ಹಾವು ತೋರಿಸಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ಗಾಯಕಿ!

ನವದೆಹಲಿ, ಸೆಪ್ಟೆಂಬರ್ 5: ಪಾಕಿಸ್ತಾನದ ಪಾಪ್ ಗಾಯಕಿ ರಬಿ ಫಿರ್ಜಾದಾ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದಾರೆ. ರಬಿಯ ಹೆಸರು ಕೇಳದವರೂ ಆಕೆ ಹರಿಬಿಟ್ಟ ತಮಾಷೆಯ ವಿಡಿಯೋವನ್ನು ಜಾಲಾಡಿ ನೋಡಿ ಖುಷಿಪಡುತ್ತಿದ್ದಾರೆ!

ರಬಿ ಅವರು ಟ್ವಿಟ್ಟರ್‌ನಲ್ಲಿ ಹಾಕಿಕೊಂಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ನೆಟ್ಟಿಗರು ಆಕೆಯ ಕಾಲೆಳೆಯುವ ಸಲುವಾಗಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

50 ಸೆಕೆಂಡ್‌ಗಳ ವಿಚಿತ್ರ ವಿಡಿಯೋದಲ್ಲಿ ರಬಿ ಅವರು ಹಾವುಗಳ ಜತೆ ಆಟವಾಡಿದ್ದಾರೆ. ಸಾಮಾನ್ಯವಾಗಿ ಹಾವಿನಂತಹ ಅಪಾಯಕಾರಿ ಸರೀಸೃಪದೊಂದಿಗೆ ಆಟವಾಡುವುದು ವಿಶೇಷ ಹಾಗೂ ಅಪಾಯಕಾರಿಯಾದರೂ ರಬಿ ಸುದ್ದಿಯಾಗಿರುವುದು ಈ ಸಾಹಸದ ಮನೋಭಾವದ ಕಾರಣಕ್ಕೆ ಅಲ್ಲ. ಬದಲಾಗಿ ಹಾವುಗಳನ್ನು ತೋರಿಸಿ ಭಾರತಕ್ಕೆ ಬೆದರಿಕೆ ಹಾಕಿರುವ ಕಾರಣಕ್ಕೆ.

ಹಾವುಗಳು ಮತ್ತು ಮೊಸಳೆಯೊಂದರ ಜತೆ ಇರುವ ವಿಡಿಯೋವನ್ನು ರಬಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ 'ಮೋದಿ ಅವರ ವಿರುದ್ಧ ಕಾಶ್ಮೀರಿ ಯುವತಿಯನ್ನು ತಯಾರುಮಾಡುತ್ತಿದ್ದೇನೆ. ಏನೇ ಇರಲಿ ಅವರು ನರಕಕ್ಕೆ ಹೋಗಬೇಕು. ಅವರಂತಹ ಸರ್ವಾಧಿಕಾರಿಗಳ ಜಗತ್ತು ನರಕವಾಗಬೇಕು' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಮೋದಿಗೆ ಉಡುಗೊರೆಯಂತೆ

ಮೋದಿಗೆ ಉಡುಗೊರೆಯಂತೆ

ಬಳಿಕ ವಿಡಿಯೋದಲ್ಲಿ ಕಾಶ್ಮೀರಿ ಯುವತಿಯು ಭಾರತಕ್ಕೆ ಬೆದರಿಸಲು ಹಾವುಗಳೊಂದಿಗೆ ಹೇಗೆ ಸಿದ್ಧಳಾಗಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ತಾವು ಹಿಡಿದುಕೊಂಡಿರುವ ಹಾವು ಮತ್ತು ಸುತ್ತಲಿನ ಅಪಾಯಕಾರಿ ಪ್ರಾಣಿಗಳ ಬಗ್ಗೆ ಮಾತನಾಡಿರುವ ಅವರು, ಇವುಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರುವ ಉಡುಗೊರೆ ಎಂದು ಹೇಳಿದ್ದಾರೆ.

