ಮೋದಿ ಹತ್ಯೆಗೆ ಪಾಕಿಸ್ತಾನಿಯಿಂದ 50 ಕೋಟಿ ಸುಪಾರಿ
ವಿದೇಶಿ ದೂರವಾಣಿ ಸಂಖ್ಯೆಯಿಂದ ಕರೆ ಮಾಡಿದ ಅನಾಮಧೇಯ ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಕೊಲ್ಲಲು ಸಹಾಯ ಮಾಡಬೇಕೆಂದು ಕೋರಿದ್ದಾನೆ.
ಭೋಪಾಲ್, ಮೇ 22: ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ, ಪಾಕಿಸ್ತಾನದಿಂದ ಕರೆ ಮಾಡಿರುವುದಾಗಿ ಹೇಳಿಕೊಂಡ ಅನಾಮಧೇಯ ವ್ಯಕ್ತಿಯೊಬ್ಬ ಪ್ರಧಾನಿ ಮೋದಿಯವರನ್ನು ಕೊಲ್ಲಲು ತಮಗೆ ಸಹಾಯ ಮಾಡಿದಲ್ಲಿ 50 ಕೋಟಿ ರು. ನೀಡುವುದಾಗಿ ಆಮಿಷವೊಡ್ಡಿದ್ದಾನೆ. ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಕುಶಾಲ್ ಸೋನಿ ಎಂಬಾತನ ಮೊಬೈಲ್ ಗೆ ಇತ್ತೀಚೆಗೆ ವಿದೇಶಿ ದೂರವಾಣಿ ಸಂಖ್ಯೆಯಿಂದ ಕರೆಯೊಂದು ಬಂದಿದೆ. ಕರೆಯನ್ನು ಸ್ವೀಕರಿಸಿದಾಗ ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ, ತನ್ನನ್ನು ತಾನು ಪಾಕಿಸ್ತಾನೀಯನೆಂದು ಪರಿಚಯಿಸಿಕೊಂಡು, ತಾನು ಹಾಗೂ ತನ್ನ ಸಂಘಟನೆಯ ಕೆಲ ಸದಸ್ಯರು ಪ್ರಧಾನಿ ಮೋದಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದೆ ಎಂದು ತಿಳಿಸಿದ್ದಾನೆ.[ಮೋದಿ ಹತ್ಯೆಗೆ ಸ್ಕೆಚ್ ಹಾಕಿದ್ದ ಐದು ಉಗ್ರರ ಹತ್ಯೆ]

ಮುಂಬೈನಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲೇ ಮೋದಿಯವನ್ನು ಕೊಲೆ ಮಾಡಲು ಸಂಚು ಮಾಡಿದ್ದೇವೆ. ಈ ಕಾರ್ಯಕ್ಕೆ ನಿನ್ನ (ಕುಶಾಲ್) ನೆರವು ಬೇಕಿದೆ. ನಾವಾಗಲೇ ನಮಗೆ ಸಹಾಯ ನೀಡಬಲ್ಲ ಇಬ್ಬರನ್ನು ನಾವು ಗುರುತು ಮಾಡಿದ್ದೇವೆ. ಅದರಲ್ಲಿ ನೀನೂ ಒಬ್ಬ. ಮತ್ತೊಬ್ಬನನ್ನು ಈ ಕೃತ್ಯಕ್ಕೆ ಬಳಸಲು ನಾವು ಹುಡುಕಾಟ ನಡೆಸಿದ್ದೇವೆ ಎಂದಿದ್ದಾನೆ ಆತ.[ಪಾಟ್ನಾದಲ್ಲಿ ನನ್ನ ಹತ್ಯೆ ಸಂಚು ನಡೆದಿತ್ತು : ಮೋದಿ]
ನೀನು ಈ ಕೆಲಸಕ್ಕೆ ನೆರವು ನೀಡಿದರೆ ನಿನಗೆ 50 ಕೋಟಿ ರು. ನೀಡಲಾಗುವುದು. ಇದು ಕಡಿಮೆ ಆಯಿತು ಎಂದಾದರೆ ನಿನಗೆಷ್ಟೇ ಬೇಕೋ ಅಷ್ಟು ಹಣವನ್ನು ಕೊಡಲಾಗುವುದು ಎಂದು ತಿಳಿಸಿದ್ದಾನೆ. ಹಾಗೆ, ಹೇಳಿದ ನಂತರ ಕಾಲ್ ಕಟ್ ಆಗಿದೆ.[ಪ್ರಧಾನಿಯೂ ಸೇರಿದ ಹಾಗೆ ಬಿಜೆಪಿ ಮುಖಂಡರದು ಬಣ್ಣದ ಮಾತು: ಖರ್ಗೆ]
ಈ ಘಟನೆ ನಡೆದ ನಂತರ ಒಂದೆರಡು ದಿನ ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದ ಕುಶಾಲ್ ಗೆ ಆನಂತರ ಹೀಗೆ ಸುಮ್ಮನಿರುವುದು ಸರಿಯಲ್ಲ ಎಂದೆನಿಸಿದೆ. ತಕ್ಷಣವೇ ಸಾತ್ನಾ ಪೊಲೀಸರನ್ನು ಸಂಪರ್ಕಿಸಿ ಈ ಕರೆಯ ವಿಚಾರವನ್ನು ಅವರ ಗಮನಕ್ಕೆ ತಂದಿದ್ದಾರೆ.[ಸರ್ಜಿಕಲ್ ಸ್ಟ್ರೈಕ್ 2: ಮೋದಿ ಮುಂದಿನ ತಂತ್ರದ ಬಗ್ಗೆ ಸಚಿವರ ಸುಳಿವು]
ಕುಶಾಲ್ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣದ ಬೆನ್ನು ಬಿದ್ದಿದ್ದಾರೆ. ಕರೆಯ ಜಾಡು ಬೆನ್ನತ್ತಿರುವ ಪೊಲೀಸರಿಗೆ ಇದು ಕಜಕಿಸ್ತಾನದಿಂದ ಬಂದ ಕರೆಯೆಂಬುದು ಪತ್ತೆಯಾಗಿದೆ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾರಂಭಿಸಿದ್ದಾರೆ.
ಹಾಗೊಂದು ವೇಳೆ, ಇದೊಂದು ಕಿಡಿಗೇಡಿಗಳ ತಮಾಷೆಯ ಕೃತ್ಯ ಎಂದಾಗಿದ್ದರೂ ಈ ಕರೆಯನ್ನು ನಾವು ಗಂಭೀರವಾಗಿಯೇ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಾತ್ನಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥಿಲೇಶ್ ಕುಮಾರ್ ಹೇಳಿದ್ದಾರೆ.
{promotion-urls}












Click it and Unblock the Notifications