ಇಂದಿನಿಂದ ರೈಲ್ವೆ ಹೊಸ ನಿಯಮ ಜಾರಿ: ಆನ್‌ಲೈನ್‌ನಲ್ಲೇ ಲಗೇಜ್ ಬುಕಿಂಗ್ ಅವಕಾಶ, ಹೆಚ್ಚು ಲಗೇಜ್‌ ಇದ್ದರೆ ಸ್ಥಳದಲ್ಲಿಯೇ ದಂಡ

ಪ್ರತಿ ದಿನ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡ್ತಾರೆ. ಮಕ್ಕಳು, ವಯಸ್ಸಾದವರು ಜೊತೆಗಿದ್ದರೆ ರೈಲು ಪ್ರಯಾಣ ಬಹಳ ಆರಾಮ ಅನ್ನಿಸುತ್ತದೆ. ಇನ್ನು ದೂರದ ಊರುಗಳಿಗೆ ಹೋಗಬೇಕಾದರೂ ಇದೇ ಬೆಸ್ಟ್.‌ ಕಡಿಮೆ ಕಾಸಿನಲ್ಲಿ ಆರಾಮಾಗಿ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ತಲುಪಬಹುದು. ಇತ್ತೀಚಿನ ದಿನಗಳಲ್ಲಿ ಸರ್ಕಾರ ಕೂಡಾ ರೈಲು ಪ್ರಯಾಣಿಕರಿಗಾಗಿ ಅನೇಕ ಹೊಸ ಹೊಸ ಸೇವೆಗಳನ್ನು ತಂದಿದೆ. ಜೊತೆಗೆ ಕೆಲವು ನಿಯಮಗಳನ್ನು ಕೂಡಾ ಬದಲಾಯಿಸಿದೆ.

ಆನ್‌ಲೈನ್ ಮೂಲಕ ಲಗೇಜ್‌ ಬುಕ್ಕಿಂಗ್

ಒಂದು ವೇಳೆ ನೀವು ಕೂಡಾ ಹೆಚ್ಚಾಗಿ ರೈಲಿನಲ್ಲಿಯೇ ಹೋಗಿ ಬರುವವರಾದರೆ ಈ ಸುದ್ದಿ ನಿಮಗೆ ಉಪಯೋಗಕ್ಕೆ ಬರಬಹುದು. ರೈಲು ಪ್ರಯಾಣವೇನೋ ಆರಾಮ ಅದರಲ್ಲಿ ಎರಡು ಮಾತಿಲ್ಲ. ಆದ್ರೆ, ಕೆಲವರು ತುಂಬಾ ಲಗೇಜ್‌ಗಳನ್ನು ಹೊತ್ತುಕೊಂಡು ಬರ್ತಾರೆ. ಆ ಲಗೇಜ್‌ಗಳನ್ನು ಇದ್ದ ಬದ್ದವರ ಸೀಟಿನ ಕೆಳಗೆ ಇಟ್ಟಿರುತ್ತಾರೆ. ಇದು ಜೊತೆಯಲ್ಲಿ ಪ್ರಯಾಣ ಮಾಡುವವರಿಗೆ ಕಿರಿ ಕಿರಿ ಉಂಟು ಮಾಡಬಹುದು. ಆದರೆ, ಹೊಸ ರೈಲ್ವೆ ನಿಯಮಗಳ ಪ್ರಕಾರ, ಇದು ಇನ್ನು ಮುಂದೆ ಹಾಗಾಗೊದಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಮತ್ತೊಂದು ಹೊಸ ಸೇವೆಯನ್ನು ಪ್ರಾರಂಭಿಸ್ತಿದೆ. ಇವತ್ತಿಂದಲೇ ಅಂದರೆ ಜುಲೈ 31 ರಿಂದಲೇ ಇದು ಜಾರಿಗೆ ಬಂದಿದೆ. ಕನ್‌ಫರ್ಮ್‌ ಟಿಕೆಟ್‌ ಇದ್ದ ಪ್ರಯಾಣಿಕರಿಗೆ ವೈಯಕ್ತಿಕ ಲಗೇಜ್‌ನ ಆನ್‌ಲೈನ್ ಬುಕಿಂಗ್ ಪ್ರಾರಂಭಿಸಲು ರೈಲ್ವೆ ನಿರ್ಧರಿಸಿದೆ.

Online luggage booking

ಇವತ್ತಿನಿಂದ ಈ ಡಿಜಿಟಲ್ ವ್ಯವಸ್ಥೆಯನ್ನು ಜಾರಿ

ಪಾರ್ಸೆಲ್ ಬುಕಿಂಗ್ ಪ್ರಕ್ರಿಯೆಯನ್ನು ಸುಲಭ ಮಾಡಲು ಮತ್ತು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಗಬಹುದಾದ ತೊಂದರೆಗಳನ್ನು ಕಡಿಮೆ ಮಾಡಲು ಸರ್ಕಾರ ಈ ಯೋಜನೆ ಶುರು ಮಾಡಿದೆ. ಈ ವಿಷಯದ ಬಗ್ಗೆ ರೈಲ್ವೆ ಮಂಡಳಿಯು ಎಲ್ಲಾ ವಲಯ ರೈಲ್ವೆಗಳಿಗೆ ಪತ್ರವನ್ನು ಕಳುಹಿಸಿದೆ. ವರದಿಯ ಪ್ರಕಾರ, ಕನ್‌ಫರ್ಮ್‌ ಟಿಕೆಟ್‌ ಇದ್ದವರಿಗೆ ನಿಗದಿತ ತೂಕದ ಮಿತಿಯೊಳಗಿನ ಲಗೇಜನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವ ಸೌಲಭ್ಯವನ್ನು ತಕ್ಷಣವೇ ನೀಡಬೇಕು ಎಂದು ರೈಲ್ವೆ ಮಂಡಳಿ ನಿರ್ದೇಶನ ಕೊಟ್ಟಿದೆ. ಈ ಸೇವೆಯು ಪ್ರಯಾಣಿಕರು ತಮ್ಮ ಲಗೇಜ್ ಅನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ ವಿಭಾಗಗಳಲ್ಲಿ ಇರಿಸಲು ಅವಕಾಶ ಮಾಡಿಕೊಡುತ್ತದೆ. ಜುಲೈ 31 ರಿಂದ ಅಂದರೆ ಇವತ್ತಿನಿಂದ ಈ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ನಿರ್ಧಾರವು ಮಾರ್ಚ್ 2025 ರಲ್ಲಿ ತೆಗೆದುಕೊಂಡ ತೀರ್ಮಾನವನ್ನು ಆಧರಿಸಿದೆ ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ.

ನಿಗದಿತ ಮಿತಿಯನ್ನು ಮೀರಿ ಲಗೇಜ್ ಬುಕ್ ಮಾಡುವಂತಿಲ್ಲ

ರೈಲ್ವೆ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ, ಉಚಿತ ಲಗೇಜ್ ಮಿತಿ AC 3 ಟೈರ್ (3AC), AC 3 ಎಕಾನಮಿ (3E) ಮತ್ತು AC ಚೇರ್ ಕಾರ್ (CC) ಗಳಿಗೆ ಒಂದೇ ಆಗಿರುತ್ತದೆ. ಈ ಕೋಚ್‌ಗಳಲ್ಲಿ ಅನುಮತಿಸಲಾದ ಮಿತಿಗಿಂತ ಹೆಚ್ಚಿನ ಲಗೇಜ್‌ಗಳನ್ನು ಬುಕ್ ಮಾಡಲು ಅವಕಶ ಇರೋದಿಲ್ಲ.

ಯಾವ ಕ್ಲಾಸ್‌ನಲ್ಲಿ ಎಷ್ಟು ಲಗೇಜ್ ತೆಗೆದುಕೊಂಡು ಹೋಗಬಹುದು?

ರೈಲ್ವೆ ನಿಯಮಗಳ ಪ್ರಕಾರ, ಪ್ರಥಮ ದರ್ಜೆ ಪ್ರಯಾಣಿಕರು 70 ಕೆಜಿ ವರೆಗೆ ಉಚಿತವಾಗಿ ಲಗೇಜ್ ತೆಗೆದುಕೊಂಡು ಹೋಗಬಹುದು. ಸೆಕೆಂಡ್‌ ಎಸಿ ಪ್ರಯಾಣಿಕರಿಗೆ 50 ಕೆಜಿ, ಥರ್ಡ್‌ ಎಸಿ, ಎಸಿ ಚೇರ್ ಕಾರ್ ಮತ್ತು ಸ್ಲೀಪರ್ ಕ್ಲಾಸ್ ಪ್ರಯಾಣಿಕರಿಗೆ 40 ಕೆಜಿ ಮತ್ತು ಸೆಕೆಂಡ್‌ ಸಿಟ್ಟಿಂಗ್‌ ಪ್ರಯಾಣಿಕರಿಗೆ 35 ಕೆಜಿ ವರೆಗೆ ಲಗೇಜ್ ಸಾಗಿಸಲು ಅವಕಾಶವಿದೆ.

ಹೆಚ್ಚುವರಿ ಲಗೇಜ್ ಮೇಲೆ ಪಾವತಿಸಬೇಕಯ ಶುಲ್ಕ

ಒಂದು ವೇಳೆ ನಿಗದಿ ಪಡಿಸಿದ ಮಿತಿಗಿಂತ ಹೆಚ್ಚಿನ ಲಗೇಜ್ ಅನ್ನು ತೆಗೆದುಕೊಂಡು ಹೋಗಬೇಕಾದರೆ ನಿಗದಿತ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ನಿಗದಿಪಡಿಸಲಾದ ಗರಿಷ್ಠ ಮಿತಿಯವರೆಗೆ ಮಾತ್ರ ಪ್ರಯಾಣಿಕರು ಲಗೇಜ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಹೀಗಾದಾಗ ಮಾತ್ರ ಪ್ರಯಾಣಿಕರು ಆರಾಮಾಗಿ ಪ್ರಯಾಣ ಮಾಡಬಹುದು. ಈ ನಿಯಮವನ್ನು ಮೀರಿದರೆ ತಪಾಸಣೆಯ ಸಮಯದಲ್ಲಿ ದಂಡ ವಿಧಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+