ಪುಲ್ವಾಮಾ ದಾಳಿ ಬಗ್ಗೆ ಜೈಷ್ ಉಗ್ರನಿಂದ ಹೊರಬಿತ್ತು ಸ್ಫೋಟಕ ಮಾಹಿತಿ

ನವದೆಹಲಿ, ಫೆಬ್ರವರಿ 29: ಪುಲ್ವಾಮಾ ದಾಳಿಗೆ ಬೇಕಾದ ಸ್ಫೋಟಕಗಳನ್ನು ಉಗ್ರರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

ಎನ್‌ಐಎ ಬಂಧಿಸಿರುವ ಜೈಷ್ ಉಗ್ರನ ವಿಚಾರಣೆ ಸಂದರ್ಭದಲ್ಲಿ ಈ ಮಾಹಿತಿ ಲಭ್ಯವಾಗಿದೆ.40 ಯೋಧರು ಹುತಾತ್ಮರಾದ ಪುಲ್ವಾಮ ಕಹಿ ಘಟನೆಗೆ ಇತ್ತೀಚೆಗಷ್ಟೇ ಒಂದು ವರ್ಷ ತುಂಬಿತ್ತು.

ಪಾಕಿಸ್ತಾನ ಮೂಲದ ಜೈಷ್​-ಎ-ಮೊಹ್ಮದ್​ ಸಂಘಟನೆಯ ಶಕೀರ್​ ಬಶೀರ್​ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿ ವಿಚಾರಣೆ ನಡೆಸಿತ್ತು. ಈ ವೇಳೆ ಆತ ಶಾಕಿಂಗ್​ ವಿಚಾರ ಬಿಚ್ಚಿಟ್ಟಿದ್ದಾನೆ.

NIA Says Explosives For IED Used In Pulwama Attack

ಬಶೀರ್​ಗೆ 22 ವರ್ಷ ವಯಸ್ಸು. ಈತ ಅತ್ಯಾಧುನಿಕ ಬಾಂಬ್​ ತಯಾರಿಸಲು ಅಗತ್ಯವಿದ್ದ ಬ್ಯಾಟರಿ ಹಾಗೂ ಅಮೋನಿಯಂ ನೈಟ್ರೇಟ್ ​ಅನ್ನು ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ. ಬಾಂಬ್​ ತಯಾರಿಸಿ ಅದನ್ನು ಕಾರಿನಲ್ಲಿ ಇರಿಸಿ, ಡ್ರೈವರ್​ ಪಕ್ಕದ ಸೀಟ್​ನಲ್ಲಿ ಕೂತಿದ್ದ. ಆದಿಲ್​ ಅಹ್ಮದ್​ ಕಾರು ಚಲಾಯಿಸುತ್ತಿದ್ದ.

ಬಾಂಬ್​ ತಯಾರಿಸಲು ಬೇಕಾದ ಬಹುತೇಕ ವಸ್ತುಗಳನ್ನು ಆನ್​ಲೈನ್​ ಮೂಲಕವೇ ಆರ್ಡರ್​ ಮಾಡಲಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ. ಕಾರು ಸ್ಫೋಟಗೊಳ್ಳುವುದಕ್ಕೂ 500 ಮೀಟರ್​ ದೂರದಲ್ಲೇ ಬಶೀರ್​ ಇಳಿದುಕೊಂಡಿದ್ದ.

ಈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಕಮ್ರಾನ್​ ಹೆಸರಿನ ಉಗ್ರನೂ ಭಾಗಿಯಾಗಿದ್ದ ಎಂದು ಎನ್​ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+