Breaking: ಭಾರತದಲ್ಲಿ 6 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು
ನವದೆಹಲಿ, ಜುಲೈ 2: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಲಕ್ಷದ ಗಡಿ ದಾಟಿದೆ.ಭಾರತದಲ್ಲಿ ಹೊಸದಾಗಿ 19,148 ಪ್ರಕರಣಗಳು ಪತ್ತೆಯಾಗಿವೆ, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6,04,641ಕ್ಕೆ ಏರಿಕೆಯಾಗಿದೆ. 2,26,947 ಸಕ್ರಿಯ ಪ್ರಕರಣಗಳಿವೆ.
ಇದುವರೆಗೆ 17,834 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ, ಚೇತರಿಕೆ ಪ್ರಮಾಣ ಶೇ.59.5 ರಷ್ಟು ಏರಿಕೆಯಾಗಿದೆ. 24 ಗಂಟೆಯಲ್ಲಿ 434 ಮಂದಿ ಸಾವನ್ನಪ್ಪಿದ್ದಾರೆ. 3,59,860 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಜನವರಿಯಿಂದ ಇಲ್ಲಿಯವರೆಗೆ 90 ಲಕ್ಷ ಮಂದಿಯ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲಿ 130 ಕೋಟಿ ಜನಸಂಖ್ಯೆಯಿದೆ.
ಬುಧವಾರ 2.29 ಲಕ್ಷ ಮಂದಿ ಗಂಟು ದ್ರವದ ಮಾದರಿಯನ್ನು ಪರೀಕ್ಷಿಸಲಾಗಿದೆ.ಮೇ 19ರ ಹೊತ್ತಿಗೆ 1,01,139 ಸೋಂಕಿತರಿದ್ದರು, ಜೂನ್ 3 ಹೊತ್ತಿಗೆ 2 ಲಕ್ಷದ ಗಡಿ ದಾಟಿತ್ತು. ಮುಂದಿನ 10 ದಿನಗಳಲ್ಲಿ 3 ಲಕ್ಷಕ್ಕೆ ಏರಿಕೆಯಾಗಿತ್ತು.
ಜೂನ್ 21ರ ಹೊತ್ತಿಗೆ ಕೊರೊನಾ ಸೋಂಕಿತರ ಸಂಖ್ಯೆ 4 ಲಕ್ಷಕ್ಕೆ ತಲುಪಿತ್ತು. ಜೂನ್ 27ರ ಹೊತ್ತಿಗೆ 5.8 ಲಕ್ಷವಿತ್ತು, ಇದೀಗ ಐದು ದಿನಗಳಲ್ಲಿ 6 ಲಕ್ಷದ ಗಡಿ ದಾಟಿದೆ.
ಭಾರತದಲ್ಲಿ ಜುಲೈ 1 ರಂದು ಕೊರೊನಾ ಸೋಂಕಿನಿಂದ 507 ಮಂದಿ ಮೃತಪಟ್ಟಿದ್ದು, 18,563 ಮಂದಿಗೆ ಸೋಂಕು ತಗುಲಿತ್ತು.












Click it and Unblock the Notifications