ಪಿಡಿಪಿ ಜೊತೆಗೆ ಮೈತ್ರಿಯಿಲ್ಲ, ಸ್ಪಷ್ಟಪಡಿಸಿದ ಕಾಂಗ್ರೆಸ್

Recommended Video

      ಪಿಡಿಪಿ ಜೊತೆಗೆ ಮೈತ್ರಿಯಿಲ್ಲ, ಸ್ಪಷ್ಟಪಡಿಸಿದ ಕಾಂಗ್ರೆಸ್ | Oneindia Kannada

      ಕಾಶ್ಮೀರ, ಜೂನ್ 19: ಬಿಜೆಪಿ ಬಹುಮತ ಹಿಂತೆಗೆದುಕೊಂಡು ಅಲ್ಪ ಮತಕ್ಕೆ ಜಾರಿರುವ ಮೆಹಬೂಬಾ ಮುಫ್ತಿಯವರ ಪೀಪಲ್ಸ್ ಡೆಮಾಕ್ರೆಟಿಕ್ ಫ್ರಂಟ್ (ಪಿಡಿಪಿ) ಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

      "ಏನು ನಡೆದಿದೆಯೋ ಅದು ಒಳ್ಳೆಯದಕ್ಕೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಜನರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ಅವರು (ಬಿಜೆಪಿ) ಕಾಶ್ಮೀರವನ್ನು ಹಾಳುಗೆಡವಿ ಇದೀಗ ಮೈತ್ರಿ ಸರಕಾರದಿಂದ ಹೊರ ಬಂದಿದ್ದಾರೆ. ದೊಡ್ಡ ಸಂಖ್ಯೆಯ ಜನರು ಮತ್ತು ಸೈನಿಕರು ಕಳೆದ ಮೂರು ವರ್ಷಗಳಲ್ಲಿ ಸಾವನ್ನಪ್ಪಿದ್ದಾರೆ," ಎಂದು ಕಾಂಗ್ರೆಸ್ ನಾಯಕ ಗುಲಾಬ್ ನಬಿ ಅಜಾದ್ ಕಿಡಿಕಾರಿದ್ದಾರೆ.

      ಇನ್ನು ಕಾಂಗ್ರೆಸ್ ಪಿಡಿಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, "ಆ ಪ್ರಶ್ನೆ ಉದ್ಭವಿಸುವುದೇ ಇಲ್ಲ," ಎಂದಿದ್ದಾರೆ.

      No alliance with PDP, says Congress

      ಇದೇ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಮತ್ತೊಂದು ಪ್ರಮುಖ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಇಲ್ಲಿನ ರಾಜ್ಯಪಾಲರಾದ ಎನ್.ಎನ್. ವೋಹ್ರಾ ಅವರನ್ನು ಭೇಟಿಯಾಗಿದ್ದಾರೆ. ಅವರು ಯಾಕೆ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ ಎಂಬುದು ತಿಳಿದು ಬಂದಿಲ್ಲ.

      ಈ ಬೆಳವಣಿಗೆಗಳ ಬಗ್ಗೆ ಶಿವಸೇನೆಯೂ ತನ್ನ ಅಭಿಪ್ರಾಯವನ್ನು ದಾಖಲಿಸಿದೆ. "ಈ ಮೈತ್ರಿ ದೇಶ ವಿರೋಧಿ ಮತ್ತು ಅನೈಸರ್ಗಿಕವಾದುದು. ನಮ್ಮ ಪಕ್ಷದ ಮುಖ್ಯಸ್ಥರು ಈ ಮೈತ್ರಿ ನಡೆಯುವುದಿಲ್ಲ ಎಂದಿದ್ದರು. ಒಂದೊಮ್ಮೆ ಈ ಮೈತ್ರಿ ಮುಂದುವರಿದಿದ್ದೇ ಆದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಇದಕ್ಕೆ ಬಿಜೆಪಿ ಉತ್ತರ ನೀಡಬೇಕಾಗಿ ಬರುತ್ತಿತ್ತು," ಎಂದು ಪಕ್ಷದ ನಾಯಕ ಸಂಜಯ್ ರಾವತ್ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+