ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಟ್ನಾದಲ್ಲಿ ನನ್ನ ಹತ್ಯೆ ಸಂಚು ನಡೆದಿತ್ತು : ಮೋದಿ

|
Google Oneindia Kannada News

ಜಗದಾಲ್‌ಪುರ, ನ.7 : "ಪಾಟ್ನಾದಲ್ಲಿ ನನ್ನ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಆದ್ದರಿಂದ ಸಮಾವೇಶ ನಡೆದ ವೇದಿಕೆ ಪಕ್ಕದಲ್ಲಿಯೇ ಬಾಂಬ್ ಸ್ಫೋಟಿಸಲಾಯಿತು" ಎಂದು ಹೇಳಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಸರಣಿ ಸ್ಪೋಟದ ಬಗ್ಗೆ ಬಿಹಾರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಹೇಳುವ ಮೂಲಕ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನರೇಂದ್ರ ಮೋದಿ ಛತ್ತೀಸ್ ಗಢದ ಜಗದಾಲ್‌ಪುರದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ ಪಾಟ್ನಾದ ಸರಣಿ ಬಾಂಬ್ ಪ್ರಕರಣದ ಬಗ್ಗೆ ಮಾತನಾಡಿದ ಮೋದಿ, ತಮ್ಮನ್ನು ಕೊಲ್ಲಲು ಪಾಟ್ನಾದಲ್ಲಿ ಸಂಚು ರೂಪಗೊಂಡಿತ್ತು ಎಂದು ಹೇಳಿದರು.

Narendra Modi

ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರಿಂದ ಸಮಾವೇಶ ನಡೆಯುತ್ತಿದ್ದ ವೇದಿಕೆಯ ಪಕ್ಕದಲ್ಲಿ ಬಾಂಬ್ ಸ್ಫೋಟಸಲಾಗಿತ್ತು. ಆದರೆ ದೇವರ ದಯೆ ಮತ್ತು ದೇಶದ ಜನತೆಯ ಆಶೀರ್ವಾದಿಂದ ನಾನು ಬದುಕುಳಿದಿದ್ದೇನೆ ಎಂದು ಹೇಳಿದ ಮೋದಿ, ಸರಣಿ ಸ್ಫೋಟ ನಡೆದು ಹಲವು ದಿನಗಳು ಕಳೆದರೂ, ನಿತೀಶ್ ಸರ್ಕಾರ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರದ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ ಮೋದಿ, ಕಾಂಗ್ರೆಸ್ ಅಧಿಕಾರದ ಗದ್ದುಗೆ ಮೇಲೆ ಕುಳಿತು ದೇಶವನ್ನು ಲೂಟಿ ಹೊಡೆಯುತ್ತಿದೆ. ಕಾಂಗ್ರೆಸ್ ದೇಶವನ್ನೇ ತನ್ನ ಸ್ವಂತ ಅಭಿವೃದ್ಧಿಗಾಗಿ ಲೂಟಿ ಹೊಡೆಯುತ್ತಿದೆ. ಛತ್ತೀಸ್‌ಗಡ ರಾಜ್ಯ ಲೂಟಿಕೋರರ ಕೈಗೆ ಸಿಕ್ಕಿಲ್ಲ. ಬಿಜೆಪಿ ಆಡಳಿತದಲ್ಲಿ ರಾಜ್ಯ ಸುರಕ್ಷಿತವಾಗಿದೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ಸರ್ಕಾರ ಬುಡಕಟ್ಟು ಸಮುದಾಯದ ಅಭಿವೃದ್ಧಿಯನ್ನು ನಿರ್ಲಕ್ಷಿಸಿತ್ತು. ಆದರೆ ಬಿಜೆಪಿ ಸರ್ಕಾರ ಬುಡಕಟ್ಟು ಜನತೆಯ ಅಭಿವೃದ್ಧಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಛತ್ತೀಸ್‌ಗಡ ರಾಜ್ಯ ರಚನೆ ಮಾಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಛತ್ತೀಸ್‌ಗಡದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ನಿಮ್ಮ ರಾಜ್ಯ ಮತ್ತಷ್ಟು ಅಭಿವೃದ್ಧಿಯಾಗಬೇಕಾದರೆ, ಬಿಜೆಪಿಗೆ ಮತನೀಡಿ ಎಂದು ಮನವಿ ಮಾಡಿದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಮುಂದಿನ 5 ವರ್ಷದಲ್ಲಿ ಗುಜರಾತ್ ಮಾದರಿಯಲ್ಲಿ ಛತ್ತೀಸ್‌ಗಡ ರಾಜ್ಯವನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಮೋದಿ ಜನರಿಗೆ ಭರವಸೆ ನೀಡಿದರು.

ನರೇಂದ್ರ ಮೋದಿ ಮುಂದಿನ ಸಮಾವೇಶ : ನ.9ರ ಶುಕ್ರವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರ ಪ್ರದೇಶದ ಬಹರೈಚ್ ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಉತ್ತರ ಪ್ರದೇಶ ಮತ್ತು ಗುಜರಾತ್ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ನ.17ರ ಭಾನುವಾರ ಬೆಂಗಳೂರಿನಲ್ಲಿ ಮೋದಿ "ಭಾರತ ಗೆಲ್ಲಿಸಿ" ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. (ಮೋದಿ ಬಹರೈಚ್ ಸಮಾವೇಶಕ್ಕೆ ಭಾರೀ ಭದ್ರತೆ)

English summary
BJP’s PM candidate Narendra Modi on Thursday, November 7 hit out at Bihar Chief Minister Nitish Kumar over the handling of the Patna blasts and accused him of being uncaring and arrogant. Addressing his first rally in poll-bound Chhattisgarh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X