ನರಕದಲ್ಲಿ ಸಾಯಿರಿ

ನರಕದಲ್ಲಿ ಸಾಯಿರಿ

'ಮೋದಿ ಅವರೇ ನೀವು ಕಾಶ್ಮೀರಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದೀರಿ. ನೋಡಿ, ನಿಮಗಾಗಿ ನಾನೇನು ಸಿದ್ಧಪಡಿಸಿದ್ದೇನೆ. ಹೀಗಾಗಿ ನರಕದಲ್ಲಿ ಸಾಯಲು ಸಿದ್ಧರಾಗಿ. ಆಯ್ತಾ? ಈ ನನ್ನ ಸ್ನೇಹಿತರು ನಿಮ್ಮನ್ನು ಹಬ್ಬದೂಟ ಮಾಡುತ್ತಾರೆ' ಎಂದು ಹೇಳಿಕೊಂಡಿದ್ದಾರೆ. ಬಳಿಕ ಹಾಡೊಂದನ್ನು ಹಾಡುತ್ತಾ ಹಾವು ಹಾಗೂ ಮೊಸಳೆಯ ಪರಿಚಯ ಮಾಡಿದ್ದಾರೆ.

ರಬಿ ಏಕೆ ಹಿಂದಿದ್ದಾರೆ?

ರಬಿ ಏಕೆ ಹಿಂದಿದ್ದಾರೆ?

ಎಲ್ಲರೂ ಕಾಶ್ಮೀರಕ್ಕಾಗಿ ಹೊಡೆದಾಡುತ್ತಿರುವಾಗ ರಬಿ ಪಿರ್ಜಾದಾ ಅವರೇಕೆ ಇನ್ನೂ ಹಿಂದೆ ಇದ್ದಾರೆ ಎಂದು ನೈಲಾ ಇನಾಯತ್ ಎಂಬುವವರು ತಮಾಷೆ ಮಾಡಿದ್ದಾರೆ.

ನಮ್ಮ ಬಳಿ ಪರಿಹಾರವಿದೆ

ನಮ್ಮ ಬಳಿ ಪರಿಹಾರವಿದೆ

ನಮ್ಮ ಬಳಿ ಎಲ್ಲ ಸಮಸ್ಯೆಗೂ ಪರಿಹಾರವಿದೆ ಎಂದು ಅಲೋಕ್ ಕುಮಾರ್ ಪಟ್ನಾಯಕ್ ಎಂಬುವವರು ಹಿಂದಿ ಸಿನಿಮಾವೊಂದರಲ್ಲಿ ಪುಂಗಿ ಊದುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅನೇಕರು ಪುಂಗಿಯ ಚಿತ್ರವನ್ನು ಪ್ರಕಟಿಸಿ ರಬಿ ಅವರ ಕಾಲೆಳೆದಿದ್ದಾರೆ.

ತೌಬಾ ತೌಬಾಕ್ಕಿಂತಲೂ ಮಜವಿದೆ

ತೌಬಾ ತೌಬಾಕ್ಕಿಂತಲೂ ಮಜವಿದೆ

ನಾವು ಇದುವರೆಗೂ ಪಾಕಿಸ್ತಾನಕ್ಕೆ 'ತೌಬಾ ತೌಬಾ' ಅತ್ಯುತ್ತಮ ಕಾಮಿಕ್ ಎಂದುಕೊಂಡಿದ್ದೆವು. ಆದರೆ ಪಾಕಿಸ್ತಾನ ಅಚ್ಚರಿ ನೀಡಿದೆ. ಅಣ್ವಸ್ತ್ರದ ಬಳಿಕ ಪಾಕಿಸ್ತಾನದ ಗಾಯಕಿ ರಬಿ ಪಿರ್ಜಾದಾ ಅವರು ಹಾವು ಮತ್ತು ಮೊಸಳೆಗಳೊಂದಿಗೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಇದು ತೌಬಾ ತೌಬಾಕ್ಕಿಂತಲೂ ತಮಾಷೆಯಾಗಿದೆ ಎಂದು ಆರ್ಚಿ ಎಂಬುವವರು ಕೀಟಲೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+