ಮೆಟರ್ನಿಟಿ ಬಿಲ್ ಪ್ರಸವ ಸುಸೂತ್ರ : ಹೆರಿಗೆ ರಜಾ 6 ತಿಂಗಳಿಗೆ ವಿಸ್ತರಣೆ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 11: ಹೆರಿಗೆ ರಜೆಯನ್ನು 12 ವಾರದಿಂದ 26 ವಾರದವರೆಗೆ ವಿಸ್ತರಿಸಲು ಅವಕಾಶ ಮಾಡಿಕೊಡುವ ಪ್ರಸೂತಿ ಕಾಯ್ದೆ ತಿದ್ದುಪಡಿಗೆ ರಾಜ್ಯಸಭೆಯಲ್ಲಿ ಗುರುವಾರ ಒಕ್ಕೊರಲ ಬೆಂಬಲ ಸಿಕ್ಕಿದೆ.

ಸ್ತ್ರೀಯರು ಪ್ರಸೂತಿ ಸಮಯದಲ್ಲಿ ತಗಲಿದ ವೆಚ್ಚವನ್ನು ಹಿಂಪಡೆಯಲು ಕೆಲ ಕಂಪನಿಗಳಿಗೆ ವೆಚ್ಚದ ಪ್ರತಿ ಸಲ್ಲಿಸಬಹುದಾಗಿದೆ. ಹೀಗಾಗಿ ಇದು ಪೇಯ್ಡ್ ಲೀವ್ ಆಗಿ ಪರಿಗಣಿಸಲಾಗುವುದು. ಇದರಿಂದ ಮಹಿಳಾ ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿ ಎಂದು ಮಸೂದೆಯಲ್ಲಿ ತಿದ್ದುಪಡಿ ಮಾಡಲಾಗಿದೆ.[ಪ್ರಸವಪೂರ್ವ ಲಿಂಗ ಪತ್ತೆ AD ಗೂಗಲ್ ಗೆ ಸುಪ್ರೀಂ ತರಾಟೆ]

Paid maternity leave increased to 6 months

ಪ್ರಸೂತಿ ಕಾಯ್ದೆ 1961 ರ ಅನ್ವಯ ಗರ್ಭ ಧರಿಸಿದ ನಂತರ ಹಾಗೂ ಶಿಶು ಪಾಲನೆಗೆ ಗೈರಾಗುವ ದಿನದಲ್ಲಿ ಪೂರ್ಣ ಸಂಬಳ ಪಡೆಯಲು ಮಹಿಳೆಯರು ಅರ್ಹರಿದ್ದಾರೆ. ಇದರ ಜತೆಗೆ ನವಜಾತ ಶಿಶುವನ್ನು ದತ್ತು ಪಡೆಯುವ ಮಹಿಳೆಯರು ಹಾಗೂ ಬಾಡಿಗೆ ತಾಯಂದರು (surrogacy)ಗಳಿಗೂ ಈ ತಿದ್ದುಪಡಿ ಅನ್ವಯವಾಗಲಿದೆ.

ಕೇಂದ್ರ ಸಚಿವ ಸಂಪುಟವು ಎಕ್ಸ್ ಪೋಸ್ಟ್ ಫ್ಯಾಕ್ಟೊಗೆ ಬುಧವಾರ ಒಪ್ಪಿಗೆ ನೀಡಿದ ಬಳಿಕ ಪ್ರಸೂತಿ ಕಾಯ್ದೆ ತಿದ್ದುಪಡಿ ಮಸೂದೆಗೆ ಗುರುವಾರ ಮಂಡನೆ ಮಾಡಲಾಗಿದೆ.


ಯಾವುದೇ ಫ್ಯಾಕ್ಟರಿಯಲ್ಲಿ 10ಕ್ಕೂ ಅಧಿಕ ಉದ್ಯೋಗಸ್ಥ ಮಹಿಳೆಯರಿಗೂ ಕಾಯ್ದೆ ಪ್ರಯೋಜನ ಸಿಗಲಿದೆ. ಒಟ್ಟಾರೆ ಸಂಘಟಿತ ವಲಯದ 18 ಲಕ್ಷ ಉದ್ಯೋಗಸ್ಥ ಮಹಿಳೆಯರಿಗೆ ಈ ಕಾಯ್ದೆ ನೆರವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Union Cabinet on Wednesday approved amendments to the Maternity Benefit Act of 1961 to increase paid leave for expectant mothers from three months to six and a half months.
Please Wait while comments are loading...