NHAI: ಬೆಂಗಳೂರು-ಕಡಪ-ವಿಜಯವಾಡ ಕಾರಿಡಾರ್ ರಸ್ತೆ ನಿರ್ಮಾಣದಲ್ಲಿ 4 ಗಿನ್ನೆಸ್ ದಾಖಲೆ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಷ್ಟ್ರೀಯ ಹೆದ್ದಾರಿ-544Gಯ ಬೆಂಗಳೂರು-ಕಡಪ-ವಿಜಯವಾಡ ಎಕನಾಮಿಕ್ ಕಾರಿಡಾರ್ ಕಾಮಗಾರಿಯಲ್ಲಿ ನಾಲ್ಕು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ಈ ತಿಂಗಳ 6ರಂದು ಆಂಧ್ರಪ್ರದೇಶದ ಪುಟ್ಟಪರ್ತಿ ಬಳಿ ಹೆದ್ದಾರಿ ಪ್ರಾಧಿಕಾರವು ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಮಾಡಿದೆ. ಈಗ ತನ್ನದೇ ದಾಖಲೆಗಳನ್ನು ಮುರಿದು ಮತ್ತೆರಡು ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ.
ಮೊದಲನೆಯದು 3-ಲೇನ್ ಅಗಲದ 9.63 ಕಿಲೋಮೀಟರ್ ಉದ್ದದ ವಿಭಾಗವನ್ನು ಕೇವಲ 24 ಗಂಟೆಗಳಲ್ಲಿ ಕ್ರಮಿಸಿ ಬಿಟುಮಿನಸ್ ಕಾಂಕ್ರೀಟ್ ಅನ್ನು ಅತಿ ಹೆಚ್ಚು ಕಾಲ ನಿರಂತರವಾಗಿ ಹಾಕುವ ದಾಖಲೆಯಾಗಿದೆ. ಎರಡನೇ ದಾಖಲೆಯನ್ನು 24 ಗಂಟೆಗಳಲ್ಲಿ ಅತ್ಯಧಿಕ ಪ್ರಮಾಣದ 10 ಸಾವಿರ 655 ಮೆಟ್ರಿಕ್ ಟನ್ ಬಿಟುಮಿನಸ್ ಕಾಂಕ್ರೀಟ್ ಅನ್ನು ನಿರಂತರವಾಗಿ ಹಾಕುವ ಮೂಲಕ ರಚಿಸಲಾಗಿದೆ.

ಈ ಕಾರಿಡಾರ್‌ನಲ್ಲಿ ಆರು ಪಥಗಳ ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿಯಲ್ಲಿ ಜಾಗತಿಕವಾಗಿ ಮೊದಲ ಬಾರಿಗೆ ಎರಡೂ ದಾಖಲೆಗಳನ್ನು ಸ್ಥಾಪಿಸಲಾಯಿತು. ಇದರ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತಾ ಇಂದು ಎರಡು ಹೆಚ್ಚುವರಿ ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ಇವುಗಳಲ್ಲಿ 57 ಸಾವಿರ 500 ಮೆಟ್ರಿಕ್ ಟನ್ ಬಿಟುಮಿನಸ್ ಕಾಂಕ್ರೀಟ್ ಅನ್ನು ನಿರಂತರವಾಗಿ ಹಾಕುವುದು ಮತ್ತು 3-ಪಥದ, ಅಗಲವಾದ 52-ಕಿಲೋಮೀಟರ್ ವಿಭಾಗದ ನಿರಂತರ ನೆಲಗಟ್ಟಿನ ದಾಖಲೆ ಸೇರಿವೆ.
ಬಿಟ್ಯುಮಿನಸ್ ಕಾಂಕ್ರೀಟ್ ಹಾಕುವುದರಲ್ಲಿ ದಾಖಲೆ
ಸುಮಾರು 343 ಕಿಮೀ ಉದ್ದದ, ಪ್ರವೇಶ-ನಿಯಂತ್ರಿತ ಆರು ಪಥಗಳ ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್ ಅನ್ನು ಸುರಕ್ಷಿತ, ಅತಿ ವೇಗದ ಮತ್ತು ಪ್ರಯಾಣದ ಅನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಐತಿಹಾಸಿಕ ಸಾಧನೆ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ಹಂಚಿಕೊಂಡಿದ್ದಾರೆ. ಹೆದ್ದಾರಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿರುವ ಎನ್‌ಎಚ್‌ಎಐ ನಿರಂತರ ಬಿಟ್ಯುಮಿನಸ್ ಕಾಂಕ್ರೀಟ್ ಪೇವಿಂಗ್‌ನಲ್ಲಿ ಎರಡು ಹೊಸ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗಳನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
Setting new global benchmarks in highway engineering 🛣️, NHAI has created history by achieving two more Guinness World Records in continuous Bituminous Concrete paving.
— Nitin Gadkari (@nitin_gadkari) January 11, 2026
A record 156 lane-km of paving and 57,500 MT of Bituminous Concrete were laid continuously, surpassing the… pic.twitter.com/L1qP1R1f0B
ಈ ದಾಖಲೆಯು ಒಂದೇ ನಿರಂತರ ಪ್ರಕ್ರಿಯೆಯಲ್ಲಿ 156 ಲೇನ್-ಕಿಲೋಮೀಟರ್ ರಸ್ತೆ ನಿರ್ಮಾಣ ಹಾಗೂ 57,500 ಮೆಟ್ರಿಕ್ ಟನ್ ಬಿಟ್ಯುಮಿನಸ್ ಕಾಂಕ್ರೀಟ್ ಹಾಸಲಾಗಿದೆ. ಇದರಿಂದ ಹಿಂದಿನ ಜಾಗತಿಕ ದಾಖಲೆಯಾಗಿದ್ದ 84.4 ಲೇನ್-ಕಿಲೋಮೀಟರ್ ದಾಖಲೆಯನ್ನು ಮುರಿದಿದ್ದೇವೆ. ಈ ಮಹತ್ವದ ಸಾಧನೆಯನ್ನು ಬೆಂಗಳೂರು-ಕಡಪ-ವಿಜಯವಾಡ 6 ಲೇನ್ ಎಕನಾಮಿಕ್ ಕಾರಿಡಾರ್‌ನ ಪ್ಯಾಕೇಜ್-2 ಮತ್ತು ಪ್ಯಾಕೇಜ್-3 ಭಾಗಗಳಲ್ಲಿ ಪುಟ್ಟಪರ್ತಿಯ ಸಮೀಪ ಸಾಧಿಸಲಾಗಿದೆ. ಅತ್ಯಾಧುನಿಕ ಯಂತ್ರೋಪಕರಣಗಳ ಬಳಕೆ, ಬಲಿಷ್ಠ ಲಾಜಿಸ್ಟಿಕ್ಸ್ ವ್ಯವಸ್ಥೆ ಹಾಗೂ ಕಠಿಣ ಗುಣಮಟ್ಟ ನಿಯಂತ್ರಣ ಕ್ರಮಗಳು ಈ ದಾಖಲೆಗೆ ಪ್ರಮುಖ ಕಾರಣವಾಗಿವೆ. ಈ ಕಾರ್ಯದಲ್ಲಿ ಐಐಟಿ ಬಾಂಬೆ ಸೇರಿದಂತೆ ಪ್ರಮುಖ ತಾಂತ್ರಿಕ ಸಂಸ್ಥೆಗಳ ಬೆಂಬಲವೂ ಲಭಿಸಿದೆ ಎಂದು ನಿತಿನ್ ಗಡ್ಕರಿ ವಿವರಿಸಿದ್ದಾರೆ.
ತನ್ನದೇ ದಾಖಲೆ ಮುರಿದ NHAI
ಇದು ಮೊದಲ ದಾಖಲೆ ಅಲ್ಲ. ಇದಕ್ಕೂ ಮುನ್ನ ಜನವರಿ 6ರಂದು ಇದೇ ಕಾರಿಡಾರ್‌ನಲ್ಲಿ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಎರಡು ಜಾಗತಿಕ ದಾಖಲೆಗಳನ್ನು ನಿರ್ಮಿಸಿತ್ತು. ಆ ದಿನ ಕೇವಲ 24 ಗಂಟೆಗಳಲ್ಲಿ 28.8 ಲೇನ್-ಕಿಲೋಮೀಟರ್ ರಸ್ತೆ ಹಾಗೂ 10,655 ಮೆಟ್ರಿಕ್ ಟನ್ ಬಿಟ್ಯುಮಿನಸ್ ಕಾಂಕ್ರೀಟ್ ಪೇವಿಂಗ್ ಮಾಡಲಾಗಿತ್ತು. ಈ ಮೂಲಕ ಅಲ್ಪ ಸಮಯದಲ್ಲಿ ಭಾರೀ ಪ್ರಮಾಣದ ರಸ್ತೆ ನಿರ್ಮಾಣ ಕಾರ್ಯ ಸಾಧ್ಯ ಎಂಬುದನ್ನು ಭಾರತ ಜಗತ್ತಿಗೆ ತೋರಿಸಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದ ಅಡಿಯಲ್ಲಿ ಇಂತಹ ಸಾಧನೆಗಳು ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುತ್ತಿವೆ ಎಂದು ನಿತಿನ್ ಗಡ್ಕರಿ ಅವರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವಮಟ್ಟದ ಹೆದ್ದಾರಿ ನಿರ್ಮಾಣ, ದೊಡ್ಡ ಪ್ರಮಾಣದ ಯೋಜನೆಗಳ ವೇಗದ ಅನುಷ್ಠಾನ ಹಾಗೂ ತಾಂತ್ರಿಕ ಸಾಮರ್ಥ್ಯದ ದೃಷ್ಟಿಯಿಂದ ಭಾರತ ಇಂದು ಜಾಗತಿಕ ನಾಯಕತ್ವದತ್ತ ಮುನ್ನುಗ್ಗುತ್ತಿದೆ ಎಂಬುದನ್ನು ಈ ಗಿನ್ನೆಸ್ ದಾಖಲೆಗಳು ಸ್ಪಷ್ಟಪಡಿಸುತ್ತವೆ ಎಂದಿದ್ದಾರೆ.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್











Click it and Unblock the Notifications