NHAI: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಗುರಿ ತಲುಪದ ಭಾರತ

ನವದೆಹಲಿ, ಫೆಬ್ರವರಿ 12: ಭಾರತ ಅಭಿವೃದ್ಧಿ ಹೊಂದಿರುತ್ತಿರುವ ರಾಷ್ಟ್ರವಾಗಿದ್ದ ಜನಸಂಖ್ಯೆ ಹೆಚ್ಚಾಗುತ್ತಿದೆ. ಸಾರಿಗೆ ರಸ್ತೆ ಮೂಲಸೌಕರ್ಯದ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂಬಂಧ ಲಕ್ಷಾಂತರ ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿ ಯೋಜನೆ ರೂಪಿಸಲಾಗಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧನೆ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತ ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ರಸ್ತೆಗಳ ಅಭಿವೃದ್ಧಿಯನ್ನು ಭಾರತೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI)ದ ಮುಖೇನ ಮಾಡುತ್ತದೆ. ಅದರ ನಿರ್ವಹಣೆಯನ್ನು ಪ್ರಾಧಿಕಾರ ನೋಡಿಕೊಳ್ಳುತ್ತದೆ. ಹಾಗಾದರೆ ಕಳೆದ ಒಂದು ವರ್ಷದಲ್ಲಿ ಯೋಜನೆ ಪೈಕಿ ಗುರಿಯಲ್ಲಿ ಭಾರತ ಕೇವಲ ಶೇಕಡಾ 45 ರಷ್ಟು ಮಾತ್ರ ಪ್ರಗತಿ ಕಂಡಿದೆ.

NHAI: Indias National Highways Development Slow Down: Only Reached 45 Percent of Target

2.16 ಲಕ್ಷ ಕೋಟಿ ರೂ ವೆಚ್ಚದ ಯೋಜನೆ

ವಿವರವಾಗಿ ನೋಡುವದಾದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಒಂದು ವರ್ಷದಲ್ಲಿ 13,800 ಕಿಲೋ ಮೀಟರ್ ಹೆದ್ದಾರಿ ನಿರ್ಮಾಣದ ಗುರಿಯಲ್ಲಿ ಶೇ.45ರಷ್ಟು ಮಾತ್ರ ಪೂರ್ಣಗೊಂಡಿದೆ. ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 2.16 ಲಕ್ಷ ಕೋಟಿ ರೂಪಾಯಿಗಳ ದಾಖಲೆ ಮಟ್ಟದ ಬಂಡವಾಳ ವ್ಯಯಿಸಿದೆ.

ಲೈವ್‌ಮಿಂಟ್ ವರದಿಯ ಪ್ರಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಮಾಹಿತಿಯು ಭಾರತವು ಏಪ್ರಿಲ್-ಡಿಸೆಂಬರ್ 2023 ರಲ್ಲಿ 6,216 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ಸೇರಿಸಿದೆ ಎಂದು ಹೇಳಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ 13,800 ಕಿಲೋ ಮೀಟರ್ ನಿರ್ಮಾಣ ಗುರಿಯಲ್ಲಿ ಕೇವಲ ಶೇ.45 ಮಾತ್ರ ಗುರಿ ತಲುಪಿದ್ದೇವೆ ಎಂಬ ಅಂಶ ಬೆಳಕಿಗೆ ಬಂದಿದೆ.

NHAI: Indias National Highways Development Slow Down: Only Reached 45 Percent of Target

