New Pension Scheme vs OPS: ಎನ್‌ಪಿಎಸ್ ನಿಯಮ ತಿರುಚಲಿದೆಯೇ ಕೇಂದ್ರ ಸರ್ಕಾರ?
ಬೆಂಗಳೂರು, ಜೂನ್ 22: ಹೊಸ ಪಿಂಚಣಿ ಯೋಜನೆ (NPS) ಯೋಜನೆಯನ್ನು ಹಿಂಪಡೆಯುವುದು ಮತ್ತು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಮರು-ಅನುಷ್ಠಾನ ಕುರಿತಂತೆ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಕೆಲವು ರಾಜ್ಯಗಳ ಮಧ್ಯೆ ತಿಕ್ಕಾಟ ಮುಂದುವರಿದೆ. ಈ ಮಧ್ಯೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಆರೋಪವೊಂದು ಕೇಳಿ ಬಂದಿದೆ.
ಪ್ರಧಾನಿ ಮೋದಿ ಸರ್ಕಾರವು ತನ್ನ ಉದ್ಯೋಗಿಗಳಿಗೆ ಸಂಬಳದ ಶೇಕಡಾ 40 ರಿಂದ 45ರಷ್ಟು ಕನಿಷ್ಠ ಪಿಂಚಣಿ ನೀಡುವುದರ ಖಚಿತಪಡಿಸಿಕೊಳ್ಳುವ ಸಲುವಾಗಿ ಹೊಸ ಪಿಂಚಣಿ ಯೋಜನೆಯ (NPS) ನಿಯಮಗಳನ್ನು ತಿರುಚಲು ಯೋಜಿಸಿದೆ. ಈ ಕುರಿತು ಹೆಸರು ಹೇಳದೇ ಕೆಲವು ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಪಿಂಚಣಿ ವಿಚಾರವಾಗಿ ಕೇಂದ್ರದ ಕೆಲ ನಿರ್ಧಾರಗಳು ರಾಜ್ಯಗಳ ಬೇಡಿಕೆಗೆ ಅಂತ್ಯ ಹಾಡಬಹುದು. ಅಲ್ಲದೇ ಪ್ರಸ್ತುತದಲ್ಲಿರುವ ಸಂಯೋಜಿತ ಪಿಂಚಣಿ ಯೋಜನೆಯನ್ನು ಬದಲಾಯಿಸುವ ಮೂಲಕ ಸರ್ಕಾರ ಗುರಿ ಉದ್ದೇಶ ಸಾಧಿಸಬಹುದು ಎಂದು ಹೇಳಲಾಗುತ್ತಿದೆ.
ಸಮಿತಿ ರಚಿಸಿದ್ದ ಸರ್ಕಾರ
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಸತತ ಮೂರನೇ ಬಾರಿಗೆ ಲೋಕಸಭಾ ಚುನಾವಣೆ 2024 ಅನ್ನು ಎದುರಿಸಲಿದೆ. ರಾಜ್ಯ ಚುನಾವಣೆಗಳೊಂದಿಗೆ ಒಂದು ವರ್ಷದಲ್ಲಿ ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ಏಪ್ರಿಲ್‌ನಲ್ಲಿ ಸರ್ಕಾರವು ಸಮಿತಿಯನ್ನು ರಚಿಸಿತ್ತು. ಅದಾದ ಬಳಿಕ ಹೊಸ ಪಿಂಚಣಿ ಯೋಜನೆ ನಿಯಮ ತಿರುಚಲು ಯೋಜಿಸಿದೆ ಎಂಬ ಅಂಶವು ಮುನ್ನೆಲೆಗೆ ಬಂದಿದೆ.

ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು 2004ರಲ್ಲಿ ಮಹತ್ವದ ಆರ್ಥಿಕ ಸುಧಾರಣೆ ತಂದಿತ್ತು. ನಂತರ ಅಳವಡಿಸಿಕೊಂಡ ಹೊಸ ಪಿಂಚಣಿ ಯೋಜನೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಸ್ತುತದಲ್ಲಿ ಹಳೆಯ ಪಿಂಚಣಿ ವ್ಯವಸ್ಥೆ ಮರು ಅನುಷ್ಠಾನದ ನಿರೀಕ್ಷೆಯಲ್ಲಿ ಕೆಲವು ರಾಜ್ಯಗಳು ಕಾಯುತ್ತಿವೆ. ಸರ್ಕಾರಿ ನೌಕರರ ಆಗ್ರಹವು ಅದೇ ಆಗಿದೆ.
