Get Updates
Get notified of breaking news, exclusive insights, and must-see stories!

ಪ್ರಪ್ರಥಮ ಮಹಿಳಾ ರಕ್ಷಣಾ ಸಚಿವೆ: ಟ್ವಿಟ್ಟಿಗರು ಹೇಳೋದು ಹೀಗೆ..

ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಆಯ್ಕೆಯಾದ ನಂತರ #NirmalaSitharaman ಹ್ಯಾಷ್ ಟ್ಯಾಗ್ ಸಾಮಾಜಿಕ ತಾಣದಲ್ಲಿ ಟ್ರೆಂಡಿಂಗ್ ನಲ್ಲಿದೆ. ಪರ ವಿರೋಧ ಚರ್ಚೆಗಳು, ಕಾಲೆಳೆಯುವುದು ಯಥೇಚ್ಚವಾಗಿ ನಡಿಯುತ್ತಿದೆ. ಕೆಲವೊಂದು ಟ್ವೀಟ್ ಸ್ಯಾಂಪಲುಗ

ಚೀನಾದ ಜೊತೆ ದೋಕ್ಲಾಂ ಗಡಿಸಮಸ್ಯೆ ಬಗೆಹರಿದ ಬೆನ್ನಲ್ಲೇ ಆಯಕಟ್ಟಿನ ರಕ್ಷಣಾ ಖಾತೆಯನ್ನು ಅರುಣ್ ಜೇಟ್ಲಿ ಸುಪರ್ದಿಯಿಂದ ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಲಾಗಿದೆ.

ಆ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ವಿಶೇಷ ಒತ್ತು ನೀಡುತ್ತಿರುವ ಪ್ರಧಾನಿ ಮೋದಿ ತನ್ನ ಸರಕಾರದಲ್ಲಿ ಮೂರು ಪ್ರಮುಖ ಖಾತೆಯನ್ನು ಸುಷ್ಮಾ ಸ್ವರಾಜ್. ಸ್ಮೃತಿ ಇರಾನಿ ನಂತರ ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿದ್ದಾರೆ.

ಕರ್ನಾಟಕದಲ್ಲಿ ಚುನಾವಣಾ ವರ್ಷವಾಗಿರುವುದರಿಂದಲೇ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಮತ್ತು ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆಗೆ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ರಾಜ್ಯಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಈ ಹಿಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ, ರಕ್ಷಣಾ ಖಾತೆಯನ್ನು ತಮ್ಮಲ್ಲೇ ಇಟ್ಟುಕೊಂಡಿದ್ದನ್ನು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಮಹಿಳೆಯೊಬ್ಬರಿಗೆ ರಕ್ಷಣಾ ಖಾತೆ ನೀಡಿದ್ದು ಇದೇ ಮೊದಲು.

ರಕ್ಷಣಾ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಹ್ಯಾಷ್ ಟ್ಯಾಗ್ ಸಾಮಾಜಿಕ ತಾಣದಲ್ಲಿ ಟ್ರೆಂಡಿಂಗ್ ನಲ್ಲಿದೆ. ಪರ ವಿರೋಧ ಚರ್ಚೆಗಳು, ಕಾಲೆಳೆಯುವುದು ಯಥೇಚ್ಚವಾಗಿ ನಡಿಯುತ್ತಿದೆ. ಕೆಲವೊಂದು ಟ್ವೀಟ್ ಸ್ಯಾಂಪಲುಗಳು ಇಂತಿವೆ..

ಮೋದಿ ಸರಕಾರದಲ್ಲಿ ಮಹಿಳೆಯರಿಗೆ ಹೆಚ್ಚಿನ ಒತ್ತು

ಮೋದಿ ಸರಕಾರದಲ್ಲಿ ಮಹಿಳಾ ಸಬಲೀಕರಣ. ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ನಂತರ ಈಗ ನಿರ್ಮಲಾ ಸೀತಾರಾಮನ್ ಎನ್ನುವ ಟ್ವೀಟ್.

ನಿರ್ಮಲಾ ಸೀತಾರಾಮನ್ ಗೆ ಹುದ್ದೆ ಲಭಿಸಿದ್ದು ಮೆರಿಟ್ ನಲ್ಲಿ

ಇಂದಿರಾ ಗಾಂಧಿಗೆ ಪ್ರಧಾನಿ ಹುದ್ದೆ ಲಭಿಸಿದ್ದು ನೆಹರೂ ಕುಟುಂಬದಿಂದಾಗಿ, ನಿರ್ಮಲಾ ಸೀತಾರಾಮನ್ ಗೆ ಹುದ್ದೆ ಲಭಿಸಿದ್ದು ಮೆರಿಟ್ ನಲ್ಲಿ.

ನಿರ್ಮಲಾ ಸೀತಾರಾಮನ್ ಸಾಧನೆಯ ಬಗೆಗಿನ ಒಂದು ಅಂಕಿಅಂಶ

ವಾಣಿಜ್ಯ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರ ಸಾಧನೆಯ ಬಗೆಗಿನ ಒಂದು ಅಂಕಿಅಂಶ.

ನಿರ್ಮಲಾ ಆಯ್ಕೆಯಿಂದ ರಾಜಕೀಯ ಪಂಡಿತರ ಲೆಕ್ಕಾಚಾರ ಉಲ್ಟಾ

ನರೇಂದ್ರ ಮೋದಿ ಮತ್ತು ಅಮಿತ್ ಶಾ, ನಿರ್ಮಲಾ ಅವರನ್ನು ಆಯ್ಕೆಮಾಡಿ ಎಲ್ಲಾ ರಾಜಕೀಯ ಪಂಡಿತರ ಲೆಕ್ಕಾಚಾರ ಉಲ್ಟಾ ಮಾಡಿದ್ದಾರೆ.

ಯೋಧರು ಹುತಾತ್ಮರಾಗುತ್ತಿರುವುದಕ್ಕೆ ಪರಿಹಾರ ಕಂಡುಕೊಳ್ಳಲಿ

ಯೋಧರು ಹುತಾತ್ಮರಾಗುತ್ತಿರುವುದಕ್ಕೆ ಪರಿಹಾರ ಕಂಡುಕೊಳ್ಳಲಿ

ಕಾಶ್ಮೀರ ಗಡಿಯಲ್ಲಿ ನಮ್ಮ ಯೋಧರು ಹುತಾತ್ಮರಾಗುತ್ತಿರುವುದಕ್ಕೆ ನಿರ್ಮಲಾ ಸೀತಾರಾಮನ್ ಪರಿಹಾರ ಕಂಡುಕೊಳ್ಳಬೇಕಾಗಿದೆ ಎನ್ನುವ ಟ್ವೀಟ್.

ಶಸ್ತ್ರಾಸ್ತ್ರ ಖರೀದಿ ಹಗರಣ ಮುಕ್ತವಾಗಿರಲಿ

ನಿರ್ಮಲಾ ಸೀತಾರಾಮನ್ ಅವರ ಪ್ರೊಫೈಲ್. ಶಸ್ತ್ರಾಸ್ತ್ರ ಖರೀದಿ, ಹಗರಣ ಮುಕ್ತವಾಗಿರಲಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+