ಅಪನಗದೀಕರಣದಿಂದಾಗಿ ಜಿಡಿಪಿಗೆ ಭಾರೀ ಹಿನ್ನಡೆ
ಕಳೆದ ವರ್ಷಾಂತ್ಯಕ್ಕೆ ಭಾರತ ಸರ್ಕಾರ ಕೈಗೊಂಡಿದ್ದ ಅಪನಗದೀಕರಣದ ನಿರ್ಧಾರದಿಂದಾಗಿ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ ಶೇ. 6.1ಕ್ಕೆ ಕುಸಿದಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಅತಿ ಕಡಿಮೆ ಜಿಡಿಪಿ ಎಂದು ಹೇಳಲಾಗಿದೆ.
ನವದೆಹಲಿ, ಮೇ 31: ಕಳೆದ ವರ್ಷಾಂತ್ಯಕ್ಕೆ ಕೇಂದ್ರ ಸರ್ಕಾರ ಕೈಗೊಂಡಿದ್ದ ಅಪನಗದೀಕರಣ ನಿರ್ಧಾರದ ಪರಿಣಾಮವಾಗಿ 2017ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ. 6.1ಕ್ಕೆ ಕುಸಿದಿದೆ.
ಇದು ಕಳೆದ ಮೂರು ವರ್ಷಗಳಲ್ಲಿ ಭಾರತವು ಕಂಡ ಅತ್ಯಂತ ಕೆಳ ಮಟ್ಟದ ಜಿಡಿಪಿ ಸೂಚ್ಯಂಕವಾಗಿದೆ ಎಂದು ಹೇಳಲಾಗಿದೆ.

ಹೀಗೆ, ಜಿಡಿಪಿ ಪತನದಿಂದಾಗಿ ಏಷ್ಯಾ ರಾಷ್ಟ್ರಗಳಲ್ಲಿ ಚೀನಾ ಬಿಟ್ಟರೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊದಲ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಭಾರತ ಕಳೆದುಕೊಂಡಿದೆ.
2016-17ರ ಈ ಅವಧಿಯಲ್ಲಿ ಭಾರತ ಕಂಡಿರುವ ಜಿಡಿಪಿ (ಶೇ. 6.1) ಅತ್ಯಂತ ಕಡಿಮೆ ಎಂದು ಹೇಳಲಾಗಿದ್ದು, 2015-16ರ ಅವಧಿಯಲ್ಲಿ ಇದು ಶೇ. 8ರಷ್ಟಿತ್ತು. ಅದಕ್ಕಿಂತಲೂ ಹಿಂದಿನ ಹಣಕಾಸು ವರ್ಷದಲ್ಲಿ ಜಿಡಿಪಿಯು ಶೇ. 7.5ರಷ್ಟಿತ್ತು.












Click it and Unblock the Notifications