ಪಾಕ್ ಆನ್‌ಲೈನ್ ಸಭೆಯಲ್ಲಿ ಮೊಳಗಿದ ಜೈ ಶ್ರೀರಾಮ ಹಾಡು!: ವೈರಲ್ ವಿಡಿಯೋ

ನವದೆಹಲಿ, ಅಕ್ಟೋಬರ್ 30: ಪಾಕಿಸ್ತಾನವು ಮಂಗಳವಾರ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಜೂಮ್ ಮೀಟಿಂಗ್‌ನಲ್ಲಿ ಶ್ರೀರಾಮ ಮತ್ತು ಹನುಮಾನ್‌ನ ಹಾಡುಗಳು ಮೊಳಗಿದೆ. ಇದರಿಂದ ಪಾಕಿಸ್ತಾನದ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.

ವಿವಿಧ ದೇಶಗಳ ಪರಿಣತರು ಭಾಗವಹಿಸಿದ್ದ ಆನ್‌ಲೈನ್ ಸಭೆಯನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿತ್ತು. 'ಭಾರತದಿಂದ ಕಾಶ್ಮೀರ ಆಕ್ರಮಣಕ್ಕೆ 72 ವರ್ಷಗಳು' ಎಂಬ ವಿಚಾರದ ಬಗ್ಗೆ ಈ ಸಭೆ ನಡೆಯುತ್ತಿತ್ತು. ಭಾರತ ವಿರೋಧಿ ಸಭೆ ನಡೆಯುವುದನ್ನು ಗಮನಿಸಿದ್ದ ಭಾರತದ ಪರ ಹ್ಯಾಕರ್‌ಗಳು ಆನ್‌ಲೈನ್ ಮೀಟಿಂಗ್‌ಅನ್ನು ಹ್ಯಾಕ್ ಮಾಡಿ ಶ್ರೀರಾಮ ಮತ್ತು ಹನುಮಾನ್ ಹಾಡುಗಳನ್ನು ಬಿತ್ತರಿಸಿದ್ದಾರೆ.

 Pakistan Online Zoom Meeting On Kashmir Hacked With Songs On Lord Ram And Hanuman

ಶ್ರೀರಾಮ ಮತ್ತು ಹನುಮಾನ್ ಹಾಡುಗಳು ಸಭೆಯಲ್ಲಿ ಮೊಳಗುತ್ತಿದ್ದಂತೆಯೇ ಭಾಷಣಕಾರರಲ್ಲಿ ಒಬ್ಬರು, 'ನಾವು ಈ ರೀತಿ ಆಗುವುದನ್ನು ನಿರೀಕ್ಷಿಸಿದ್ದೆವು' ಎಂದು ಹೇಳುವುದು ಕೇಳಿಸಿದೆ. 'ನಾವು ಭಾರತೀಯರು. ಒದ್ದು ಹೊರಹಾಕುತ್ತೇವೆ' ಎಂದು ಹ್ಯಾಕರ್‌ಗಳು ವಿಡಿಯೋದಲ್ಲಿ ಹೇಳಿದ್ದಾರೆ.

ಸಭೆಯನ್ನು ಮೊದಲು 16.55 ನಿಮಿಷಗಳವರೆಗೆ ಹ್ಯಾಕ್ ಮಾಡಲಾಗಿತ್ತು. ಅದರಲ್ಲಿ ಹನುಮಾನ್ ದೇವರ ಭಕ್ತಿಗೀತೆಗಳನ್ನು ಪ್ರಸಾರ ಮಾಡಲಾಯಿತು. ಎರಡನೆಯ ಬಾರಿ ಸಭೆಯ 47ನೇ ನಿಮಿಷದಲ್ಲಿ ಹ್ಯಾಕ್ ಮಾಡಲಾಗಿತ್ತು. 'ಏಕ್ ಹಿ ನಾರಾ, ಏಕ್ ಹಿ ನಾಮ್, ಜೈ ಶ್ರೀರಾಮ್, ಜೈ ಶ್ರೀರಾಮ್' ಎಂಬ ಹಾಡು ಪ್ರಸಾರವಾಗುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+