ಮತ್ತೆ ಶಾಕ್! ಡೀಸೆಲ್ ಬೆಲೆ ಏರಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯ ತಂಟೆಗೆ ಹೋಗಿಲ್ಲ. ಆದರೆ, ಜನವರಿ 17, 2013ರ ಸರ್ಕಾರ ಆದೇಶದ ಅನ್ವಯ ಡೀಸೆಲ್ ದರ ಏರಿಕೆ ಮಾಡಲಾಗಿದೆ.
ಕಳೆದ ತಿಂಗಳ ಕೊನೆಯಲ್ಲೂ ಡೀಸೆಲ್ ಬೆಲೆಯನ್ನು ಲೀ.50 ಪೈಸೆ ಹೆಚ್ಚಿಸುವ ಮೂಲಕ ಜನರಿಗೆ ಸಾರ್ವಜನಿಕರಿಗೆ ಹೊರೆ ಉಂಟುಮಾಡಲಾಗಿತ್ತು. ಕಳೆದ 6 ತಿಂಗಳಿಂದ ಅಂದರೆ, ಮೇ 1ರ ಬಳಿಕ ಪೆಟ್ರೋಲ್ ಸುಮಾರು 15 ರೂ. ಏರಿಕೆಯಾಗಿತ್ತು.
ನವದೆಹಲಿಯಲ್ಲಿ ಪ್ರತಿ ಲೀಟರ್ ಗೆ ಡೀಸೆಲ್ 53.67 ರು ನಷ್ಟಿದ್ದರೆ, ಮುಂಬೈನಲ್ಲಿ ಇದೇ ದರ 60.7 ರು ನಷ್ಟಾಗುತ್ತದೆ. ಪ್ರತಿ ರಾಜ್ಯದ ಸ್ಥಳೀಯ ತೆರಿಗೆ ಸೇರಿಸಿದರೆ ಬೆಲೆ ಇನ್ನಷ್ಟು ಏರಿಕೆ ಕಾಣುತ್ತದೆ.












Click it and Unblock the Notifications