Get Updates
Get notified of breaking news, exclusive insights, and must-see stories!

ಚುನಾವಣೆ ಹಿನ್ನಲೆ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆಗೆ ಬ್ರೇಕ್!

ಅಹಮದಾಬಾದ್, ಡಿಸೆಂಬರ್ 11: ಪ್ರತಿ ತಿಂಗಳು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡುತ್ತಿದ್ದ ತೈಲ ಕಂಪನಿಗಳು ಡಿಸೆಂಬರ್ ತಿಂಗಳಿನಲ್ಲಿ ಬೆಲೆ ಪರಿಷ್ಕರಣೆ ಮಾಡಿಲ್ಲ. ಇದಕ್ಕೆ ಕಾರಣ ಗುಜರಾತಿನ ವಿಧಾನಸಭೆ ಚುನಾವಣೆ.

ಈಗ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ., ಇಂಡಿಯನ್ ಆಯಿಲ್ ಕಂಪನಿಗಳು ಪ್ರತಿ ತಿಂಗಳ ದರ ಪರಿಷ್ಕರಣೆಯನ್ನು ಕೈಬಿಟ್ಟಿವೆ. ಡಿಸೆಂಬರ್ ತಿಂಗಳಿನಲ್ಲಿ ಎಲ್.ಪಿ.ಜಿ. ಬೆಲೆಯನ್ನು ಏರಿಕೆ ಮಾಡಲಾಗಿಲ್ಲ.

Oil firms skip monthly LPG price hike for the first time in 17 months

2018 ರ ಮಾರ್ಚ್ ವೇಳೆಗೆ ಸಬ್ಸಿಡಿಯನ್ನು ಸಂಪೂರ್ಣವಾಗಿ ಕೈಬಿಡಲಾಗುತ್ತದೆ. ಇದಕ್ಕಾಗಿ ಪ್ರತಿ ತಿಂಗಳು ದರ ಏರಿಕೆ ಮಾಡಲಾಗುತ್ತಿದೆ. ಕಳೆದ 17 ತಿಂಗಳಲ್ಲಿ 19 ಕಂತುಗಳಲ್ಲಿ 76.5 ರೂ. ಏರಿಕೆ ಮಾಡಲಾಗಿದೆ.

14.2 ಕೆ.ಜಿ. ಎಲ್.ಪಿ.ಜಿ. ಸಿಲಿಂಡರ್ ಗೆ 251.31 ರೂ. ಸಬ್ಸಿಡಿ ನೀಡಲಾಗ್ತಿದೆ. ಡಿಸೆಂಬರ್ ನಲ್ಲಿ ಕಂಪನಿಗಳು ದರ ಏರಿಕೆ ಮಾಡದಿರಲು ಕೇಂದ್ರ ಸರ್ಕಾರದ ಸೂಚನೆ ಗುಜರಾತ್ ಚುನಾವಣೆ ಕಾರಣವಿರಬಹುದೆಂದು ಹೇಳಲಾಗಿದೆ. ಆದರೆ, ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+