ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯ್ ನಟನೆಯ ಜಾಹೀರಾತು ಹಂಚಿಕೊಂಡ ನಿತಿನ್ ಗಡ್ಕರಿ, ಟ್ವಿಟ್ಟರ್‌ನಲ್ಲಿ ಆಕ್ರೋಶ!

|
Google Oneindia Kannada News

ನವದೆಹಲಿ, ಸೆ.12: ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಸರ್ಕಾರಿ ಪ್ರಾಯೋಜಿತ ಜಾಹೀರಾತನ್ನು ಹಂಚಿಕೊಂಡ ನಂತರ ವರದಕ್ಷಿಣೆಗೆ ಪ್ರಚಾರ ನೀಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ.

ಆರು ಏರ್‌ಬ್ಯಾಗ್‌ಗಳಿರುವ ಸುರಕ್ಷಿತ ಕಾರುಗಳ ಪ್ರಚಾರಕ್ಕಾಗಿ ನಟ ಅಕ್ಷಯ್ ಕುಮಾರ್ ಅವರ ಸರ್ಕಾರಿ ಪ್ರಾಯೋಜಿತ ಜಾಹೀರಾತನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ. ಈ ಜಾಹೀರಾತು ವರದಕ್ಷಿಣೆಯನ್ನು ಉತ್ತೇಜಿಸುವಂತಿದೆ ಎಂಬ ಟೀಕೆಯೊಂದಿಗೆ ಟ್ವಿಟರ್‌ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಬಿಷ್ಣೋಯ್ ಸಂಚು; ಪಂಜಾಬ್ ಡಿಜಿಪಿ ಮಾಹಿತಿಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಬಿಷ್ಣೋಯ್ ಸಂಚು; ಪಂಜಾಬ್ ಡಿಜಿಪಿ ಮಾಹಿತಿ

ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚರ್ತುವೇದಿ, ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ, ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್ ಸೇರಿದಂತೆ ಹಲವು ಮಂದಿ ನಿತಿನ್ ಗಡ್ಕರಿ ಅವರನ್ನು ಟೀಕಿಸಿದ್ದಾರೆ.

ಅಕ್ಷನ್ ನಟನೆಯ ಜಾಹೀರಾತು ಹೇಳುವುದೇನು?

ಅಕ್ಷನ್ ನಟನೆಯ ಜಾಹೀರಾತು ಹೇಳುವುದೇನು?

"ಮದುವೆಯ ನಂತರ ಕೇವಲ ಎರಡು ಏರ್‌ಬ್ಯಾಗ್‌ಗಳಿರುವ ಕಾರಿನಲ್ಲಿ ತನ್ನ ಮಗಳನ್ನು ವರನೊಂದಿಗೆ ತಂದೆ ಕಳುಹಿಸುತ್ತಿರುತ್ತಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಯಂತೆ ವೇಷ ಧರಿಸಿರುವ ನಟ ಅಕ್ಷಯ್ ಕುಮಾರ್, ಕೇವಲ ಎರಡು ಏರ್‌ಬ್ಯಾಗ್‌ಗಳಿರುವ ಕಾರಿನಲ್ಲಿ ಮಗಳನ್ನು ಕಳುಹಿಸಿದಕ್ಕೆ ವಧುವಿನ ತಂದೆಯನ್ನು ಅಣುಕಿಸುತ್ತಾರೆ".

ಮುಂದುವರೆದು ಎರಡು ಏರ್‌ಬ್ಯಾಗ್‌ಗಳಿರುವ ಕಾರಿನಲ್ಲಿ ಹೋದರೆ ಮಗಳು, ಅಳಿಯ ಹಾಗೆಯೇ ಮೇಲಕ್ಕೆ ಹೊರಟು ಹೋಗುತ್ತಾರೆ. ಆರು ಏರ್‌ಬ್ಯಾಗ್‌ಗಳಿರುವ ಕಾರಿನಲ್ಲಿ ಹೋದರೆ ಸುರಕ್ಷಿತವಾಗಿರುತ್ತಾರೆ" ಎಂದು ಹೇಳುತ್ತಾರೆ. ಬಳಿಕ ಕಾರು ಬದಲಾಯಿಸಿ ಮಗಳು, ಅಳಿಯನನ್ನು ಸಂತೋಷದಿಂದ ಕಳುಹಿಸಿ ಕೊಡಲಾಗುತ್ತದೆ.

