ವಾಹ್! ಸೂರ್ಯಗ್ರಹಣದ ಅತ್ಯಾಕರ್ಷಕ, ಅಪರೂಪದ ಚಿತ್ರಗಳನ್ನು ನೋಡಿ
ಬೆಂಗಳೂರು, ಜುಲೈ 3: ಈ ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣದ ಅದ್ಭುತ ದೃಶ್ಯಗಳಿಗೆ ಪೆಸಿಫಿಕ್ ಸಮುದ್ರ ಮತ್ತು ದಕ್ಷಿಣ ಅಮೆರಿಕದ ಭಾಗಗಳು ಸಾಕ್ಷಿಯಾದವು. ಇದು ಭಾರತ ಸೇರಿದಂತೆ ಜಗತ್ತಿನ ಬೇರೆ ದೇಶಗಳಲ್ಲಿ ಗೋಚರಿಸಲಿಲ್ಲ.
ಚಿಲಿ ಮತ್ತು ಅರ್ಜೆಂಟೀನಾ ದೇಶದ ಜನರು ಮಾತ್ರ 2019ರ ಸಂಪೂರ್ಣ ಸೂರ್ಯಗ್ರಹಣದ ಅಪರೂಪದ ಹಾಗೂ ಅತ್ಯಾಕರ್ಷಕ ದೃಶ್ಯಗಳನ್ನು ಕಣ್ತುಂಬಿಕೊಂಡರು. ಭಾರತೀಯ ಕಾಲಮಾನ ರಾತ್ರಿ 10.25ಕ್ಕೆ (ಸ್ಥಳೀಯ ಕಾಲಮಾನ ಬೆಳಿಗ್ಗೆ 10.30) ಚಿಲಿ ಮತ್ತು ಅರ್ಜೆಂಟೀನಾದ ಜನರು ಸೂರ್ಯ ಮತ್ತು ಚಂದ್ರರ 'ಸಂಘರ್ಷ'ದ ಈ ಕ್ಷಣವನ್ನು ಕಂಡು ಸಂಭ್ರಮಿಸಿದರು.
ಈ ಸೂರ್ಯಗ್ರಹಣವು ಎರಡು ದೇಶಗಳಲ್ಲಿ ಮಾತ್ರ ಗೋಚರಿಸಿದರೂ ನಾಸಾ ಟಿವಿ ಅದರ ನೇರ ಪ್ರಸಾರ ಮಾಡಿದ್ದರಿಂದ ಜಗತ್ತಿನ ಅನೇಕ ದೇಶಗಳ ಜನರು ಟಿವಿಗಳಲ್ಲಿ ಅದನ್ನು ವೀಕ್ಷಿಸಿದರು. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದರು.
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯನ ಪ್ರಖರತೆಯನ್ನು ಸಂಪೂರ್ಣವಾಗಿ ಚಂದ್ರ ಆವರಿಸುತ್ತದೆ. ಬಳಿಕ ನಿಧಾನವಾಗಿ ಹೊರಬರುತ್ತದೆ. ಈ ಸೂರ್ಯಗ್ರಹಣದ ಪ್ರಕ್ರಿಯೆ ಆಗಾಗ ಸಂಭವಿಸಿದರೂ ಸಂಪೂರ್ಣ ಸೂರ್ಯಗ್ರಹಣದ ಕ್ಷಣಗಳು ಗೋಚರವಾಗುವುದು ಕೆಲವು ಕಡೆಗಳಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ಮಾತ್ರ.

ಚಿಲಿಯಲ್ಲಿ ಎರಡನೆಯ ಸೂರ್ಯಗ್ರಹಣ
ಚಿಲಿ ದೇಶದಲ್ಲಿ 2010ರಲ್ಲಿ ಈ ರೀತಿ ಸಂಪೂರ್ಣ ಸೂರ್ಯಗ್ರಹಣ ಕಾಣಿಸಿತ್ತು. ಈ ದಶಕದಲ್ಲಿ ಅದು ಎರಡು ಸಲ ಸಂಪೂರ್ಣ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಿದ್ದು, ಮೂರನೇ ಸೂರ್ಯಗ್ರಹಣವೂ ಇಲ್ಲಿ ಗೋಚರಿಸಲಿದೆ. 2020ರ ಡಿಸೆಂಬರ್ 14ರಂದು ಇಲ್ಲಿ ಮತ್ತೆ ಸೂರ್ಯಗ್ರಹಣ ಸಂಭವಿಸಲಿದೆ.
|
ಸೂರ್ಯಗ್ರಹಣ ವೀಕ್ಷಿಸಲೆಂದೇ ವಿದೇಶಕ್ಕೆ
ಈ ಅಪರೂಪದ ವಿದ್ಯಮಾನ ವೀಕ್ಷಿಸಲು ಖಗೋಳ ಪ್ರಿಯರು ಅನೇಕರು ಚಿಲಿ ಮತ್ತು ಅರ್ಜೆಂಟೀನಾಕ್ಕೆ ಪ್ರವಾಸ ಕೈಗೊಂಡಿದ್ದರು.
