Operation Sindoor 2.0: ಪಾಕಿಸ್ತಾನದ ಹೃದಯ ಭಾಗದ ಮೇಲೆ ಭಾರತದಿಂದ ಗದಾಪ್ರಹಾರ, ಕಂಗಾಲದ ಪಾಕ್!
Operation Sindoor 2.0: ಭಾರತೀಯ ಸೇನೆಯು ಪಾಕಿಸ್ತಾನದ ಹೃದಯ ಭಾಗ ಎಂದೇ ಪರಿಗಣಿಸಲಾಗಿರುವ ಲಾಹೋರ್‌ನ ಮೇಲೆ ಕ್ಷಿಪಣಿ ದಾಳಿ ಮಾಡಿರುವುದು ವರದಿಯಾಗಿದೆ. ಭಾರತದ ಮೇಲೆ ದಾಳಿ ಮಾಡಲು ಮುಂದಾಗಿರುವ ಪಾಕಿಸ್ತಾನದ ಪ್ರಯತ್ನವನ್ನು ಭಾರತೀಯ ಸೇನೆಯು ಪ್ರಭಲವಾಗಿ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ಸೇನೆಯು ಲಾಹೋರ್ ಮತ್ತು ಕರಾಚಿ ಸೇರಿದಂತೆ ದೇಶದ ಪ್ರಮುಖ ನಗರಗಳ ಮೇಲೆ ಭಾರತವು 25ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ದಾಳಿ ಮಾಡಿದೆ ಎಂದು ಹೇಳಿದೆ. ಅವುಗಳನ್ನು ನಾವು ಹೊಡೆದುರುಳಿಸಿದ್ದೇವೆ ಎಂದು ಪಾಕ್ ಹೇಳಿಕೊಂಡಿದೆ. ಆದರೆ, ಭಾರತವು ಪ್ರತಿರೋಧಾತ್ಮಕವಾಗಿ ಮಾಡಿರುವ ಈ ದಾಳಿಯಲ್ಲಿ ಪಾಕಿಸ್ತಾನದ ಹೃದಯ ಭಾಗದಲ್ಲಿ ಭಾರೀ ಹಾನಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ಮಾಡುವುದಕ್ಕೆ ಪಾಕಿಸ್ತಾನ ಮುಂದಾಗಿದ್ದು. ಭಾರತವು ಸರಿಯಾದ ಉತ್ತರವನ್ನೇ ನೀಡಿದೆ. ಭಾರತದ ಅಮೃತಸರದ ಗೋಲ್ಡನ್ ಟೆಂಪಲ್ ಮೇಲೆ ದಾಳಿ ಮಾಡುವುದಕ್ಕೆ ಪಾಕಿಸ್ತಾನ ಮುಂದಾಗಿತ್ತು ಎಂದು ಹೇಳಲಾಗಿದೆ. ಇದನ್ನು ತಡೆಯುವಲ್ಲಿ ಭಾರತೀಯ ಸೇನೆಯು ಯಶಸ್ವಿಯಾಗಿದೆ. ಚೀನಾ ನಿರ್ಮಿತ ಕ್ಷಿಪಣಿಗಳನ್ನು ಬಳಸಿ ಭಾರತದ ಮೇಲೆ ದಾಳಿ ಮಾಡಲು ಬಂದ ಪಾಕ್‌ಗೆ ಸರಿಯಾದ ಪಾಠವನ್ನೇ ಭಾರತ ಕಲಿಸಿದೆ.

ಇಂಡಿಯಾದ ಪ್ರಮುಖ ನಗರಗಳ ಮೇಲೆ ದಾಳಿ ಮಾಡಲು ಬಂದಿದ್ದ ಪಾಕ್ ಪ್ರಯತ್ನವನ್ನು ಭಾರತೀಯ ಸೇನೆಯು ವಿಫಲಗೊಳಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಹಲವು ಪ್ರದೇಶಗಳ ಮೇಲೆ ಡ್ರೋನ್ ದಾಳಿಯನ್ನು ಭಾರತೀಯ ಸೇನೆಯು ಮುಂದುವರಿಸಿದೆ. ಏರ್‌ಸ್ಟ್ರೈಕ್ ಮುಂದುವರಿಸಲಾಗಿದೆ. ಭಾರತೀಯ ಸೇನೆಯ ದಾಳಿಗೆ ಪಾಕಿಸ್ತಾನವು ಕಂಗಾಲಾಗಿದೆ. ಜನರಿಲ್ಲದ ವಿಮಾನಗಳ ಮೇಲೆ ಭಾರತೀಯ ಸೇನೆಯು ದಾಳಿ ಮುಂದುವರಿಸಿದೆ ಎಂದು ವರದಿಯಾಗಿದೆ.
ಭಾರತದ ಮೇಲೆ ದಾಳಿ ಮಾಡಲು ಬಂದ ಪಾಕ್‌ಗೆ ಭಾರತೀಯ ಸೇನೆಯು ಸರಿಯಾಗಿ ತಿರುಗೇಟು ನೀಡಿದ್ದು. ಪಾಕ್‌ನ ಹಲವು ಪ್ರಮುಖ ಪ್ರದೇಶಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications