2018ರ ಡಿಸೆಂಬರ್ ನಲ್ಲಿ 16 ತಿಂಗಳಲ್ಲೇ ಗರಿಷ್ಠ 7 ಲಕ್ಷ ಉದ್ಯೋಗ ಸೃಷ್ಟಿ

ಸಂಘಟಿತ ವಲಯದಲ್ಲಿನ ಉದ್ಯೋಗ ಸೃಷ್ಟಿಯು 16 ತಿಂಗಳಲ್ಲೇ ಗರಿಷ್ಠ ಮಟ್ಟವಾದ 7.16 ಲಕ್ಷವನ್ನು ಡಿಸೆಂಬರ್ ತಿಂಗಳ 2018ರಲ್ಲಿ ತಲುಪಿದೆ. ಇದೇ ಒಂದು ವರ್ಷದ ಹಿಂದಿನ ಅವಧಿಗೆ 2.37 ಲಕ್ಷ ಇತ್ತು. ಇಪಿಎಫ್ ಒ ವೇತನ ದತ್ತಾಂಶವು ಈ ವಿಚಾರವನ್ನು ಬಹಿರಂಗಗೊಳಿಸಿದೆ.

ಹತ್ತಿರಹತ್ತಿರ 72.32 ಲಕ್ಷ ಹೊಸ ಸದಸ್ಯರು ಇಪಿಎಫ್ ಒಗೆ 2017ರ ಸೆಪ್ಟೆಂಬರ್ ಹಾಗೂ 2018ರ ಡಿಸೆಂಬರ್ ಮಧ್ಯೆ ಸೇರ್ಪಡೆ ಆಗಿದ್ದಾರೆ. ಇದರರ್ಥ ಕಳೆದ 16 ತಿಂಗಳಲ್ಲಿ ಇಷ್ಟು ಪ್ರಮಾಣದ ಉದ್ಯೋಗ ಸೃಷ್ಟಿ ಆಗಿದೆ. ಆದರೂ ನವೆಂಬರ್ 2018ಕ್ಕೆ ಇಪಿಎಫ್ ಒನಿಂದ ಪೇ ರೋಲ್ ದತ್ತಾಂಶ ಇಳಿಕೆ ತೋರುತ್ತಿತ್ತು.

ಅದು 23.44%. ಅಂದರೆ 5.80 ಲಕ್ಷ. ಅದಕ್ಕೂ ಮುನ್ನ ಅಂದಾಜು 7.16 ಲಕ್ಷ ಎಂದು ಕಳೆದ ತಿಂಗಳು ಬಿಡುಗಡೆ ಮಾಡಲಾಗಿತ್ತು. ಇದರ ಜತೆಗೆ 2017ರ ಸೆಪ್ಟೆಂಬರ್ ನಿಂದ 2018ರ ನವೆಂಬರ್ ಮಧ್ಯೆ ಉದ್ಯೋಗ ಸೇರ್ಪಡೆ ದತ್ತಾಂಶ ಇಳಿಕೆ ಆಗಿದೆ. 11.36% 65.15 ಲಕ್ಷ ಆಗಿದ್ದು, ಅದಕ್ಕೂ ಮುನ್ನ ಅಂದಾಜು 73.50 ಲಕ್ಷ ಅಂದುಕೊಳ್ಳಲಾಗಿತ್ತು.

Over 7 lakh jobs created in December: EPFO Payroll data

ಬಹಳ ತೀಕ್ಷ್ಣವಾದ ವ್ಯತ್ಯಾಸ ಆಗಿರುವುದು 2018ರ ಮಾರ್ಚ್ ತಿಂಗಳಲ್ಲಿ. ಹೊಸದಾಗಿ ಬಂದಿರುವ ವರದಿಯಲ್ಲಿ ನಿವ್ವಳ ಸೇರ್ಪಡೆ 5,498 ಮಂದಿ ಆಗಿದ್ದಾರೆ. ಕಳೆದ ತಿಂಗಳ ಅಂದಾಜು 55,831 ಇತ್ತು. ಇಪಿಎಫ್ ಒ ದತ್ತಾಂಶ ಮಾಹಿತಿ ವಿವರಿಸುವಂತೆ, 2018ರ ಮಾರ್ಚ್ ನಲ್ಲಿ ಅತ್ಯಂತ ಕಡಿಮೆ ಇರುವುದಕ್ಕೆ ಕಾರಣ ಕೂಡ ವಿವರಿಸಲಾಗಿದೆ. ಏಕೆಂದರೆ, ಆರ್ಥಿಕ ವರ್ಷದ ಕೊನೆ ಆದ್ದರಿಂದ ಬಹಳ ಮಂದಿ ಕೆಲಸ ಬಿಟ್ಟಿದ್ದಾರೆ.

ಡಿಸೆಂಬರ್ 2018ರಲ್ಲಿ ಅತಿ ಹೆಚ್ಚು, ಅಂದರೆ 2.17 ಲಕ್ಷ ಉದ್ಯೋಗ ಸೃಷ್ಟಿ 18-21ರ ವಯೋಮಾನದವರಿಗಾಗಿ ಆಗಿತ್ತು. ಇನ್ನು 2.03 ಲಕ್ಷ ಉದ್ಯೋಗವು 22-25 ವಯಸ್ಸಿನ ಮಧ್ಯದವರಿಗೆ ಸೃಷ್ಟಿ ಆಗಿದೆ. ಏಪ್ರಿಲ್ 2018ರಿಂದ ಇಪಿಎಫ್ ಒ ವೇತನ ದತ್ತಾಂಶವನ್ನು ಸೆಪ್ಟೆಂಬರ್ 2017ರ ನಂತರದ ಅವಧಿಯ ದತ್ತಾಂಶ ಬಿಡುಗಡೆ ಮಾಡಲಾಗಿದೆ.

ಇಪಿಎಫ್ ಒನಿಂದ ಸಂಘಟಿತ/ ಅರೆ ಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುತ್ತದೆ. 6 ಕೋಟಿಗೂ ಹೆಚ್ಚು ಸದಸ್ಯರು ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+