ಪಾಟ್ನಾದಲ್ಲಿ ಮುತ್ತಿನಂಥ ಮಾತನ್ನಾಡಿದ ನಿತೀಶ್ ಕುಮಾರ್

ಪಾಟ್ನಾ, ನ 22: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತನ್ನ ರಾಜ್ಯದಲ್ಲಿ ಹೊಸ ಕಾನೂನು ತರಲು ಮುಂದಾಗಿದ್ದಾರೆ. ಅದೇನಪ್ಪಾಂದ್ರೆ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳ ಮನೆಯಲ್ಲಿ ಶೌಚಾಲಯ ಕಡ್ಡಾಯವಾಗಿರ ಬೇಕೆಂದು.

ಬಿಹಾರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನಿತೀಶ್, ಮನೆಯಲ್ಲಿ ಶೌಚಾಲಯ ಇಲ್ಲದಿದ್ದರೆ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಈ ಸಂಬಂಧ ಪಂಚಾಯತ್ ರಾಜ್ ಕಾಯಿದೆಯಲ್ಲಿ ತಿದ್ದುಪಡಿ ತರುತ್ತೇನೆ ಎಂದಿದ್ದಾರೆ.

No toilet No ticket in Bihar Local body election, Nitish Kumar

ಬಿಹಾರದಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯ ಪ್ರಕಾರ ಸುಮಾರು ಎರಡು ಕೋಟಿ ಕುಟುಂಬಗಳಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಕೇಂದ್ರ ಸರಕಾರ 1.11 ಕೋಟಿ ಟಾಯ್ಲೆಟ್ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದೆ ಎಂದು ನಿತೀಶ್ ಹೇಳಿದ್ದಾರೆ.

ಆರ್ಥಿಕವಾಗಿ ಸಭಲರಾಗಿರುವ ಮತ್ತು ರಾಜ್ಯ, ಕೇಂದ್ರ ಸರಕಾರೀ ನೌಕರರಲ್ಲಿ ನನ್ನ ಮನವಿ ಏನಂದರೆ, ಶೌಚಾಲಯ ನಿರ್ಮಿಸಲು ನೀವೂ ಸ್ಥಳೀಯ ಆಡಳಿತದೊಂದಿಗೆ ತನು, ಮನ, ಧನದಿಂದ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲೂ ಶಾದಿ ಭಾಗ್ಯ, ಮೂಢನಂಬಿಕೆ ನಿಷೇಧದ ಕುರಿತು ಆಮೇಲೆ ತಲೆ ಕೆಡಿಸಿಕೊಂಡು ಮೊದಲು ಶೌಚಾಲಯದ ಬಗ್ಗೆ ಸಿದ್ದರಾಮಯ್ಯ ಸರಕಾರ ಗಮನ ಹರಿಸಲಿ ಎನ್ನುವುದು ಪ್ರಜ್ಞಾವಂತ ನಾಗರೀಕರ ಅಭಿಪ್ರಾಯ. (ಬೆಂಗಳೂರಿನ ಬಯಲೇ ಹಲವರಿಗೆ ಶೌಚಾಲಯ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+