ಈ ಜಾಹೀರಾತಿನಲ್ಲಿ ಕಾರನ್ನು ವಧುವಿನ ತಂದೆ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಅಂಶದ ಮೇಲೆ ವಿರೋಧ ಪಕ್ಷಗಳು ತರಾಟೆ ತೆಗೆದುಕೊಳ್ಳುತ್ತಿದ್ದು, ಸರ್ಕಾರವು "ವರದಕ್ಷಿಣೆಯನ್ನು ಉತ್ತೇಜಿಸುತ್ತಿದೆ" ಎಂದು ಆರೋಪಿಸಿದೆ.

ರಸ್ತೆ ಸುರಕ್ಷತೆಗೆ ಏರ್‌ಬ್ಯಾಗ್, ಸೀಟ್ ಬೆಲ್ಟ್ ಬಳಕೆ ಅಗತ್ಯ

ಈ ತಿಂಗಳ ಆರಂಭದಲ್ಲಿ ಮುಂಬೈ ಬಳಿ ನಡೆದ ಅಪಘಾತದಲ್ಲಿ ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ ನಂತರ ರಸ್ತೆ ಸುರಕ್ಷತೆ, ವಿಶೇಷವಾಗಿ ಸೀಟ್‌ಬೆಲ್ಟ್ ಮತ್ತು ಏರ್‌ಬ್ಯಾಗ್‌ಗಳ ಬಳಕೆ ಬಗ್ಗೆ ತೀವ್ರವಾಗಿ ಗಮನ ಹರಿಸಲಾಗುತ್ತಿದೆ. ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದ ಅಪಘಾತದಲ್ಲಿ ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಸಾವನ್ನಪ್ಪಿದ್ದಾರೆ. ಅವರ ಜೊತೆಗೆ ಸಹ-ಪ್ರಯಾಣಿಕರಾಗಿದ್ದ ಜಹಾಂಗೀರ್ ಪಾಂಡೋಲ್ ಅವರ ಸಹೋದರ ಡೇರಿಯಸ್ ಪಾಂಡೋಲೆ ಮತ್ತು ಪತ್ನಿ ಡಾ ಅನಾಹಿತಾ ಪಾಂಡೋಲೆ ಅಪಘಾತದಲ್ಲಿ ಗಾಯಗೊಂಡ ನಂತರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.


ಅಪಘಾತದ ಸಮಯದಲ್ಲಿ ಉದ್ಯಮಿ ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಪೊಲೀಸ್ ವರದಿಗಳು ತಿಳಿಸಿವೆ.

ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ

ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ

ಮಿಸ್ತ್ರಿ ಮತ್ತು ಇತರ ಮೂವರು ಪ್ರಯಾಣಿಸುತ್ತಿದ್ದ Mercedes-Benz SUV ಅಪಘಾತದ ಐದು ಸೆಕೆಂಡುಗಳ ಮೊದಲು 100 kmph ವೇಗದಲ್ಲಿ ಹೋಗುತ್ತಿತ್ತು ಎಂದು ಐಷಾರಾಮಿ ಕಾರು ತಯಾರಕರು ಪೊಲೀಸರಿಗೆ ತನ್ನ ಸಂಶೋಧನೆಯಲ್ಲಿ ತಿಳಿಸಿದ್ದಾರೆ. ಡಾ. ಅನಾಹಿತಾ ಪಂಡೋಲ್ ಬ್ರೇಕ್ ಹಾಕಿದಾಗ SUV 89 kmph ಗೆ ಕುಸಿಯಿತು ಎಂದು Mercedes-Benz ತಯಾರಕರು ತಿಳಿಸಿದ್ದಾರೆ.

ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಯಲ್ಲಿ ಯಾವುದೇ ವಿನ್ಯಾಸದ ದೋಷವನ್ನು ತಳ್ಳಿಹಾಕಿದೆ ಮತ್ತು ಕಾರು ವೇಗವಾಗಿ ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದರು.

ಹಿಂದೆ ಕುಳಿತುಕೊಳ್ಳುವವರಿಗೂ ಸೀಟ್ ಬೆಲ್ಟ್ ಕಡ್ಡಾಯ

ಹಿಂದೆ ಕುಳಿತುಕೊಳ್ಳುವವರಿಗೂ ಸೀಟ್ ಬೆಲ್ಟ್ ಕಡ್ಡಾಯ

ಮಿಸ್ತ್ರಿ ಅವರ ಸಾವಿನ ನಂತರ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ವಾಹನಗಳ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಶೀಘ್ರದಲ್ಲೇ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.


