ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹತ್ಯೆಗೆ ಸ್ಕೆಚ್ ಹಾಕಿದ್ದ ಐದು ಉಗ್ರರ ಹತ್ಯೆ

By Mahesh
|
Google Oneindia Kannada News

ಹೈದರಾಬಾದ್, ಏ.7: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದ ಉಗ್ರರನ್ನು ತೆಲಂಗಾಣ ಪೊಲೀಸರು ಕೊಂದು ಹಾಕಿದ್ದಾರೆ.

ಐವರು ಶಂಕಿತ ಉಗ್ರರು ಹರ್ಕತ್-ಉಲ್-ಇಸ್ಲಾಮಿ ಪ್ರಾಯೋಜಿತ ತೆಹ್ರಿಕ್ ಘಲಬಾ ಇ ಇಸ್ಲಾಂ ಸಂಘಟನೆಗೆ ಸೇರಿದವರಾಗಿದ್ದಾರೆ. ಎಲ್ಲಾ ಉಗ್ರರನ್ನು ವಿಚಾರಣೆಗಾಗಿ ಕೋರ್ಟಿಗೆ ಕರೆದೊಯ್ಯುವಾಗ ಈ ಘಟನೆ ನಡೆದಿದೆ.

Five undertrial millitants shot dead in Nalgonda

ಉಗ್ರವಾದಿ ಬಿಲಾಲ್ ನಿಂದ ಪ್ರೇರಿತನಾಗಿದ್ದ ವಿಕಾರುದ್ದೀನ್ ಅಹ್ಮದ್ ಎರಡು ಬಾರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಯತ್ನಿಸಿ ವಿಫಲನಾಗಿದ್ದ. ವಿಕಾರುದ್ದೀನ್ ಸೇರಿ ಐವರು ಉಗ್ರರು ವಾರಂಗಲ್ ನಲ್ಲಿ ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸುವಾಗ ಎನ್ ಕೌಂಟರ್ ನಡೆದಿದೆ.

ಮೃತ ಉಗ್ರರನ್ನು ವಿಕಾರುದ್ದೀನ್, ಸೈಯದ್ ಅಮ್ಜದ್, ಹನೀಫ್, ಜಾಕೀರ್ ಹಾಗೂ ಇರ್ಫಾನ್ ಎಂದು ಗುರುತಿಸಲಾಗಿದೆ. ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆ ತೆಹ್ರಿಕ್ ಘಲಬಾ ಇ ಇಸ್ಲಾಂಗಾಗಿ ಎಲ್ಲರೂ ಕಾರ್ಯ ನಿರ್ವಹಿಸುತ್ತಿದ್ದರು.

Five undertrial millitants shot dead in Nalgonda

ಹೈದರಾಬಾದಿನ ಓಲ್ಡ್ ಮಲಕ್ ಪೇಟೆಯಲ್ಲಿ ನೆಲೆಸಿದ್ದ ವಿಕಾರುದ್ದೀನ್ ಭಾರತದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಪಟ್ಟಿಯಲ್ಲಿದ್ದ. ಪಾಕಿಸ್ತಾನದ ಐಎಸ್ ಐ ಜೊತೆ ಕೂಡಾ ಸಂಪರ್ಕ ಸಾಧಿಸಿದ್ದ, ಬಾಂಗ್ಲಾ, ಕತಾರ್, ದುಬೈ ಗೆ ಭೇಟಿ ನೀಡಿ ಉಗ್ರ ಚಟುವಟಿಕೆಗಳನ್ನು ನಡೆಸಲು ನೆರವು ಪಡೆದುಕೊಂಡಿದ್ದ.

Five undertrial millitants shot dead in Nalgonda

ಬಾಲಸ್ವಾಮಿ ಎಂಬ ಹೋಂ ಗಾರ್ಡ್ ಕೊಂದಿದ್ದ ವಿಕಾರುದ್ದೀನ್, ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲು ಯತ್ನಿಸಿ ವಿಫಲನಾಗಿದ್ದ.

English summary
Five terror suspects belonging to the Harkat-ul-Jihadi Islami sponsored, Tehreek Ghalaba E Islam were shot down in an encounter at Warrangal today. Among the five persons killed was a key operative Viqarrudin Ahmed who had hatched two plans to assassinate Narendra Modi when he was chief minister of Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X