ಕೊರೊನಾ ವೈರಸ್ ವಾಯುಗಾಮಿ ಎಂಬುದಕ್ಕೆ ಪುರಾವೆ ಇಲ್ಲ.!

ನವದೆಹಲಿ, ಏಪ್ರಿಲ್ 6: ಉಸಿರಾಡುವಾಗ ಮತ್ತು ಮಾತನಾಡುವಾಗ ಕೊರೊನಾ ವೈರಸ್ ಹಬ್ಬುವ ಸಾಧ್ಯತೆ ಇದೆ ಎಂಬ ಆಘಾತಕಾರಿ ವಿಷಯವನ್ನು ಇತ್ತೀಚೆಗಷ್ಟೇ ವಿಜ್ಞಾನಿಗಳು ಬಹಿರಂಗ ಪಡಿಸಿದ್ದರು.

Recommended Video

      ಕೊರೊನ ಹೋಗಲಾಡಿಸಲು ನಮ್ಮ ನಾಯಕರು ನೀಡಿದ ಉಪಾಯಗಳು | Oneindia Kannada

      ಉಸಿರಾಟದ ಹನಿಗಳ ಮೂಲಕ ಕೊರೊನಾ ವೈರಸ್ ಹರಡುತ್ತದೆ. ರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಮೂರು ಗಂಟೆಗಳ ಕಾಲ ವೈರಸ್ ಗಾಳಿಯಲ್ಲಿ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಹೇಳಿತ್ತು.

      ಆದ್ರೀಗ, ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಭಾರತೀಯ ವಿಜ್ಞಾನಿ ಹೇಳಿದ್ದಾರೆ.

      ಪುರಾವೆ ಇಲ್ಲ

      ಪುರಾವೆ ಇಲ್ಲ

      ''ಕೊರೊನಾ ವೈರಸ್ ವಾಯುಗಾಮಿ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ'' ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನ ಮುಖ್ಯ ವಿಜ್ಞಾನಿ ಡಾ.ರಮನ್ ಗಂಗಾಖೇದ್ಕರ್ ಹೇಳಿದ್ದಾರೆ.

      ವೈದ್ಯಕೀಯ ಸಿಬ್ಬಂದಿ ಕಾಳಜಿ ವಹಿಸಬೇಕು.!

      ವೈದ್ಯಕೀಯ ಸಿಬ್ಬಂದಿ ಕಾಳಜಿ ವಹಿಸಬೇಕು.!

      ''ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ, ಅದರ ಹನಿಗಳ ಮೂಲಕ ಕೊರೊನಾ ವೈರಸ್ ಹರಡುತ್ತದೆ. ಹೀಗಾಗಿ, ರೋಗಿಗಳಿಗೆ ಇನ್ ಟ್ಯೂಬೇಷನ್ ಮಾಡುವಾಗ ವೈದ್ಯಕೀಯ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ.ಮಾರಿಯಾ ವ್ಯಾನ್ ಕೆರ್ಖೋವ್ ಈ ಹಿಂದೆ ತಿಳಿಸಿದ್ದರು.

      ಭಾರತದ ಅಂಕಿ-ಅಂಶ

      ಭಾರತದ ಅಂಕಿ-ಅಂಶ

      ಇಲ್ಲಿಯವರೆಗೂ ಭಾರತದಲ್ಲಿ 4297 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅದರಲ್ಲಿ 328 ಮಂದಿ ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 118 ಮಂದಿ ಸಾವನ್ನಪ್ಪಿದ್ದಾರೆ.

      ವಿಶ್ವದ ಅಂಕಿ-ಅಂಶ

      ವಿಶ್ವದ ಅಂಕಿ-ಅಂಶ

      ಇಲ್ಲಿಯವರೆಗೂ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು - 12,74,022

      ಕೋವಿಡ್-19 ನಿಂದ ಮೃತಪಟ್ಟವರು - 69,464

      ಕೊರೊನಾ ವೈರಸ್ ನಿಂದ ಗುಣಮುಖರಾದವರು - 264,807

      ಚಿಂತಾಜನಕ ಸ್ಥಿತಿಯಲ್ಲಿ ಇರುವವರು - 45,592

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+