ಆಧಾರ್ ಮತ್ತು ಪಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಜೋಡಣೆ ಮಾಡದಿದ್ದರೆ ಪಾನ್ ಕಾರ್ಡ್ ರದ್ದಾಗಲಿದೆ, ಬ್ಯಾಂಕಿಂಗ್ ವ್ಯವಹಾರಗಳು ಸಾಧ್ಯವಾಗುವುದಿಲ್ಲ. ಅಲ್ಲದೇ ಆದಾಯ ತೆರಿಗೆ ಪಾವತಿ ಮಾಡುವಾಗ ಶೇ 10ರಷ್ಟು ತೆರಿಗೆ ಹೆಚ್ಚು ಪಾವತಿ ಮಾಡಬೇಕು ಎಂಬ ಕಾರಣಕ್ಕಾಗಿ ಜನರು ಸಹ ಆತಂಕಗೊಂಡಿದ್ದರು.

ಇಂಟರ್‌ನೆಟ್‌ನಲ್ಲಿ ಆಧಾರ್ ಮತ್ತು ಪಾನ್ ಲಿಂಕ್ ಮಾಡುವುದು ಹೇಗೆ?, ಆಧಾರ್ ಮತ್ತು ಪಾನ್ ಲಿಂಕ್ ಆಗಿದೆ ಎಂದು ತಿಳಿಯುವುದು ಹೇಗೆ? ಎಂದು ಸರ್ಚ್ ಮಾಡುತ್ತಿದ್ದರು. ಕೊನೆ ಕ್ಷಣದ ಗೊಂದಲದ ಕಾರಣ ಕೇಂದ್ರ ಸರ್ಕಾರ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಇರುವ ಗುಡುವು ಜೂನ್ 30,2023ರ ತನಕ ವಿಸ್ತರಣೆ ಮಾಡಲಾಗಿದೆ.
ಜನರಿಂದ ಹಣ ವಸೂಲಿ; ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನ ಎಂಬ ವಿಚಾರ ತಿಳಿದು ಜನರು ಸೈಬರ್ ಸೆಂಟರ್‌ಗಳಿಗೆ ಹೋಗುತ್ತಿದ್ದರು. ಆಗ ಅವರು ಲಿಂಕ್ ಮಾಡಲು 1 ಸಾವಿರ ರೂ. ಮತ್ತು ಪ್ರೊಸೆಸಿಂಗ್ ಫೀ ಎಂದು 500 ರೂ. ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿದ್ದವು. ಎಸ್‌ಎಂಎಸ್ ಅಥವ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಸರಳವಾಗಿ ಆಧಾರ್ ಮತ್ತು ಪಾನ್ ಲಿಂಕ್ ಆಗಿದೆಯೇ? ಎಂಬುದನ್ನು ತಿಳಿಯಬಹುದಾಗಿದೆ.
ಎಸ್‌ಎಂಎಸ್ ಮೂಲಕ ತಿಳಿಯುವುದು ಹೇಗೆ?; ಆಧಾರ್ ಮತ್ತು ಪಾನ್ ಲಿಂಕ್ ಆಗಿದೆಯೇ? ಎಂದು ಒಂದು ಎಸ್‌ಎಂಎಸ್ ಕಳಿಸುವ ಮೂಲಕ ತಿಳಿಯಬಹುದಾಗಿದೆ. ಜನರು 567678 ಅಥವ 56161 ಸಂಖ್ಯೆಗೆ UIDPAN ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ಬಳಿಕ 12 ಡಿಜಿಟ್ ಆಧಾರ್ ಸಂಖ್ಯೆ ನಮೂದಿಸಿ ಬಳಿಕ ಮತ್ತೊಂದು ಸ್ಪೇಸ್ ನೀಡಿ ಪ್ಯಾನ್ ಸಂಖ್ಯೆಯನ್ನು ಬರೆದು ಕಳಿಸಿದರೆ ಅಂಗೈ ತುದಿಯಲ್ಲಿಯೇ ಮಾಹಿತಿ ಲಭ್ಯವಾಗುತ್ತದೆ.
ವೆಬ್‌ಸೈಟ್‌ನಲ್ಲಿ ಚೆಕ್ ಮಾಡುವುದು?; ಜನರು ಆದಾಯ ತೆರಿಗೆ ಇಲಾಖೆಯ https://www.incometax.gov.in/iec/foportal/ ವೆಬ್‌ಸೈಟ್ ಓಪನ್ ಮಾಡಿ Link Aadhaar Status ಟ್ಯಾಗ್ ಕ್ಲಿಕ್ ಮಾಡಿ ಅಲ್ಲಿ ಪಾನ್ ಮತ್ತು ಆಧಾರ್ ನಂಬರ್ ನಮೂದು ಮಾಡುವ ಮೂಲಕ ಸಹ ಆಧಾರ್ ಮತ್ತು ಪಾನ್ ಲಿಂಕ್ ಆಗಿದೆಯೇ? ಎಂದು ಸುಲಭವಾಗಿ ಮಾಹಿತಿ ಪಡೆಯಬಹುದಾಗಿದೆ.
ಈ ಹಿಂದಿನ ಆದೇಶದಂತೆ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಮಾರ್ಚ್ 31, 2023
3 ಕೊನೆಯ ದಿನವಾಗಿತ್ತು. ಮಂಗಳವಾರದ ಹೊಸ ಆದೇಶದ ಪ್ರಕಾರ ಜೂನ್ 30, 2023ರ ತನಕ ಲಿಂಕ್ ಮಾಡಲು ಅವಕಾಶ ನೀಡಲಾಗಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications