ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರಿಕ್ಷದಲ್ಲಿ ಒಂದು ರೋಮಾಂಚನಕಾರಿ ರೇಸ್!

By Dr Anantha Krishnan M
|
Google Oneindia Kannada News

ಬೆಂಗಳೂರು, ನ. 4: ಅಕ್ಟೋಬರ್ 17ರಂದು ಹರಿದಾಡಿದ ಟ್ವೀಟ್ ವೊಂದು ಭಾರತೀಯರಲ್ಲಿ ಸಂಚಲನ ಉಂಟುಮಾಡಿತ್ತು. ಜಾಗ್ವಾರ್ ಫೈಟರ್ ವಿಮಾನವೊಂದು ನಿರ್ಭಯ ಕ್ಷಿಪಣಿಯನ್ನು ಹಿಂದಕ್ಕೆ ಹಾಕಿದೆ! ಎಂಬುದೇ ಟ್ವೀಟ್ ನಲ್ಲಿದ್ದ ಅಂಶ. ಯುದ್ಧ ವಿಮಾನವೊಂದು ಕ್ಷಿಪಣಿಯನ್ನು ಹಿಂದಿಕ್ಕುವುದು ನಿಜವಾಗಿಯೂ ಒಂದು ಚಮಾತ್ಕಾರವೆ ಸರಿ ಎಂಬ ಮಾತುಗಳು ಕೇಳಿ ಬಂದಿದ್ದವು.

ನಿರ್ಭಯ ಕ್ಷಿಪಣಿ ಯಶಸ್ವಿ ಪರೀಕ್ಷೆ ಎರಡು ವಾರದ ನಂತರ ಅನೇಕ ಮಾಹಿತಿಗಳು ಲಭ್ಯವಾಗಿವೆ. ರಕ್ಷಣಾ ಇಲಾಖೆಗೆ ಶಕ್ತಿ ತುಂಬಿರುವ ಸ್ಕೈ ಥ್ರಿಲ್ಲರ್ ಎಲ್ಲವನ್ನು ಸಾಧ್ಯವಾಗಿಸಿದೆ. ಭಾರತದ ವಾಯುಸೇನೆಗೆ ಇವು ಮತ್ತಷ್ಟು ಶಕ್ತಿ ತುಂಬಿವೆ.[ಸೈನ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲಿರುವ ಬೆಂಗಳೂರ ಕ್ಷಿಪಣಿ]

ಮೂಲಗಳು ಹೇಳುವಂತೆ ಭಾರತದ ವಾಯು ಸೇನೆ ನಿರ್ಭಯ್ ವೇಗ ಅರಿಯಲು ಎರಡು ಸುಖೋಯ್ ಯುದ್ಧ ವಿಮಾನಗಳ ಪ್ರಯೋಗಕ್ಕೆ ಮುಂದಾಗಿತ್ತು. ಆದರೆ ಕೊನೆ ಕ್ಷಣದ ಬದಲಾವಣೆಯಂತೆ ಸುಖೋಯ್ ಬದಲಾಗಿ ಜಾಗ್ವಾರ್ ಯುದ್ಧ ವಿಮಾನ ಬಳಕೆ ಮಾಡಿಕೊಳ್ಳಲಾಯಿತು. ಅದು ಆಕಾಶದಲ್ಲಿ ಚಮತ್ಕಾರನ್ನೇ ಸೃಷ್ಟಿಸಿತು ಎಂದು ತಿಳಿಸಿವೆ.

ಪೈಲೆಟ್ ಗಳು ಸಮರ್ಪಕ ಅಂತರ ಕಾಯ್ದುಕೊಳ್ಳಬೇಕು
ಸುಖೋಯ್ ಮತ್ತು ಜಾಗ್ವಾರ್ ಯುದ್ಧ ವಿಮಾನಗಳೆರಡು ಬಹುದೂರ ಸಾಗುವ ಕ್ಷಿಪಣಿಗಳನ್ನು ಹಿಂದಿಕ್ಕಲು ಮೊದಲಿನಿಂದಲೂ ಬಳಕೆಯಾಗುತ್ತಿವೆ. ಆದರೆ ಅವುಗಳ ನಿಜವಾದ ಶಕ್ತಿ ಅರಿವಿಗೆ ಬಂದಿದ್ದು ನಿರ್ಭಯ್ ಕ್ಷಿಪಣಿಯನ್ನು ಹಿಂದಕ್ಕೆ ಹಾಕಿದಾಗಲೇ. ಕ್ಷಿಪಣಿ ಹಿಂದಿಕ್ಕುವುದು ಸುಲಭದ ಕೆಲಸವಲ್ಲ. ಪೈಲೆಟ್ ಗಳ ನಡುವೆ ಸಹಕಾರ ಇರಬೇಕಾದ್ದು ಅವಶ್ಯ.

