ಛತ್ತೀಸ್ ಗಢದಲ್ಲಿ ನಕ್ಸಲ್ ದಾಳಿ: ಯೋಧರ ಸಾವಿನ ಸಂಖ್ಯೆ 12ಕ್ಕೆ ಏರಿಕೆ
ಛತ್ತೀಸ್ ಗಢದ ಸುಖ್ಮಾ ಜಿಲ್ಲೆಯ ಭೇಜ್ಜದಲ್ಲಿ ಶನಿವಾರ ನಕ್ಸಲರು ನಡೆಸಿದ ದಾಳಿಯಲ್ಲಿ 11 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಛತ್ತೀಸ್ ಗಢ, ಮಾರ್ಚ್. 11 : ಪಂಚರಾಜ್ಯಗಳ ಚುನಾವಣೆ ಫಲಿತಾಂಶ ದಿನದಂದು ಛತ್ತೀಸ್ ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ.
ಛತ್ತೀಸ್ ಗಢದ ಸುಖ್ಮಾ ಜಿಲ್ಲೆಯ ಭೇಜ್ಜದಲ್ಲಿ ಶನಿವಾರ ನಕ್ಸಲರು ನಡೆಸಿದ ದಾಳಿಯಲ್ಲಿ ಈ ಮೊದಲು ಹನ್ನೊಂದು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.
ಇದೀಗ ಬಂದ ಮಾಹಿತಿ ಗಂಭೀರವಾಗಿ ಗಾಯಗೊಂಡಿದ್ದವರ ಪೈಕಿ ಮತ್ತೊಬ್ಬ ಯೋಧ ಅಸುನೀಗಿದ್ದಾನೆ ಎಂದು ತಿಳಿದು ಬಂದಿದೆ. ಇದರಿಂದ ಯೋಧರ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

Prime Minister Narendra Modi offers condolences to the families of CRPF personnel killed in Sukma Maoist attack. pic.twitter.com/XpyDXdpfbF
— ANI (@ANI_news) March 11, 2017
ನಕ್ಸಲ್ ದಾಳಿಯಲ್ಲಿ ಸಾವನ್ನಪ್ಪಿರುವ ವೀರ ಯೋಧರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಸಾಂತ್ವನ ಹೇಳಿದ್ದಾರೆ.
Sukma Maoist attack: Two more CRPF jawans succumb to injuries, taking the death toll to 11 #Chhattisgarh
— ANI (@ANI_news) March 11, 2017












Click it and Unblock the Notifications