ನಿಮ್ಮ ಕಣ್ಣು ಎಷ್ಟು ಶಾರ್ಪ್ ಇದೆ? 27 ಸೆಕೆಂಡ್‌ಗಳಲ್ಲಿ ಈ ಬಾತ್‌ರೂಮ್ ಸಿಂಕ್ ಚಿತ್ರದಲ್ಲಿರುವ 1 ವ್ಯತ್ಯಾಸ ಪತ್ತೆಹಚ್ಚಿ ನೋಡೋಣ
ನಿಮ್ಮ ಮೆದುಳಿಗೆ ಒಂದು ಒಳ್ಳೆಯ ಕೆಲಸ ಕೊಡುವ ಸಮಯ ಬಂದಿದೆ ನೋಡಿ. ನೀವು ಎಷ್ಟರಮಟ್ಟಿಗೆ ಸೂಕ್ಷ್ಮವಾಗಿ ಗಮನಿಸುತ್ತೀರಿ ಎಂಬುದನ್ನು ಪರೀಕ್ಷಿಸಲು ಬ್ರೈನ್ ಟೀಸರ್‌ಗಳೇ ಬೆಸ್ಟ್. ಒಂದೇ ರೀತಿಯಾಗಿ ಕಾಣುವ ಎರಡು ಚಿತ್ರಗಳ ನಡುವಿನ ವ್ಯತ್ಯಾಸವನ್ನು ಪತ್ತೆಹಚ್ಚುವ ಆಟಗಳು ಮಿನಿ ಐಕ್ಯೂ (IQ) ಪರೀಕ್ಷೆಗಳಿದ್ದಂತೆ.
ಇದೀಗ ನಿಮ್ಮ ಮುಂದೆ ಬಾತ್‌ರೂಮ್ ಸಿಂಕ್‌ನ ದೃಶ್ಯವಿದ್ದು, ಈ ಎರಡು ಚಿತ್ರಗಳ ನಡುವಿನ ಕೇವಲ ಒಂದು ವ್ಯತ್ಯಾಸವನ್ನು 27 ಸೆಕೆಂಡುಗಳಲ್ಲಿ ಪತ್ತೆಹಚ್ಚುವ ಸವಾಲು ನಿಮ್ಮ ಮುಂದಿದೆ. 99% ಜನ ಇದರಲ್ಲಿ ಫೇಲ್ ಆಗಿದ್ದಾರೆ, ನೀವು ಗೆಲ್ಲುತ್ತೀರಾ?

ಬ್ರೈನ್ ಟೀಸರ್ ಆಟದಿಂದ ಏನು ಲಾಭ?
ಈ ರೀತಿಯ ಸ್ಪಾಟ್-ದಿ-ಡಿಫರೆನ್ಸ್ ಆಟಗಳು ನಿಮ್ಮ ಮೆದುಳಿನ ಎರಡೂ ಭಾಗಗಳನ್ನ ಚುರುಕುಗೊಳಿಸುತ್ತದೆ. ಚಿತ್ರಗಳನ್ನು ಸರಿಯಾಗಿ ಸ್ಕ್ಯಾನ್ ಮಾಡುವ ಮತ್ತು ವಿಶ್ಲೇಷಿಸುವ ಸಾಮರ್ಥ್ಯವನ್ನ ಇದು ಹೆಚ್ಚಿಸುತ್ತದೆ. ರೆಬಸ್ ಪಜಲ್‌ಗಳು, ಮ್ಯಾಚ್‌ಸ್ಟಿಕ್ ಪಜಲ್‌ಗಳು ಮತ್ತು ಹಿಡನ್-ಆಬ್ಜೆಕ್ಟ್ ಪಜಲ್‌ಗಳಂತೆ ಇವು ಕೂಡ ನಿಮ್ಮ ದೈನಂದಿನ ಮಾನಸಿಕ ವ್ಯಾಯಾಮಕ್ಕೆ ಹೇಳಿಮಾಡಿಸಿದಂತಿವೆ.
ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳಿಗೆ ಈ ಬ್ರೈನ್ ಟೀಸರ್‌ಗಳು ತುಂಬಾ ಉಪಯುಕ್ತವಾಗಿವೆ. ಇದು ಅವರಲ್ಲಿ ವಿಮರ್ಶಾತ್ಮಕ ಚಿಂತನೆ (Critical thinking), ವೀಕ್ಷಣಾ ಕೌಶಲ್ಯ, ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನ ಹೆಚ್ಚಿಸುತ್ತದೆ. ಇನ್ನು ವಯಸ್ಕರು ಹಾಗೂ ವೃದ್ಧರು ಕೂಡ ಈ ಆಟಗಳನ್ನ ಆಡಿ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ಬಾತ್‌ರೂಮ್ ಸಿಂಕ್ ಚಿತ್ರದಲ್ಲಿಇರುವ ಸವಾಲೇನು?
ಈಗ ಅಸಲಿ ಆಟಕ್ಕೆ ಬರೋಣ. ಇಲ್ಲಿ ನೀಡಲಾಗಿರುವ ಬಾತ್‌ರೂಮ್ ಸಿಂಕ್‌ನ ಎರಡು ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿ. ಮೇಲ್ನೋಟಕ್ಕೆ ಎರಡೂ ಚಿತ್ರಗಳು ಸಂಪೂರ್ಣವಾಗಿ ಒಂದೇ ರೀತಿಯಾಗಿ ಕಾಣುತ್ತವೆ. ಸಿಂಕ್, ಸೋಪು, ಬ್ರಷ್, ಕನ್ನಡಿ ಸೇರಿದಂತೆ ಎಲ್ಲವೂ ನೀಟಾಗಿ ಜೋಡಿಸಲಾಗಿದೆ. ಆದರೆ, ಈ ಎರಡು ಚಿತ್ರಗಳ ನಡುವೆ ಒಂದು ಸಣ್ಣ ವ್ಯತ್ಯಾಸವಿದೆ. ನಿಮ್ಮ ಮುಂದಿರುವ ಪ್ರಶ್ನೆ ಏನೆಂದರೆ, ಸಮಯ ಮೀರುವ ಮುನ್ನ ಆ ಒಂದೇ ಒಂದು ವ್ಯತ್ಯಾಸವನ್ನು ನೀವು ಪತ್ತೆಹಚ್ಚಬಲ್ಲಿರಾ? ನಿಮ್ಮ ಸಮಯ ಈಗ ಶುರುವಾಗಿದೆ, ಕೇವಲ 27 ಸೆಕೆಂಡುಗಳು ಮಾತ್ರ ಬಾಕಿ ಇವೆ!
ವ್ಯತ್ಯಾಸ ಹುಡುಕಲು ಇಲ್ಲಿದೆ ಟಿಪ್ಸ್
ಈ ಐಕ್ಯೂ ಪರೀಕ್ಷೆಯಲ್ಲಿ ಯಶಸ್ವಿಯಾಗಲು, ನೀವು ಚಿತ್ರವನ್ನು ಸ್ಕ್ಯಾನ್ ಮಾಡುವ ವಿಧಾನವನ್ನ ಬದಲಾಯಿಸಬೇಕು. ಚಿತ್ರದ ಮೂಲೆಮೂಲೆಗಳನ್ನ ಎಚ್ಚರಿಕೆಯಿಂದ ನೋಡಿ. ಪ್ರತಿ ವಸ್ತುವಿನ ಆಕಾರ, ಗಾತ್ರ ಮತ್ತು ಜೋಡಣೆಯನ್ನ ಗಮನಿಸಿ. ಎರಡೂ ಚಿತ್ರಗಳಲ್ಲಿ ಒಂದೊಂದೇ ವಸ್ತುವನ್ನು ಹೋಲಿಕೆ ಮಾಡುತ್ತಾ ಬನ್ನಿ. ಯಾವುದಾದರೂ ವಸ್ತು ನಾಪತ್ತೆಯಾಗಿದೆಯೇ ಅಥವಾ ಆಕಾರ ಬದಲಾಗಿದೆಯೇ ಎಂಬುದನ್ನ ಸೂಕ್ಷ್ಮವಾಗಿ ನೋಡಿ. ನಿಮ್ಮ ಕಣ್ಣಿನ ದೃಷ್ಟಿ ಹದ್ದಿನಂತೆ ತೀಕ್ಷ್ಣವಾಗಿರಬೇಕು. ಕೇವಲ ಒಂದು ಸಣ್ಣ ವ್ಯತ್ಯಾಸ ಮಾತ್ರ ಇರುವುದರಿಂದ ಬಹುತೇಕರು ಅದನ್ನು ಗುರುತಿಸಲು ವಿಫಲರಾಗುತ್ತಾರೆ.
ಸಮಯ ಮುಗಿತು! ಉತ್ತರ ಸಿಕ್ಕಿತೇ?
ಟಿಕ್... ಟಿಕ್... ಟಿಕ್... ನಿಮ್ಮ 27 ಸೆಕೆಂಡ್ ಮುಕ್ತಾಯವಾಗಿದೆ. ನೀವು ಈಗಾಗಲೇ ಆ ಒಂದು ವ್ಯತ್ಯಾಸವನ್ನು ಪತ್ತೆಹಚ್ಚಿದ್ದರೆ, ಅಭಿನಂದನೆಗಳು. ನಿಮ್ಮ ಕಣ್ಣಿನ ದೃಷ್ಟಿ ಹಾಗೂ ಮೆದುಳಿನ ಸಾಮರ್ಥ್ಯ ನಿಜಕ್ಕೂ ಚನ್ನಾಗಿದೆ. ನೀವು ದೃಶ್ಯ ಪಜಲ್‌ಗಳ ಮಾಸ್ಟರ್ ಎಂಬುದನ್ನ ಸಾಬೀತುಪಡಿಸಿದ್ದೀರಿ.
ಒಂದು ವೇಳೆ ನಿಮಗೆ ಇನ್ನೂ ಉತ್ತರ ಸಿಕ್ಕಿಲ್ಲವಾದರೆ, ಯಾವುದೇ ಚಿಂತೆ ಬೇಡ. ಕೆಲವೊಮ್ಮೆ ಕಣ್ಣೆದುರೇ ಇರುವ ತಪ್ಪುಗಳು ನಮ್ಮ ಗಮನಕ್ಕೆ ಬರುವುದಿಲ್ಲ. ಚಿತ್ರದ ಮೂಲೆಗಳನ್ನ ಮತ್ತೊಮ್ಮೆ ನಿಧಾನವಾಗಿ ಗಮನಿಸಿ, ಕನ್ನಡಿಯ ಮೇಲ್ಭಾಗದಲ್ಲಿ ಅಥವಾ ಬ್ರಷ್ ಇಟ್ಟಿರುವ ಜಾಗದಲ್ಲಿ ಆ ವ್ಯತ್ಯಾಸ ನಿಮಗೆ ಖಂಡಿತಾ ಸಿಗುತ್ತದೆ.



Click it and Unblock the Notifications
