No UPI Day Cancelled: ಅಕ್ಟೋಬರ್ 2ರ 'ನೋ ಯುಪಿಐ ಡೇ' ಪ್ರತಿಭಟನೆ ವಾಪಸ್: ನಿರ್ಮಲಾ ಸೀತಾರಾಮನ್ ಜೊತೆಗಿನ ಚರ್ಚೆ ಯಶಸ್ವಿ

UPI: ಯುಪಿಐ ವಹಿವಾಟಿನ ಮೇಲೆ ಪ್ರಸ್ತಾಪಿಸಲಾಗಿದ್ದ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕವನ್ನು ವಿರೋಧಿಸಿ ವ್ಯಾಪಾರಿಗಳ ಸಂಘಟನೆಗಳು ಅಕ್ಟೋಬರ್ 2 ರಂದು ಕರೆ ನೀಡಿದ್ದ 'ನೋ ಯುಪಿಐ ಡೇ' ಪ್ರತಿಭಟನಾ ನಿರ್ಧಾರವನ್ನು ಹಿಂಪಡೆಯಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ವ್ಯಾಪಾರಿಗಳ ನಿಯೋಗ ನಡೆಸಿದ ಸುದೀರ್ಘ ಹಾಗೂ ಯಶಸ್ವಿ ಸಭೆಯ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಸಂಸದ ಪ್ರವೀಣ್ ಖಂಡೇಲ್‌ವಾಲ್‌ ಅವರ ನೇತೃತ್ವದಲ್ಲಿ ತೆರಳಿದ್ದ ಸಣ್ಣ ಮತ್ತು ಚಿಲ್ಲರೆ ವ್ಯಾಪಾರಿಗಳ ಒಕ್ಕೂಟದ ನಿಯೋಗವು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನೇರವಾಗಿ ಭೇಟಿಯಾಗಿದ್ದು, ಪ್ರಸ್ತಾವಿತ ಡಿಜಿಟಲ್ ಶುಲ್ಕದಿಂದ ಸಣ್ಣ ವ್ಯಾಪಾರಿಗಳಿಗೆ ಎದುರಾಗಬಹುದಾದ ಆತಂಕಗಳನ್ನು ಅವರ ಗಮನಕ್ಕೆ ತಂದಿತು. ಅಷ್ಟೇ ಅಲ್ಲದೆ ಈ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ತಮ್ಮ ಕೆಲವು ಪ್ರಮುಖ ಸಲಹೆಗಳನ್ನೂ ಸಚಿವರಿಗೆ ಸಲ್ಲಿಸಿತು.

No UPI Day Cancelled Traders Withdraw Oct 2 Protest After Meeting Union minister Nirmala Sitharaman

ಈ ಬೃಹತ್ ಪ್ರತಿಭಟನೆ ಮತ್ತು ಮುಷ್ಕರಕ್ಕೆ 'ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟ' ಹಾಗೂ 'ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ' ಜಂಟಿಯಾಗಿ ಕರೆ ನೀಡಿದ್ದವು. ಹಾಗಾದ್ರೆ ಇವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದೆ ಇಟ್ಟ ಬೇಡಿಕೆಗಳೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ವರ್ತಕರ ಪ್ರಮುಖ ಬೇಡಿಕೆಗಳೇನು?

* ಶುಲ್ಕ ಜಾರಿ ಮುಂದೂಡಿಕೆ: ಪ್ರಸ್ತುತ ಸಾಲು-ಸಾಲು ಹಬ್ಬಗಳ ಸಮಯವಾಗಿರುವುದರಿಂದ ದೇಶಾದ್ಯಂತ ವ್ಯಾಪಾರ ವಹಿವಾಟು ಗಣನೀಯವಾಗಿ ಹೆಚ್ಚಿರುತ್ತದೆ. ಈ ಹಬ್ಬದ ಋತುವಿನಲ್ಲಿ ಪ್ರಸ್ತಾವಿತ ಯುಪಿಐ ಎಂಡಿಆರ್ (MDR) ಶುಲ್ಕ ಜಾರಿಯನ್ನು ಸಂಪೂರ್ಣವಾಗಿ ಮುಂದೂಡಬೇಕು ಎಂಬುದು ವರ್ತಕರ ಪ್ರಮುಖ ಬೇಡಿಕೆಯಾಗಿತ್ತು.

* ವಿಶೇಷ ಸಮಿತಿ ರಚನೆ: ಯುಪಿಐ ಶುಲ್ಕಕ್ಕೆ ಸಂಬಂಧಿಸಿದಂತೆ ವ್ಯಾಪಾರಿಗಳ ಕಳವಳ ಮತ್ತು ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಪರಿಹಾರ ಸೂಚಿಸಲು ತಜ್ಞರನ್ನೊಳಗೊಂಡ ವಿಶೇಷ ಸಮಿತಿಯೊಂದನ್ನು ರಚಿಸಬೇಕು ಎಂದು ನಿಯೋಗವು ಒತ್ತಾಯಿಸಿತು.

ಪ್ರತಿಭಟನೆ ವಾಪಸ್, ನೆಮ್ಮದಿಯ ನಿಟ್ಟುಸಿರು ಬಿಟ್ಟ ವ್ಯಾಪಾರಿಗಳು

ಹಣಕಾಸು ಸಚಿವರು ವ್ಯಾಪಾರಿಗಳ ಪ್ರಸ್ತಾಪ ಮತ್ತು ಆತಂಕಗಳನ್ನು ಆಲಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ನಡೆಸಲು ಉದ್ದೇಶಿಸಿದ್ದ ಯುಪಿಐ ಸೇವೆಗಳ ಬಹಿಷ್ಕಾರ ಅಥವಾ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಇದರಿಂದಾಗಿ ಹಬ್ಬಗಳ ಸಂದರ್ಭದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂಬುದು ಖಚಿತವಾಗಿದ್ದು, ಗ್ರಾಹಕರು ಹಾಗೂ ವರ್ತಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

ದೇಶದಲ್ಲಿ ವ್ಯಾಪಾರಿಗಳಿಗೆ ಮಾಡಲಾಗುವ 2,000 ರೂಪಾಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಕೇಂದ್ರ ಸರ್ಕಾರವು ಹೊಸದಾಗಿ ನಿರ್ದಿಷ್ಟ ಶುಲ್ಕ ವಿಧಿಸಲು ಮುಂದಾಗಿದೆ. ಕಳೆದ ಆರು ವರ್ಷಗಳಿಂದ ಉಚಿತವಾಗಿ ಲಭ್ಯವಿದ್ದ ಈ ಸೇವೆಗೆ ಅಕ್ಟೋಬರ್ 15ರಿಂದ ಶುಲ್ಕ ವಿಧಿಸಲು ನಿರ್ಧರಿಸಿದ್ದು, ಈ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.

ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದ ಹೊಸ ನಿಯಮಗಳು

* 2,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ವ್ಯಾಪಾರಿಗಳಿಗೆ ಯುಪಿಐ ಮೂಲಕ ಪಾವತಿಸಿದಾಗ ಶೇಕಡಾ 0.4ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗುತ್ತದೆ. ಆದರೆ ದೊಡ್ಡ ಮಟ್ಟದ ಪಾವತಿಗಳಿಗೆ (₹75,000 ಮತ್ತು ಅದಕ್ಕಿಂತ ಹೆಚ್ಚು) ಗರಿಷ್ಠ ಶುಲ್ಕದ ಮಿತಿಯನ್ನು ₹300ಕ್ಕೆ ನಿಗದಿಪಡಿಸಲಾಗಿದೆ.

* ಸಾಮಾನ್ಯ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ನಡೆಯುವ ದಿನನಿತ್ಯದ ಹಣದ ವರ್ಗಾವಣೆಗೆ ಯಾವುದೇ ಶುಲ್ಕ ಇರುವುದಿಲ್ಲ. ಎಷ್ಟು ಮೊತ್ತ ರವಾನಿಸಿದರೂ ಇದು ಸಂಪೂರ್ಣ ಉಚಿತವಾಗಿರುತ್ತದೆ.

* ರೈಲ್ವೇ, ಟೆಲಿಕಾಂ, ಇನ್ಶೂರೆನ್ಸ್, ಪೆಟ್ರೋಲ್-ಡೀಸೆಲ್ ಹಾಗೂ ಕೃಷಿ ವಲಯದಂತಹ ಕಡಿಮೆ ಲಾಭಾಂಶವಿರುವ ಕ್ಷೇತ್ರಗಳಲ್ಲಿ ₹2,000 ಮೇಲ್ಪಟ್ಟ ವಹಿವಾಟಿಗೆ ₹5 ರೂಪಾಯಿನಷ್ಟು ಫ್ಲಾಟ್ ಶುಲ್ಕ ಇರಲಿದೆ.

* ಮ್ಯೂಚುವಲ್ ಫಂಡ್, ಸೆಕ್ಯುರಿಟೀಸ್ ಮತ್ತು ಸ್ಟಾಕ್ ಬ್ರೋಕರ್‌ಗಳಿಗೆ ಮಾಡುವ ಪಾವತಿಗೆ ಶೇಕಡಾ 0.02 ರಷ್ಟು ಶುಲ್ಕ ಅನ್ವಯಿಸಲಿದ್ದು, ಗರಿಷ್ಠ ಮಿತಿ 300 ರೂಪಾಯಿ ಆಗಿರಲಿದೆ ಎಂದು ತಿಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+