ಹೊಸ ಮತ್ತು ಹಳೆಯ ಪಿಂಚಣಿ ಯೋಜನೆ ಬಗ್ಗೆ ಚರ್ಚೆ
ದೇಶದಲ್ಲಿ ಕೆಲವು ವಿರೋಧ ಪಕ್ಷಗಳು ಮತ್ತು ಕೆಲವು ಆಡಳಿತ ಪಕ್ಷಗಳು ಹೊಸ ಪಿಂಚಣಿ ಯೋಜನೆಗೆ ಬದಲಾಗಿ ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸುತ್ತಿವೆ. ಹೊಸ ವ್ಯವಸ್ಥೆಯಿಂದ ಉದ್ಯೋಗಸ್ಥರು ಆರ್ಥಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿವೆ.
ಒಂದು ವರ್ಷದ ಹಿಂದೆ ಹಿಮಾಚಲ ಪ್ರದೇಶ, ಕಳೆದ ತಿಂಗಳು ಕರ್ನಾಟಕ ಮತ್ತು ಕೆಲವು ತಿಂಗಳ ಹಿಂದೆ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸಂದರ್ಭಗಳಲ್ಲಿ ವಿಪಕ್ಷಗಳಿಗೆ ಇದು ಗೆಲುವಿನ ಅಸ್ತ್ರವಾಗಿತ್ತು. ಆಡಳಿತ ಪಕ್ಷದ ಮೇಲೆ ದಾಳಿ ನಡೆಸುವ ಅಸ್ತ್ರವೂ ಆಗಿತ್ತು. ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ಈಗಾಗಲೇ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಿವೆ. ಹೊಸದನ್ನು ಕೈ ಬಿಟ್ಟಿವೆ.
ಹೊಸ ಪಿಂಚಣಿ ಯೋಜನೆಗೆ (NPS) ನೌಕರರು ತಮ್ಮ ಮೂಲ ವೇತನದ ಶೇಕಡಾ 10 ಮತ್ತು ಸರ್ಕಾರವು ಶೇಕಡಾ 14 ರಷ್ಟು ಕೊಡುಗೆ ನೀಡಬೇಕು. ಅಂತಿಮವಾಗಿ ಪಾವತಿಯು ಅಂದಿನ ಮಾರುಕಟ್ಟೆಯ ಆದಾಯದ ಆಧಾರದ ಮೇಲೆ ಬರಬೇಕು. ಇದನ್ನು ಹೆಚ್ಚಾಗಿ ಫೆಡರಲ್ ಸಾಲದಲ್ಲಿ ಹೂಡಿಕೆ ಮಾಡಲಾಗುತ್ತದೆ. ಆದರೆ ಹಳೆಯ ಪಿಂಚಣಿ ವ್ಯವಸ್ಥೆ (OPS) ನೌಕರನ ಕೊನೆಯ ಸಂಬಳದ ಶೇಕಡಾ 50 ನಷ್ಟು ಸ್ಥಿರ ಪಿಂಚಣಿಯನ್ನು ಖಾತರಿಪಡಿಸುತ್ತದೆ. ಇದು ನಿವೃತ್ತಿ ಜೀವನದಲ್ಲಿ ಆಸರೆಯಾಗುತ್ತದೆ. ಪ್ರಸ್ತುತ ಆದಾಯವು ನೌಕರರು ತಮ್ಮ ಕೊನೆಯ ಸಂಬಳದ ಸುಮಾರು ಶೇಕಡಾ 38ರಷ್ಟು ಪಿಂಚಣಿಯಾಗಿ ಪಡೆಯುತ್ತಾರೆ.
ಸರ್ಕಾರಿ ಅಧಿಕಾರಿಗಳು ಹೇಳುವ ಪ್ರಕಾರ, ಹೊಸ ಪಿಂಚಣಿ ಯೋಜನೆಯಡಿ ನೌಕರರು ಮತ್ತು ಸರ್ಕಾರವು ಕೊಡುಗೆಗಳನ್ನು ನೀಡಬಹುದು. ಆದರೆ ನೌಕರರು ತಮ್ಮ ಕೊನೆಯ ಸಂಬಳದ ಶೇಕಡಾ 40-45 ರಷ್ಟು ಅನ್ನು ಪಿಂಚಣಿಯಾಗಿ ಪಡೆಯುತ್ತಾರೆ. ಇದರ ಹೊರತು ಕೇಂದ್ರ ಸರ್ಕಾರ ಹಳೆಯ ಪಿಂಚಣಿ ವ್ಯವಸ್ಥೆ ಮರಳಲು ಯೋಚಿಸಿಲ್ಲ ಎಂದು ತಿಳಿಸಿದರು.












Click it and Unblock the Notifications