ವಿಮಾನಯಾನದಲ್ಲಿ ತೃತಿಯಲಿಂಗಿಗಳಿಗೆ ಉದ್ಯೋಗವೇಕಿಲ್ಲ? ಸುಪ್ರೀಂ ಪ್ರಶ್ನೆ
ನವದೆಹಲಿ, ನವೆಂಬರ್ 6: ವಿಮಾನಯಾನದಲ್ಲಿ ಲಿಂಗ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ಉದ್ಯೋಗ ನೀಡುತ್ತಿಲ್ಲ ಎಂಬ ದೂರಿಗೆ ಸಂಬಂಧಿಸಿದಂತೆ ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯದ ವಿರುದ್ಧ ಸುಪ್ರೀಂ ಕೋರ್ಟ್ ನೋಟೀಸ್ ಜಾರಿಗೊಳಿಸಿದೆ.
ಈ ಕುರಿತು ವಿಮಾನಯಾನ ಸಚಿವಾಲಯ ಒಂದು ವಾರದೊಳಗೆ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿ ಆದೇಶಿಸಿದೆ. ವಿಮಾನಯಾನದಲ್ಲಿ 400 ರಷ್ಟು ಉದ್ಯೋಗಾವಕಾಶವಿದೆ ಎಂಬ ಜಾಹೀರಾತು ಪ್ರಕಟವಾಗಿತ್ತು. ಆದರೆ ಅರ್ಜಿ ಸಲ್ಲಿಸಿದ ಯಾವುದೇ ತೃತಿಯಲಿಂಗಿಗಳಿಗೂ ಉದ್ಯೋಗ ನೀಡಿಲ್ಲ ಎಂದು ದೂರು ನೀಡಿ, ಲಿಂಗ ಅಲ್ಪಸಂಖ್ಯಾತರೊಬ್ಬರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.

ಏರ್ ಪೋರ್ಟ್ ವೊಂದರಲ್ಲಿ ಕೆಲಸ ಮಾಡಿದ ಅನುಭವವಿರುವ ತೃತಿಯಲಿಂಗಿಯೊಬ್ಬರನ್ನೂ ಕೆಲಸಕ್ಕೆ ಪರಿಗಣಿಸಿಲ್ಲ ಎಂದು ಈ ದೂರಿನಲ್ಲಿ ಹೇಳಲಾಗಿತ್ತು.












Click it and Unblock the Notifications