5 ಟ್ರಿಲಿಯನ್ ಡಾಲರ್ ಆರ್ಥಿಕತೆಯ 'ಜುಮ್ಲಾ' ಬಿಡಿಸಿಟ್ಟ ಪಿ.ಚಿದಂಬರಂ

ನವದೆಹಲಿ, ಜುಲೈ 15: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಮಂಡಿಸಿದ ಬಜೆಟ್ ನಲ್ಲಿ 'ಐದು ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸುವ ಗುರಿ ಹೊಂದಿದ್ದೇವೆ' ಎಂದು ಹೇಳಿದ್ದರು. ಇದು ಭಾರಿ ಪ್ರಚಾರ ಗಳಿಸಿತ್ತು.

ಆದರೆ ಐದ ಟ್ರಿಲಿಯನ್ ಆರ್ಥಿಕತೆ ಎನ್ನುವುದು ಕೇವಲ 'ಜುಮ್ಲಾ' ಎಂದಿದ್ದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಅವರು ಐದು ಟ್ರಿಲಿಯನ್ ಆರ್ಥಿಕತೆ ಹಿಂದಿನ ಸತ್ಯವನ್ನು ರಾಜ್ಯಸಭೆಯಲ್ಲಿ ಬಿಡಿಸಿಟ್ಟಿದ್ದಾರೆ.

ಶುಕ್ರವಾರ ನಡೆದ ಬಜೆಟ್ ಮೇಲಿನ ಚರ್ಚೆ ಕಲಾಪದಲ್ಲಿ ಮಾತನಾಡಿದ ಪಿ.ಚಿದಂಬರಂ, ನಿರ್ಮಲಾ ಸೀತಾರಾಮನ್ ಅವರು ಅತಿರಂಜಿತವಾಗಿ ಬಜೆಟ್ ಭಾಷಣದಲ್ಲಿ ಮಂಡಿಸಿದ್ದ 'ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ' ಯನ್ನು ವ್ಯಂಗ್ಯ ಮಾಡಿದರು. ಅಂಕಿ-ಅಂಶದ ಪ್ರಕಾರ ಐದು ಟ್ರಿಲಿಯನ್ ಹಿಂದಿನ ಸತ್ಯಾಸತ್ಯತೆ ಬಿಚ್ಚಿಟ್ಟರು.

P Chidambaram smashes out 5000 dolor trillion economy goal

'ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಭಾರತ ಸಾಧಿಸಿಯೇ ತೀರುತ್ತದೆ, ಅದರ ಬಗ್ಗೆ ಅನುಮಾನವೇ ಬೇಡ, ಆದರೆ ವಿತ್ತ ಸಚಿವೆ ಹೇಳಿದಂತೆ ಇದಕ್ಕೆ ವಿಶೇಷ ಒತ್ತಡವಾಗಲಿ, ಮೋದಿಯದ್ದೋ, ವಿತ್ತ ಸಚಿವರ ವಿಶೇಷ ಶರಮವಾಗಲಿ ಬೇಡ, ಅದು ಸಹಜ ಪ್ರಕ್ರಿಯೆಯಾಗಿ ತನ್ನಿಂದ ತಾನೇ ಆಗುತ್ತದೆ ಎಂದು ಚಿದಂಬರಂ ಹೇಳಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಅಂಕಿ-ಅಂಶಗಳನ್ನೂ ಸದನದ ಮುಂದೆ ಇಟ್ಟಿದ್ದಾರೆ.

1991 ರಲ್ಲಿ ಭಾರತದ ಆರ್ಥಿಕತೆಯು 325 ಟ್ರಿಲಿಯನ್ ಡಾಲರ್ ನದ್ದಾಗಿದ್ದು ಅದು 2000 ನೇ ಇಸವಿ ವೇಳೆಗೆ ಅದು ದ್ವಿಗುಣವಾಯಿತು. ಅದಾದ ನಂತರ ಯುಪಿಎ ಸರ್ಕಾರ ಬಂತು, 618 ಟ್ರಿಲಿಯನ್ ಡಾಲರ್ ನಿಂದ 1.22 ಟ್ರಿಲಿಯನ್ ಡಾಲರ್‌ಗೆ ಕೇವಲ ನಾಲ್ಕು ವರ್ಷದಲ್ಲಿ ದ್ವಿಗುಣಗೊಂಡಿತು. ನಂತರ ಮತ್ತೆ 2017 ರ ವೇಳೆಗೆ 2.48 ಟ್ರಿಲಿಯನ್ ಗೆ ದ್ವಿಗುಣಗೊಂಡಿತು ಎಂದು ಮಾಹಿತಿ ನೀಡಿದರು.

ಆರ್ಥಿಕತೆಯು ಮತ್ತೆ ದ್ವಿಗುಣವಾಗುತ್ತದೆ, ಐದು ಟ್ರಿಲಿಯನ್ ಡಾಲರ್ ಆಗುತ್ತದೆ ಇದಕ್ಕೆ ಯಾವ ಮಹಾನ್ ಆರ್ಥಿಕ ನೀತಿಯೇನೂ ಬೇಕಿಲ್ಲ ಆದರೆ ಇದನ್ನೇ ಮಹಾನ್ ಎನ್ನುವ ರೀತಿಯಲ್ಲಿ ವಿತ್ತ ಸಚಿವರು ಮುಂದು ಮಾಡುತ್ತಿದ್ದಾರೆ, ಆದರೆ ಇದೊಂದು ಅತ್ಯಂತ ಸ್ವಾಭಾವಿಕ ಬದಲಾವಣೆ ಅಷ್ಟೆ ಎಂದು ಚಿದಂಬರಂ ಹೇಳಿದರು.

ಭಾರತದ ನಾಮಿನಲ್ ಗ್ರೋತ್ 12% ಇದೆ ಹಾಗಾಗಿ ಭಾರತದ ಆರ್ಥಿಕತೆ ಸ್ವಾಭಾವಿಕವಾಗಿಯೇ ದ್ವಿಗುಣವಾಗುತ್ತದೆ, ಇದರಲ್ಲಿ ಯಾವುದೇ ದೊಡ್ಡತನವಿಲ್ಲ. ಆದರೆ ಇದನ್ನು ಬಹು ದೊಡ್ಡ ಸಾಧನೆಯ ಮಾದರಿಯಲ್ಲಿ ತೋರುವ ಬದಲಿಗೆ ಬೇರೆ ಇನ್ನೂ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಿ ಎಂದು ಚಿದಂಬರಂ ಅವರು ವಿತ್ತ ಸಚಿವರಿಗೆ ಸದನದ ಮೂಲಕ ಸಲಹೆ ನೀಡಿದರು.

ಭಾರತದ ಆರ್ಥಿಕತೆ ದುರ್ಬಲಗೊಂಡಿದೆ, ದುರ್ಬಲ ಆರ್ಥಿಕತೆ ಸರಿ ಮಾಡಲು ಗಟ್ಟಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆ ಗಟ್ಟಿತನ ಮೋದಿ ಅವರಿಗೆ ಇದೆ ಎಂದು ನಂಬಿದ್ದೇನೆ. ಬಜೆಟ್ ಭಾಷಣದಲ್ಲಿ ಎಲ್ಲವನ್ನೂ ಹೇಳಬೇಕು ಎಂದೇನೂ ಇಲ್ಲ, ಬಜೆಟ್ ಹೊರತಾಗಿಯೂ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಆ ನಿಟ್ಟಿನಲ್ಲಿ ಕಾರ್ಯ ಮಾಡಿರೆಂದು ವಿತ್ತ ಸಚಿವರಿಗೆ ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+