ಹಿಂದೂ ಕುಟುಂಬಕ್ಕೆ ಫ್ಯಾಮಿಲಿ ಪ್ಲ್ಯಾನಿಂಗ್ ಬೇಡ: ಸಾಧ್ವಿ

ನವದೆಹಲಿ, ಜ.13: ಹಿಂದೂ ಮಹಿಳೆಯರು ಕನಿಷ್ಠ 4 ಮಕ್ಕಳಿಗೆ ಜನ್ಮ ನೀಡಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಕರೆ ನೀಡಿ ಶೋಕಾಸ್ ನೋಟಿಸ್ ಪಡೆದುಕೊಂಡಿದ್ದಾರೆ. ಅದರೆ, ಸಾಕ್ಷಿ ಮಹಾರಾಜ್ ಹೇಳಿಕೆಯನ್ನು ಸಾಧ್ವಿ ಪ್ರಾಚಿ ಸಮರ್ಥಿಸಿಕೊಂಡಿದ್ದಾರೆ.

ಭಿಲ್ವಾರಾದಲ್ಲಿ ಭಾನುವಾರ ವಿಎಚ್‌ ಪಿ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ್ದ ಸಾಧ್ವಿ ಪ್ರಾಚಿ, ಹಿಂದೂ ರಾಷ್ಟ್ರದ ಕನಸು ನನಸಾಗಬೇಕೆಂದರೆ 'ನಾವಿಬ್ಬರು, ನಮಗೆ ನಾಲ್ವರು' ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. [ಸಾಧ್ವಿ ನಿರಂಜನ್ ಜ್ಯೋತಿ ಯಾರು?]

Now BJP leader Sadhvi Prachi courts controversy, backs Sakshi Maharaj's four kids remark

ನಿಮಗೆ ಶ್ರೀರಾಮಭಕ್ತರ (ಬಿಜೆಪಿ) ಸರ್ಕಾರ ಬೇಕೋ ಅಥವಾ ಅಕ್ರಮ ಸಂತಾನದವರ (ಸೋನಿಯಾ-ಕಾಂಗ್ರೆಸ್) ಸರ್ಕಾರ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದು ವಿವಾದಿತ ಹೇಳಿಕೆ ನೀಡಿದ್ದ ಸಾಧ್ವಿ ಪ್ರಧಾನಿ ನರೇಂದ್ರಮೋದಿ ಅವರಿಂದ ಬೈಯಿಸಿಕೊಂಡು ಕ್ಷಮೆಯಾಚಿಸಿದ್ದರು.

ನಾಲ್ಕು ಜನ ಹೆಂಡತಿಯರಿಗೆ 40 ಮಕ್ಕಳು ಎಂಬ ಪರಿಕಲ್ಪನೆಯನ್ನು ಭಾರತದಲ್ಲಿ ಅಳವಡಿಸಲು ಸಾಧ್ಯವಿಲ್ಲ. ಹಿಂದೂ ಸಮಾಜ ರಕ್ಷಣೆಗೆ ಇರುವುದು ಒಂದೇ ದಾರಿ. ಸಮಾಜದ ಪ್ರತಿಯೊಬ್ಬ ಮಹಿಳೆಯು ನಾಲ್ಕು ಮಕ್ಕಳನ್ನು ಪಡೆಯಬೇಕು ಎಂದು ಸಾಕ್ಷಿ ಮಹಾರಾಜ್ ಮೀರತ್ ನಲ್ಲಿ ನಡೆದ ಸಂತ ಸಮಾಗಮ ಮಹೋತ್ಸವದಲ್ಲಿ ಹೇಳಿರುವುದು ಚರ್ಚೆಗೆ ಕಾರಣವಾಗಿತ್ತು.

ಈ ಹಿಂದೆ ಕೂಡಾ ಯುಪಿಎ ಸರ್ಕಾರದ ಸಚಿವರು ವಿವಾದಿತ ಹೇಳಿಕೆಗಳನ್ನು ನೀಡಿದ ಉದಾಹರಣೆಗಳಿವೆ. ತಪ್ಪಿ ಮಾಡಿದವರು ತಿದ್ದಿ ನಡೆಯಲು ಅವಕಾಶ ನೀಡಬೇಕು ಎಂದು ಬಿಜೆಪಿ ಪ್ರಕರಣಕ್ಕೆ ಇತಿಶ್ರೀ ಹಾಡಲು ಯತ್ನಿಸುತ್ತಿದೆ. ವಿಶ್ವ ಹಿಂದೂಪರಿಷತ್ ಹಾಗೂ ಹಿಂದೂ ಸಂಘಟನೆ ಪರ ಸಂಸದರ ಹೇಳಿಕೆಗಳಿಂದ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕರಕ್ಕೆ ಇರಸು ಮುರುಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+