"ಈಗಾಗಲೇ ಹಿಂದಿನ ಸೀಟಿನಲ್ಲಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ, ಆದರೆ ಜನರು ಅದನ್ನು ಅನುಸರಿಸುತ್ತಿಲ್ಲ. ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಜನರು ಸೀಟ್ ಬೆಲ್ಟ್ ಧರಿಸದಿದ್ದಲ್ಲಿ ಸೈರನ್ ಇರುತ್ತದೆ, ಅದು ಮುಂಭಾಗದ ಸೀಟಿನಂತೆಯೇ ಇರುತ್ತದೆ. ಅವರು ಹಾಕದಿದ್ದರೆ ಸೀಟ್‌ಬೆಲ್ಟ್ ಧರಿಸದಿದ್ದರೆ ದಂಡ ವಿಧಿಸಲಾಗುತ್ತದೆ" ಎಂದು ಗಡ್ಕರಿ ಹೇಳಿದರು.

ಜಾಹೀರಾತಿನಲ್ಲಿ ವರದಕ್ಷಿಣೆಗೆ ಪ್ರಚಾರ!?

ಜಾಹೀರಾತಿನಲ್ಲಿ ವರದಕ್ಷಿಣೆಗೆ ಪ್ರಚಾರ!?

ಈ ಬೆನ್ನಲ್ಲೆ ತಯಾರಾದ ಮೂರು ಜಾಹೀರಾತುಗಳನ್ನು ಕೇಂದ್ರ ಸಚಿವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇವುಗಳಲ್ಲಿ ಒಂದು ವರದಕ್ಷಿಣೆಯನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಲಾಗಿದೆ.

"ಇದೊಂದು ಸಮಸ್ಯಾತ್ಮಕ ಜಾಹೀರಾತು. ಅಂತಹ ಸೃಜನಶೀಲರನ್ನು ಯಾರು ಕಂಡುಹಿಡಿಯುತ್ತಾರೆ..? ಈ ಜಾಹೀರಾತಿನ ಮೂಲಕ ಕಾರಿನ ಸುರಕ್ಷತೆಯ ಅಂಶವನ್ನು ಉತ್ತೇಜಿಸಲು ಸರ್ಕಾರವು ಹಣವನ್ನು ಖರ್ಚು ಮಾಡುತ್ತಿದೆಯೇ ಅಥವಾ ವರದಕ್ಷಿಣೆಯ ದುಷ್ಟ ಮತ್ತು ಅಪರಾಧ ಕೃತ್ಯವನ್ನು ಪ್ರಚಾರ ಮಾಡುತ್ತಿದೆಯೇ?" ಎಂದು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚರ್ತುವೇದಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್, "ಇದು ವರದಕ್ಷಿಣೆಯ ಜಾಹೀರಾತೇ? ತೆರಿಗೆ ಪಾವತಿದಾರರ ಹಣವನ್ನು ವರದಕ್ಷಿಣೆಯನ್ನು ಉತ್ತೇಜಿಸಲು ಬಳಸಲಾಗುತ್ತಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.

ಇತ್ತ, ಭಾರತದಲ್ಲಿ, ಮುಂಭಾಗದ ಪ್ರಯಾಣಿಕರಿಗೆ ಮತ್ತು ಚಾಲಕನಿಗೆ ಏರ್‌ಬ್ಯಾಗ್ ಕಡ್ಡಾಯವಾಗಿದೆ. ಜನವರಿ 2022 ರಲ್ಲಿ, ಕೇಂದ್ರ ಸರ್ಕಾರವು ಪ್ರತಿ ಪ್ರಯಾಣಿಕ ಕಾರಿನಲ್ಲಿ ಎಂಟು ಪ್ರಯಾಣಿಕರ ಮಿತಿಯೊಂದಿಗೆ ಆರು ಏರ್‌ಬ್ಯಾಗ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿತು.

English summary
Union Minister Nitin Gadkari getting criticism after he shares ad featuring actor Akshay Kumar it appears to promote dowry. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X