ರುಚಿಕರ ರೆಸ್ಟೋರೆಂಟ್‌ಗಳಾಗಿ ಬದಲಾದ ರೈಲಿನ ಹಳೆಯ ಕೋಚ್‌ಗಳು

ಮುಂಬೈ, ಆಗಸ್ಟ್ 14: ಭಾರತೀಯ ರೈಲ್ವೆಯು ತನ್ನ ಹಳೆಯ ರೈಲ್ವೆ ಕೋಚ್‌ಗಳನ್ನು ಏನು ಮಾಡುತ್ತದ ಎಂದು ಹಲವರಿಗೆ ಕೌತುಕವಿರಬಹುದು. ಆದರೆ ಇಲ್ಲಿ ಎಲ್ಲರೂ ನಿಬ್ಬೆರಗಾಗುವಂತೆ ಈ ಹಳೆಯ ರೈಲ್ವೆ ಕೋಚ್‌ಗಳು ರುಚಿಕರ ರೆಸ್ಟೋರೆಂಟ್‌ಗಳಾಗಿ ಮಾರ್ಪಟ್ಟಿವೆ.

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಉದ್ಯೋಗಾವಕಾಶಗಳು ಮತ್ತು ಆದಾಯವನ್ನು ಹೆಚ್ಚಿಸಲು ರೈಲ್ವೆ ಮಂಡಳಿಯು ಹಳೆಯ ರೈಲು ಬೋಗಿಗಳನ್ನು ರೆಸ್ಟೋರೆಂಟ್‌ಗಳಾಗಿ ಪರಿವರ್ತಿಸಿದೆ. "ಇಲ್ಲಿನ ಆಹಾರವು ಹೊಸ ಅನುಭವವಾಗಿತ್ತು. ನಾವು ಇದನ್ನು ಚಕ್ರಗಳಲ್ಲಿ ಆಹಾರದ ಅರಮನೆ ಎಂದು ಕರೆಯಬಹುದು. ಇದು ಸರ್ಕಾರದ ಉತ್ತಮ ಉಪಕ್ರಮವಾಗಿದೆ ಎಂದು ಇಲ್ಲಿಗೆ ಭೇಟಿ ನೀಡಿದ ಸಂದರ್ಶಕರೊಬ್ಬರು ಹೇಳಿದ್ದಾರೆ.

Old train coaches converted into delicious restaurants in nashik

ಈ ರೆಸ್ಟೋರೆಂಟ್‌ ಅಮರಾವತಿ, ಅಕೋಲಾ ಮತ್ತು ಶೆಗಾಂವ್‌ನ ಯಶಸ್ವಿ ಉದ್ಯಮಗಳ ನಂತರ ಭೂಸಾವಲ್ ವಿಭಾಗದೊಳಗಿನ ರೈಲು ಕೋಚ್ ರೆಸ್ಟೋರೆಂಟ್‌ಗಳ ಲೀಗ್‌ಗೆ ನಾಲ್ಕನೇ ಸೇರ್ಪಡೆಯಾಗಿದೆ. ಗ್ರಾಹಕರು ಈಗ ರುಚಿಕರವಾದ ಆಹಾರವನ್ನು ಸವಿಯುತ್ತಾ ಒಂದು ಉತ್ತಮ ವ್ಯವಸ್ಥೆಯಲ್ಲಿ ಆನಂದಿಸಬಹುದು.

ದೇಶದ ಅನೇಕ ಕಡೆ ಭಾರತೀಯ ರೈಲ್ವೆಯು ಈಗ ರೈಲ್ವೆ ರೆಸ್ಟೋರೆಂಟ್‌ ಅನ್ನು ತೆರೆಯುತ್ತಿದೆ. ಇತ್ತೀಚೆಗೆ ನೈಋತ್ಯ ರೈಲ್ವೆ (SWR) ಬೆಂಗಳೂರಿನ ಎರಡು ರೈಲು ನಿಲ್ದಾಣಗಳಲ್ಲಿ ಎರಡು ಹೊಸ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಲು ಮುಂದಾಗಿತ್ತು. ಅವುಗಳಲ್ಲಿ ಒಂದು KSR ಬೆಂಗಳೂರು ಸಿಟಿ ರೈಲು ನಿಲ್ದಾಣ ಮತ್ತು ಮತ್ತೊಂದು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣ (SMVB) ತೆರೆಯಲು ನಿರ್ಧರಿಸಲಾಗಿತ್ತು.

ಅಲ್ಲದೆ ಬೆಳಗಾವಿ ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆಯು ಹಳೆಯ ಬೋಗಿಗಳಿಂದ ಹೊಸ ರೈಲ್ವೆ ರೆಸ್ಟೋರೆಂಟ್ ಅನ್ನು ಸ್ಥಾಪಿಸಿತ್ತು. ರೆಸ್ಟೋರೆಂಟ್‌ಗಳಲ್ಲಿ ಎಸಿ ಅಳವಡಿಸಲು ಮುಂದಾಗಲಾಗಿತ್ತು. ನಿಲ್ದಾಣದ ಮೂಲಕ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಈ ವರ್ಷದ ಸೆಪ್ಟೆಂಬರ್‌ನಲ್ಲಿ ರೆಸ್ಟೋರೆಂಟ್‌ಗಳಲ್ಲಿ ಸೇವೆಗಳನ್ನು ಪಡೆದುಕೊಳ್ಳಲು ಪ್ರಾರಂಭಿಸಬಹುದು ಎಂದು ತಿಳಿಸಲಾಗಿದೆ. ನಿಲ್ದಾಣದ ಹಳೆಯ ಪ್ರವೇಶದ್ವಾರದ ಬಳಿ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟವನ್ನು ಒದಗಿಸುವ ನಿರೀಕ್ಷೆಯಿದೆ.

Old train coaches converted into delicious restaurants in nashik

ಪ್ರಯಾಣಿಕರಿಗೆ ಹೊಸ ರುಚಿಯ ಆಹಾರದ ಅನುಭವವನ್ನು ನೀಡಲು ಹಳೆಯ ರೈಲ್ವೇ ಕೋಚ್ ಅನ್ನು ಮಾರ್ಪಡಿಸಲಾಗಿದೆ. ಇದನ್ನು ಸಾಕಷ್ಟು ಆಸನ ಸೌಲಭ್ಯಗಳೊಂದಿಗೆ ರೆಸ್ಟೋರೆಂಟ್ ಆಗಿ ನವೀಕರಿಸಲಾಗುತ್ತಿದೆ. ರೆಸ್ಟೊರೆಂಟ್ ಉತ್ತರ ಮತ್ತು ದಕ್ಷಿಣ ಭಾರತದ ಖಾದ್ಯಗಳೆರಡನ್ನೂ ಪೂರೈಸುವ ನಿರೀಕ್ಷೆಯಿದೆ. ಕೋಚ್‌ನ ಒಳಗೆ 50 ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ. ಅದರ ಹೊರಗೆ ಇನ್ನೂ ಕೆಲವು. ಈ ರೆಸ್ಟೋರೆಂಟ್‌ನಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ತಿಂಡಿ ಮತ್ತು ರಾತ್ರಿಯ ಊಟವನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+