ಕ್ಯಾರೋಲ್ ರೈಟ್ ಎಂಬುವವರು ಸೂರ್ಯಗ್ರಹಣ ವೀಕ್ಷಿಸಲು ಇಂಗ್ಲೆಂಡ್‌ನಿಂದ ಚಿಲಿಗೆ ಪ್ರಯಾಣ ಬೆಳೆಸಿದ್ದರು. 'ಇದು ನನ್ನ ಮೊದಲ ಸೂರ್ಯಗ್ರಹಣ ವೀಕ್ಷಣೆ' ಎಂದು ಅವರು ಸಂಭ್ರಮದಿಂದ ಹೇಳಿಕೊಂಡರು. ಚಿಲಿಯ ಲಾ ಸಿಲ್ಲಾದಲ್ಲಿರುವ ವೀಕ್ಷಣಾ ಕೇಂದ್ರದಲ್ಲಿ ಅವರು ಸೂರ್ಯಗ್ರಹಣ ವೀಕ್ಷಿಸಿದರು. 'ನಾನು ನೋಡಿದ ಅದ್ಭುತ ದೃಶ್ಯಗಳಿವು. ಮೊದಲ ಸಲ ಈ ಅನುಭವ ದೊರಕಿರುವುದರಿಂದ ಮತ್ತೆ ಸೂರ್ಯಗ್ರಹಣ ನೋಡಬೇಕು ಎನಿಸುತ್ತಿದೆ' ಎಂದು ಹೇಳಿದರು.
|
ಸಂಪೂರ್ಣ ಕತ್ತಲು
ಸುಮಾರು ನಾಲ್ಕು ನಿಮಿಷ ಈ ಸೂರ್ಯಗ್ರಹಣ ಉಂಟಾಗಿತ್ತು. ಈ ವೇಳೆ ಸೂರ್ಯನ ಪ್ರಖರ ಕಿರಣಗಳನ್ನು ಚಂದ್ರ ಮುಚ್ಚಿದ್ದರಿಂದ ಭೂಮಿಯ ಉಷ್ಣಾಂಶ ಕಡಿಮೆಯಾಗಿತ್ತು. ಈ ಪ್ರದೇಶಗಳಲ್ಲಿ ಕತ್ತಲು ಆವರಿಸಿತ್ತು. ಕೆಲವೆಡೆ ನಕ್ಷತ್ರ ಮತ್ತು ಗ್ರಹಗಳು ಸಹ ಗೋಚರಿಸುವಷ್ಟು ಕತ್ತಲು ಉಂಟಾಗಿತ್ತು.
|
ಭಾರತದಲ್ಲಿ ಗೋಚರಿಸಲಿಲ್ಲ
ನಾಳೆಯ ಸೂರ್ಯಗ್ರಹಣ ನಮ್ಮಲ್ಲಿ ಗೋಚರಿಸುವುದೂ ಇಲ್ಲ,ಆಚರಣೆಯೂ ಇಲ್ಲ. ರಾಹು ಕೇತುಗಳ ಯುತಿಯಲ್ಲಿ ರವಿ ಚಂದ್ರರು ಬಂದಾಗ ಗ್ರಹಣವಾಗುತ್ತದೆ.ಆದರೆ ಈ ಸೂರ್ಯಗ್ರಹಣ ನಮಗೆ ಗೋಚರವಾಗದು. ಡಿಸೆಂಬರ್ ನಲ್ಲಿ ರವಿಯ ಧನುರಾಶಿ ಸಂಚಾರ ಕಾಲದಲ್ಲಿ ಅದ್ಭುತವಾದ ಸೂರ್ಯ ಗ್ರಹಣ ಆಗಲಿದೆ. 26-12-2019 ಬೆಳಿಗ್ಗೆ 8.05 ಕ್ಕೆ ಭಾರತದಲ್ಲಿ ಗೋಚರಿಸಲಿದೆ. ಇದು ಎಷ್ಟರ ಮಟ್ಟಿಗೆ ಕತ್ತಲು( darkness) ನೀಡಲಿದೆ ಎಂದರೆ ಗ್ರಹ ನಕ್ಷತ್ರಗಳು ಗೋಚರಿಸಬಹುದಾದಷ್ಟು ಕತ್ತಲೆ ಆವರಿಸಲಿದೆ. ಇದು ಪ್ರಕೃತಿಗೆ ಅತ್ಯಂತ ಅಪಾಯಕಾರಿಯೂ ಆಗಲಿದೆ.ಸುಮಾರು ಮೂರು ಘಂಟೆಗಳ ಅವಧಿಯಲ್ಲಿ ಇರುತ್ತದೆ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ತಿಳಿಸಿದ್ದರು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications