ಬೆಂಗಳೂರಿನ ಬಯಲೇ ಹಲವರಿಗೆ ಶೌಚಾಲಯ!

Oh My God, many don't have toilet in Bangalore
ಬೆಂಗಳೂರು, ನ. 19 : ಬೆಂಗಳೂರಲ್ಲಿ ಮನೆಗೊಂದು ಕಾರು - ಬೈಕು ಹಾಗೂ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲು ಇದ್ದೇ ಇರುತ್ತೆ. ಆದೆ, ಇಷ್ಟೊಂದು ಫಾಸ್ಟ್ ಸಿಟಿ ಅನ್ನಿಸಿಕೊಂಡಿರೋ ಬೆಂಗಳೂರು ನಗರ ಜಿಲ್ಲೆಯ ಸಾವಿರಾರು ಮನೆಗಳಲ್ಲಿ ಟಾಯ್ಲೆಟ್ಟೇ ಇಲ್ವಂತೆ... ದೂರದ ಉತ್ತರ ಕರ್ನಾಟಕದ ಹಳ್ಳಿಗಳಂತೆ ಬೆಂಗಳೂರು ನಗರ ಜಿಲ್ಲೆಯಲ್ಲೂ ಬಯಲನ್ನೇ ಶೌಚಾಲಯ ಮಾಡಿಕೊಂಡಿರೋರ ರಿಪೋರ್ಟ್ ನೋಡಿ ಇಲ್ಲಿದೆ. ಅಂದ ಹಾಗೆ, ನವೆಂಬರ್ 19 ವಿಶ್ವ ಶೌಚಾಲಯ ದಿನ.

ಮನೆಗಳಲ್ಲಿ ಶೌಚಾಲಯವೇ ಇಲ್ಲ

ಹೌದು ಸಿಲಿಕಾನ್ ಸಿಟಿ ಬೆಂಗಳೂರು ನಗರ ಜಿಲ್ಲೆಯ 34,656 ಮನೆಗಳಲ್ಲಿ ಶೌಚಾಲಯವೇ ಇಲ್ಲ. ಮಲ ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಿಯಿಸಿದ್ದಾರೆ ಎಂಬುದು ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ನಿರ್ಮಲ ಭಾರತ್ ಅಭಿಯಾನ್ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಿತ್ತು. ಆ ನಾಲ್ಕು ತಾಲೂಕುಗಳ ವಿವರ ಹೀಗಿದೆ..

ಬಯಲಲ್ಲೇ ಮಲವಿಸರ್ಜನೆ

ತಾಲೂಕು (ಶೌಚಾಲಯ ಇಲ್ಲದಿರುವ ಸಂಖ್ಯೆ)

ಆನೇಕಲ್ (16,035)
ಬೆ.ಉತ್ತರ (10,514)
ಬೆ.ದಕ್ಷಿಣ (6,070)
ಬೆ.ಪೂರ್ವ (2,037)
ಒಟ್ಟು 34,656

ಬೆಂಗಳೂರು ಜಿಲ್ಲೆಗೆ ಒಳಪಡುವ ನಾಲ್ಕು ತಾಲ್ಲೂಕುಗಳಲ್ಲಿ ಆನೇಕಲ್‌ನಲ್ಲಿ ಅತಿ ಹೆಚ್ಚು ಅಂದ್ರೆ ಹದಿನಾರು ಸಾವಿರದ ಮೂವತ್ತೈದು ಮನೆಗಳಲ್ಲಿ ಶೌಚಾಲಯವೇ ಇಲ್ಲ. ಹಾಗೇ ಬೆಂಗಳೂರು ಉತ್ತರ ತಾಲೂಕಿನಲ್ಲಿ 10 ಸಾವಿರದ 514 ಮನೆಯವರು ಬಯಲಲ್ಲೇ ಮಲವಿಸರ್ಜನೆಗೆ ಮಾಡ್ತಾರೆ. ಇನ್ನು ಬೆಂಗಳೂರು ದಕ್ಷಿಣ ತಾಲೂಕಿನಲ್ಲೂ ಸುಮಾರು 6 ಸಾವಿರದ 70 ಮನೆಗಳಲ್ಲಿ ಶೌಚಾಲಯಗಳಿಲ್ಲ. ಇನ್ನು ಕೊನೆಯದಾಗಿ ಬೆಂಗಳೂರು ಪೂರ್ವ ತಾಲೂಕಿನಲ್ಲಿ 2 ಸಾವಿರದ 37 ಮನೆಗಳಲ್ಲಿ ಶೌಚಾಲಯವಿಲ್ಲ. ಒಟ್ಟು ಈ ನಾಲ್ಕು ತಾಲೂಕುಗಳಲ್ಲಿ 34 ಸಾವಿರದ 656 ಮನೆಗಳಲ್ಲಿ ಶೌಚಾಲಯವಿಲ್ದೇ ಬಯಲು ವಿಜರ್ಸನೆ ಮಾಡ್ತಿದ್ದಾರೆ ಅಂತ ಸಮೀಕ್ಷೆ ಹೇಳ್ತಾ ಇದೆ.

ಈ ಸಮೀಕ್ಷೆಯಿಂದ ಎಚ್ಚೆತ್ತುಕೊಂಡಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಈ ನಾಲ್ಕು ತಾಲ್ಲೂಕುಗಳಲ್ಲಿ ಫಾಸ್ಟ್ ಟ್ರ್ಯಾಕ್ ಯೋಜನೆ ಹಮ್ಮಿಕೊಂಡಿದೆ. ಮನೆ ಮನೆಗೆ ತೆರಳಿ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತೇವೆ, ವರ್ಷದೊಳಗೆ ಎಲ್ಲರ ಮನೆಯೊಳಗೆ ಶೌಚಾಲಯ ಇರುವಂತೆ ಮಾಡುತ್ತೇವೆ ಅಂತಾರೆ ಬೆಂಗಳೂರು ನಗರ ಜಿ.ಪಂ ಯೋಜನಾ ಅಧಿಕಾರಿ ಕೆಂಪಯ್ಯ.

ಸಿಲಿಕಾನ್ ಸಿಟಿ ಮತ್ತು ಅದರ ಆಸುಪಾಸಿನಲ್ಲೇ ಹೀಗಾದ್ರೆ ದೂರದ ಹಳ್ಳಿಗಳ ವೇದನೆ ಇನ್ನಷ್ಟಿರಬೇಕು? ಜನರು ಸಹಾ ಸರ್ಕಾರ ನೀಡುವ ಹಣ ಉಪಯೋಗಿಸಿಕೊಂಡು ಶೌಚಾಲಯ ನಿರ್ಮಿಸಿಕೊಂಡು ಪರಿಸರ ಹಾಗೂ ಆರೋಗ್ಯ ಕಾಪಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+