ಸಹೋದ್ಯೋಗಿಯ ಸಂಭೋಗ- ಟೆಕ್ಕಿ ಅರೆಸ್ಟ್

Noida Techie Kshitiz Garg arrested for raping colleague,
ನೋಯ್ಡಾ, ನ.18- ಸಹೋದ್ಯೋಗಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

22 ವರ್ಷದ ಕ್ಷಿತಿಜ್ ಗರ್ಗ್ ಬಂಧಿತ ಆರೋಪಿ. ಈತ ಮದುವೆಯಾಗುವುದಾಗಿ ದೆಹಲಿ ಮೂಲದ ಸಹೋದ್ಯೋಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಧಿತ ಮಹಿಳೆಯ ದೂರನ್ನು ಆಧರಿಸಿ ಪೊಲೀಸರು ತಿಳಿಸಿದ್ದಾರೆ.

ಎಫ್ ಐಆರ್ ದಾಖಲಿಸಿಕೊಂಡ ನೋಯ್ಡಾ ಪೊಲೀಸರು ಆರೋಪಿ ಕ್ಷಿತಿಜನನ್ನು ಭಾನುವಾರ ಬಂಧಿಸಿದ್ದಾರೆ. ಈತ ಜೈಪುರದ ಖಾಸಗಿ ಕಾಲೇಜಿನಲ್ಲಿ ಬಿಟೆಕ್ ವ್ಯಾಸಂಗ ಮಾಡಿದ್ದಾನೆ. ನೋಯ್ಡಾದ ಸೆಕ್ಟರ್ 58ನಲ್ಲಿರುವ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಸಹೋದ್ಯೋಗಿ ಕ್ಷಿತಿಜ್ ಗರ್ಗ್ ಮದುವೆಯಾಗುವುದಾಗಿ ನನ್ನನ್ನು ನಂಬಿಸಿದ. ಅವನ ಮಾತನ್ನು ನಂಬಿ, ನಾನು ಮೋಸ ಹೋದೆ. ಎಲ್ಲಾ ಆದಮೇಲೆ ಅವನು ನನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ. ಮದುವೆಯಾಗುವುದಾಗಿ ನಂಬಿಸಿ, ಕೈಕೊಟ್ಟ ಪ್ರೇಮಿಯನ್ನು ಸರಿಯಾಗಿ ವಿಚಾರಿಸಿಕೊಳ್ಳಿ ಎಂದು ಬಾಧಿತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಸೆಪ್ಟೆಂಬರ್ 4ರಂದು ಸಹೋದ್ಯೋಗಿ ಕ್ಷಿತಿಜ್ ನನ್ನನ್ನು ಹೋಟೆಲಿಗೆ ಆಹ್ವಾನಿಸಿದ್ದ. ನಾನು ಅಲ್ಲಿಗೆ ಹೋದ ಮೇಲೆ ನನ್ನ ಜತೆ ಸಂಭೋಗ ನಡೆಸಿದ. ಅದಾದ ನಂತರ ಮದುವೆ ವಿಚಾರವನ್ನು ಕೈಬಿಟ್ಟ ಎಂದು ಯುವತಿ ತಿಳಿಸಿದ್ದಾರೆ.

ಬಾಧಿತ ಯುವತಿ ದೂರಿನನ್ವಯ ದೆಹಲಿ ಪೊಲೀಸರು zero FIR ದಾಖಲಿಸಿಕೊಂಡು ಪ್ರಕರಣವನ್ನು ನೋಯ್ಡಾ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಬಾಧಿತ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+