ನಾಗಾಲ್ಯಾಂಡ್ ನಲ್ಲಿ ನರೇಂದ್ರ ಮೋದಿ ಭರ್ಜರಿ ಪ್ರಚಾರ

ಗುವಾಹಟಿ, ಫೆಬ್ರವರಿ 22: ಈಶಾನ್ಯ ರಾಜ್ಯ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ- 2018ರ ಹಿನ್ನಲೆಯಲ್ಲಿ ಇಂದು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸಿದರು.

ಇಲ್ಲಿನ ಟ್ಯುಯನ್ಸಾಂಗ್ ನಲ್ಲಿ ಅವರು ಬೃಹತ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು. ಸಾರಿಗೆಯ ಮೂಲಕ ಈಶಾನ್ಯ ರಾಜ್ಯಗಳನ್ನು ಪರಿವರ್ತಿಸುವುದು ನನ್ನ ಗುರಿ ಎಂದು ಹೇಳಿದರು.

"ನಿಮ್ಮ ರಾಜ್ಯಕ್ಕೆ ಬಿಡುಗಡೆಯಾದ ಅನುದಾನ ನಿಮ್ಮನ್ನು ತಲುಪುವ ಭರವಸೆಯನ್ನು ನಾವು ನೀಡುತ್ತೇವೆ. ಸಾರ್ವಜನಿಕರ ಹಣ ಪೋಲಾಗುತ್ತಿರುವುದನ್ನು ತಂತ್ರಜ್ಞಾನದ ಮೂಲಕ ತಡೆಯಲಿದ್ದೇವೆ," ಎಂದವರು ಜನರಿಗೆ ಭರವಸೆ ನೀಡಿದರು.

Northeast is transformation by transportation: PM Narendra Modi in Nagaland

ಶಕ್ತಿವಂತ ಯುವ ಸಮುದಾಯ, ಕ್ರಿಯಾಶೀಲ ಮಹಿಳಾ ಸಮುದಾಯ, ಸೃಜನಶೀಲ ರೈತರು ಮತ್ತು ನಾಗಾಲ್ಯಾಂಡ್ ನ ಭೌಗೋಳಿಕತೆ ರಾಜ್ಯದ ಅಭಿವೃದ್ಧಿಯನ್ನು ಎತ್ತರಕ್ಕೆ ಏರಿಸಲು ಪೂರಕವಾಗಿದೆ ಎಂದು ಮೋದಿ ವಿಶ್ಲೇಷಿಸಿದರು.

Northeast is transformation by transportation: PM Narendra Modi in Nagaland

ನಾಗಾಲ್ಯಾಂಡ್ ನಲ್ಲಿ ಇದೇ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ಮಾರ್ಚ್ 3ರಂದು ಇಲ್ಲಿ ಮತಎಣಿಕೆ ನಡೆಯಲಿದೆ. 2013ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 60ರಲ್ಲಿ 1 ಸ್ಥಾನ ಗೆದ್ದುಕೊಂಡಿತ್ತು. ಇದರ ಹೊರತಾಗಿಯೂ ಈ ಬಾರಿ ಅಧಿಕಾರಕ್ಕೇರುವ ಕನಸನ್ನು ಕೇಸರಿ ಪಾಳಯ ಕಾಣುತ್ತಿದ್ದು ಸ್ಥಳೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+