ಎದುರಿಗೆ ಸಾಗುತ್ತಿರುವ ಕ್ಷಿಪಣಿಯ ವೇಗ ಎಷ್ಟಿದೆ? ಯಾವ ದಿಕ್ಕಿನಲ್ಲಿ ಸಾಗಿದರೆ ಹಿಂದಿಕ್ಕಬಹುದು? ಫೈಟರ್ ವಿಮಾನ ಎಲ್ಲಿ ಲ್ಯಾಂಡ್ ಆಗಬೇಕು ಅಥವಾ ಹಾರಾಡುತ್ತಿರುವ ಸ್ಥಳದ ವಾತಾವರಣ ಹೇಗಿದೆ? ಈ ಎಲ್ಲ ಅಂಶಗಳನ್ನು ಆಧರಿಸಿ ವಿಮಾನ ಚಲಾಯಿಸಬೇಕಾಗುತ್ತದೆ. ಅನುಭವಿ ಪೈಲೆಟ್ ಗಳನ್ನು ಮಾತ್ರ ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಭಾರತೀಯ ವಾಯುಸೇನೆಗೆ ಅಭಿನಂದನೆ ಸಲ್ಲಿಸಲೇಬೇಕು
ಡಿಆರ್ ಡಿಒ ನಿರ್ದೇಶಕ ಡಾ. ಕೆ.ತಮೀಳ್ ಮಣಿ ಭಾರತೀಯ ವಾಯುಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಕ್ಷಿಪಣಿ ಹಿಂದಿಕ್ಕುವ ಪ್ರಯತ್ನದಲ್ಲಿ ಯಾವುದೇ ಅವಘಡವಾಗದಂತೆ ನೋಡಿಕೊಳ್ಳಲಾಗಿದೆ. ನಿರ್ಭಯದ ಶಕ್ತಿ ಅರಿಯಲು ಸೇನೆ ಸೂಕ್ತ ರೀತಿಯಲ್ಲಿ ನೆರವು ನೀಡಿತು. ಅಲ್ಲದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ತಮಿಳ್ ಮಣಿ ಹೇಳಿದ್ದಾರೆ.

ಹಿಂದಿಕ್ಕುವುದು ಸುಲಭದ ಕೆಲಸವಲ್ಲ
ಆಕಾಶ ಮಾರ್ಗದಲ್ಲಿ ಕ್ಷಿಪಣಿಯೊಂದನ್ನು ಹಿಂದಿಕ್ಕುವುದು ಸುಲಭದ ಕೆಲಸವಲ್ಲ ಎಂದು ತೇಜಸ್ ಯುದ್ಧ ವಿಮಾನದ ಪೈಲೆಟ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನೀವು ಒಂದು ಕ್ಷಣ ವ್ಯತ್ಯಾಸ ಮಾಡಿಕೊಂಡರೂ ಕ್ಷಿಪಣಿಯನ್ನು ಹಿಡಿಯಲು ಸಾಧ್ಯವಾಗಲ್ಲ. ಜಾಗದಿಂದ ಯಾವಾಗ ಹೊರಡಬೇಕು ಎಂಬುದನ್ನು ಮೊದಲೇ ಅರಿತಿದ್ದು ಸೂಕ್ತ ಸಿದ್ಧತೆ ಮಾಡಿಕೊಂಡಿರಬೇಕು. ಕ್ಷಿಪಣಿ ಹಾರಾಟ, ವೇಗ ಎಲ್ಲವನ್ನು ಮನಸ್ಸಿನಲ್ಲಿಯೇ ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ. ಕ್ಷಿಪಣಿ ವೇಗಕ್ಕೆ ವಿಮಾನದ ವೇಗವನ್ನು ಶೀಘ್ರವಾಗಿ ಹೆಚ್ಚಿಸಿಕೊಳ್ಳಬೇಕಾಗಿತ್ತದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ನಿರ್ಭಯ ಕ್ಷಿಪಣಿ ಶಕ್ತಿ ಪರೀಕ್ಷಿಸಲು ತೆರಳಿದ್ದ ಜಾಗ್ವಾರ್ ಯುದ್ಧ ವಿಮಾನ ಸಹ ತನ್ನ ಶಕ್ತಿ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದೆ.

nirbhay 3
English summary
Two weeks after India's successful attempt of launching Nirbhay, details are here about the well-coordinated ‘sky thriller' choreographed by the DRDO and executed by the Indian Air Force (IAF) with support from the Indian Navy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X