ಡಿಸೆಂಬರ್ 05ರಿಂದ ಪ್ಯಾನ್ ಕಾರ್ಡಿನಲ್ಲಿ ತಂದೆ ಹೆಸರು ಕಡ್ಡಾಯವಲ್ಲ
Recommended Video

Pan Card : ಡಿಸೆಂಬರ್ 5ರಿಂದ ಪಾನ್ ಕಾರ್ಡ್ ನಲ್ಲಿ ತಂದೆಯ ಹೆಸರು ಕಡ್ಡಾಯವಲ್ಲ | Oneindia Kannada
ನವದೆಹಲಿ, ನವೆಂಬರ್ 21: ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳನ್ನು ಮಾಡಿದ್ದು, ಡಿಸೆಂಬರ್ 05ರಿಂದ ಜಾರಿಗೆ ಬರಲಿದೆ.
ಮುಖ್ಯವಾಗಿ ಪ್ಯಾನ್ ಕಾರ್ಡ್ ನಲ್ಲಿ ಕಾರ್ಡುದಾರರ ಹೆಸರಿನೊಂದಿಗೆ ತಂದೆಯ ಹೆಸರು ಕಡ್ಡಾಯವಲ್ಲ ಎಂಬ ಬದಲಾವಣೆ ತರಲಾಗಿದೆ. ಅರ್ಜಿ ಸಲ್ಲಿಸುವಾಗ ತಂದೆಯ ಹೆಸರು ನಮೂದಿಸುವುದು ಕಡ್ಡಾಯವಲ್ಲ ಎಂದು ಇಲಾಖೆ ಆದೇಶ ನೀಡಿದೆ.
ಆದಾಯ ತೆರಿಗೆ ನಿಯಮಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿಬಿಡಿಟಿ) ತಿದ್ದುಪಡಿ ಮಾಡಿ, ಆದೇಶ ನೀಡಲಾಗಿದೆ. ಕೇವಲ ತಾಯಿಯನ್ನು ಪೋಷಕರಾಗಿ ಹೊಂದಿರುವ ಅರ್ಜಿದಾರರಿಗೆ ಇದರಿಂದ ಅನುಕೂಲವಾಗಲಿದೆ.

ತಾಯಿ ಹೆಸರನ್ನು ಮಾತ್ರ ನಮೂದಿಸಿ, ಪ್ಯಾನ್ ಕಾರ್ಡ್ ಪಡೆಯಬಹುದು. ಪಾಸ್ ಪೋರ್ಟ್ ಪಡೆಯುವಾಗಲೂ ಇದೇ ರೀತಿ ಬದಲಾವಣೆ ತಂದಿರುವುದನ್ನು ಇಲ್ಲಿ ಕಾಣಬಹುದು.
ವಾರ್ಷಿಕವಾಗಿ 2.5 ಲಕ್ಷ ರು ಅಥವಾ ಅಧಿಕ ಆದಾಯ ಹೊಂದಿರುವ ಸಂಸ್ಥೆಗಳು ಪ್ಯಾನ್ ಕಾರ್ಡ್ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.












Click it and Unblock the Notifications