2022ರಲ್ಲಿ ನಿರ್ಮಾಣವಾದ ಹೆದ್ದಾರಿ ಮಾಹಿತಿ

ಯಾವುದೇ ಯೋಜನೆ ಕೈಗೊಂಡಾಗ ನಿರ್ಮಾಣದ ಕೆಲಸಗಳು ನಿಧಾನವಾಗುವುದು ಇದೇ ಮೊದಲೇನಲ್ಲ. ಕೇಂದ್ರ ಸಚಿವಾಲಯವು 12,500 ಕಿಮೀ ಗುರಿ ತಲುಪಿದ್ದರೂ, ಸರ್ಕಾರವು 2022ರ ಆರ್ಥಿಕ ವರ್ಷದಲ್ಲಿ 10,457 ಕಿಮೀ ಹಾಗೂ 2023 ರಲ್ಲಿ 10,331 ಕಿಮೀ ರಸ್ತೆಗಳನ್ನು ಮಾತ್ರ ನಿರ್ಮಾಣ ಮಾಡಿದೆ. ಇನ್ನೂ ಈ ವರ್ಷ 2024ರಲ್ಲಿ ಗುರಿ 13,800 ಕಿಲೋ ಮೀಟರ್ ಹೆದ್ದಾರಿ ನಿರ್ಮಾಣದ ಗುರಿ ಹೊಂದಿದ್ದೇವೆ.

ಈ ವರ್ಷ ಭಾರತವು 6,216 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು ಸೇರಿಸಿದೆ. ಇದರ ಹೊರತಾಗಿಯೂ ಕಳೆದ ವರ್ಷ 2023 ರ ವೇಳೆಗೆ ಅಂದರೆ ಡಿಸೆಂಬರ್ 2023ರ ವರ್ಷಾಂತ್ಯಕ್ಕೆ ವರದಿಯೊಂದು ದಾಖಲಾಗಿದೆ. ಆದರ ಪ್ರಕಾರ ಒಟ್ಟು ಗುರಿ ಪೈಕಿ ಸುಮಾರು 5,744 ಕಿಲೋ ಮೀಟರ್ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

ಪ್ರಸಕ್ತ ವರ್ಷದ ಹೆದ್ದಾರಿ ಅಂದಾಜು ವೆಚ್ಚ, ವಿವರ

ಮೂಲಗಳ ಪ್ರಕಾರ ಕೇಂದ್ರ ಸರ್ಕಾರ, ತನ್ನ ಬಂಡವಾಳ ವೆಚ್ಚವನ್ನು 2,15,910 ಕೋಟಿ ರೂಪಾಯಿಗಳಿಗೆ ಅಥವಾ ಪ್ರಸಕ್ತ ಆರ್ಥಿಕ ವರ್ಷ (FY2024) ಕ್ಕೆ 2,58,606 ಕೋಟಿ ರೂಪಾಯಿಗಳ ದಾಖಲೆಯ ಹೆಚ್ಚಿನ ಬಂಡವಾಳ ಹೆಚ್ಚಿಸಿದೆ. ಅಂದರೆ ಕಾಲಕಾಲಕ್ಕೆ ತಕ್ಕಂತೆ ವೆಚ್ಚ ಹೆಚ್ಚಾಗುವ ಕಾರಣ ಶೇಕಡಾ 83.49 ಏರಿಸಿದರೂ ಸಹಿತ ಕಾಮಗಾರಿಗಳು ನಿಧಾನವಾಗಿದ್ದು ಕಂಡು ಬಂದಿದೆ.

ವಿವಿಧ ಚುನಾವಣೆಯ ಮೊದಲು ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಹೆದ್ದಾರಿ ನಿರ್ಮಾಣದ ವೇಗವು ಕ್ರಮೇಣ ನಿಧಾನವಾಗಿ ಸಾಗಿತು ಎಂದು ರೇಟಿಂಗ್ ಏಜೆನ್ಸಿ ICRA ನೀಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ರೀತಿ ನಿಧಾನಗತಿಯಲ್ಲಿ ಸಾಗಿದರೆ ಮುಂಬರಲಿರುವ ಲೋಕಸಭೆ 2024 ಚುನಾವಣೆ ಹೊತ್ತಿಗೆ ಪ್ರತಿ ನಿತ್ಯ 80 ಕಿಲೋ ಮೀಟರ್ ಹೆದ್ದಾರಿ ನಿರ್ಮಿಸಿ ಗರಿಷ್ಠ ಗುರಿ ತಲುಪುವುಸ ಕಷ್ಟವಾಗಲಿದೆ ಎಂದು ವರದಿ ತಿಳಿಸಿವೆ. ವಿವಿಧ ವರದಿಗಳ ಬಳಿಕ ಕೇಂದ್ರವು ಅಗತ್ಯ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+